ಪುತ್ತೂರು: ಹಿರಿಯರ ಆರೋಗ್ಯ ಉತ್ತಮವಾಗಿತ್ತು. ಇದಕ್ಕೆ ಪ್ರಮುಖ ಕಾರಣ ಆಹಾರ ವ್ಯವಸ್ಥೆ. ಇಂದು ಬದಲಾದ ವ್ಯವಸ್ಥೆಯಲ್ಲಿ ಆಹಾರ ಪದ್ಧತಿ ಬದಲಾಗಿದೆ, ಹೀಗಾಗಿ ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ. ಹೀಗಾಗಿ ಇಂದು ವಿಷ ಮುಕ್ತ ಆಹಾರ ಅಗತ್ಯವಾಗಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ನಟರಾಜ ವೇದಿಕೆಯಲ್ಲಿ ಎರಡು ದಿನಗಳ ಕಾಲ ನವಚೇತನ ಸ್ನೇಹ ಸಂಗಮ ಹಾಗೂ ಜೇಸಿಐ ಪುತ್ತೂರು ವತಿಯಿಂದ ನಡೆದ ಸಾವಯವ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಎಲ್ಲರ ಬದುಕು ವಿಷ ಮುಕ್ತವಾಬೇಕು. ವಿಷ ರಹಿತವಾಗಬೇಕು. ಆದಾಯ ಹೆಚ್ಚಾಗಬೇಕು ಎಂಬ ಕಾರಣದಿಂದ ಮಣ್ಣು ವಿಷವಾಯ್ತು. ಈಗ ಮತ್ತೆ ಬದಲಾಗಬೇಕಿದೆ. ವಿಷ ರಹಿತ ಗಾಳಿ, ನೀರು ವಿಷ ರಹಿತವಾಗಬೇಕು. ಇದಕ್ಕಾಗಿ ಪ್ರಯತ್ನ ಬೇಕು. ಆಹಾರ ಪದ್ಧತಿ ಬದಲಾಗಬೇಕು. ಸಾವಯವ ಕೃಷಿಯಿಂದ ಇದು ಸಾಧ್ಯವಿದೆ ಎಂದರು.
ಅತಿಥಿಯಾಗಿದ್ದ ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮಸುದರ್ಶನ ಪೂರ್ವಜರು ಬಳಸುತ್ತಿದ್ದ ವಸ್ತುಗಳು ಸಾವಯವವೇ ಆಗಿತ್ತು. ಹೀಗಾಗಿ ರೋಗಮುಕ್ತ ಬದುಕಾಗಿತ್ತು. ಈಗ ಕಾಲಬದಲಾಗಿದೆ. ಹೀಗಾಗಿ ಇಂದು ವಿಷಮುಕ್ತ ಆಹಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಇಂತಹ ಕಾರ್ಯಕ್ರಮಗಳ ಕಡೆಗೆ ಬೆಳಕು ಚೆಲ್ಲಬೇಕಾದ ಅವಶ್ಯಕತೆ ಇದೆ ಎಂದರು.
ಜೇಸಿಐ ಪುತ್ತೂರು ಕಾರ್ಯದರ್ಶಿ ಪ್ರಮಿತಾ ಸಿ ಹಾಸ್ ಸಮಾರೋಪ ಭಾಷಣ ಮಾಡಿದರು. ಜೇಸೀ ವಲಯ15 ರ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾದ ಅಶ್ವಿನ್ ಐತಾಳ್ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಮಾತನಾಡಿ ಸಾವಯವ ಹಬ್ಬಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಿವಾಗಿದೆ. ಮುಂದೆ ಹಣ್ಣು ಮೇಳ, ಹಲಸು ಮೇಳದಂತಹ ಕಾರ್ಯಕ್ರಮದ ಮೂಲಕ ಕೃಷಿಕರಿಗೆ ಹಾಗೂ ಜನತೆಗೆ ವೇದಿಕೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಬಿ ಎಸ್ ಸುಬ್ರಾಯ ಹಾಗೂ ತುಳಸಿ ದಂಪತಿಗಳನ್ನು ಗೌರವಿಸಲಾಯಿತು.
ಜೇಸಿರೆಟ್ ಅಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ ಸ್ವಾಗತಿಸಿದರು. ನವಚೇತನ ಸ್ನೇಹಸಂಗಮ ಕೋಶಾಧಿಕಾರಿ ಪ್ರಕಾಶ್ ಕೊಡೆಂಕಿರಿ ವಂದಿಸಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹಾಗೂ ಪತ್ರಕರ್ತ ನಾ.ಕಾರಂತ ಪೆರಾಜೆ ನಿರೂಪಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…