ಸುದ್ದಿಗಳು

ಜು.30 ರಿಂದ ಆನ್‌ಲೈನ್ ಮೂಲಕ 9 ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇಂದು ಭಾರತ ಒಂದು ಸೂಕ್ಷ್ಮ ತಿರುವಿನಲ್ಲಿ ನಿಂತಿದೆ. ದೇಶದ ಮೇಲೆ ಅಂತರ-ಬಾಹ್ಯದಿಂದಲೂ ಸಂಕಟಗಳ ಮಾಲಿಕೆ ಪ್ರಾರಂಭವಾಗಿದೆ. ಇಂತಹ ಪರಿಸ್ಥಿತಿ ಸ್ವತಂತ್ರ ಭಾರತದಲ್ಲಿ ಎಂದಿಗೂ ಬಂದಿರಲಿಲ್ಲ.

Advertisement

ಒಂದೆಡೆ ದೇಶದಲ್ಲಿ ಕೊರೋನಾ ಪಿಡುಗು ತಾಂಡವವಾಡುತ್ತಿದೆ. ಈ ಪಿಡುಗನ್ನು ತಡೆಗಟ್ಟಲು ಭಾರತ ಸರಕಾರ ಇನ್ನಿಲ್ಲದ  ಪ್ರಯತ್ನ ಮಾಡುತ್ತಿದೆ. ಕಳೆದ 4 ತಿಂಗಳಿನಿಂದ ದೇಶದಲ್ಲಿ ಲಾಕ್‌ಡೌನ್ ಇದೆ.  ಎಲ್ಲ ವ್ಯವಸ್ಥೆಗಳು ಸಕ್ರಿಯವಿದ್ದರೂ ಅಪೇಕ್ಷಿತವಿರುವಂತೆ ಯಶಸ್ಸು ದೊರೆಯುತ್ತಿರುವಂತೆ ಕಾಣಿಸುತ್ತಿಲ್ಲ. ಈ ರೀತಿಯ ಆರೋಗ್ಯ ಸಮಸ್ಯೆಯು ದೇಶಾದ್ಯಂತ ಕೋಟ್ಯವಧಿ ಜನತೆಗೆ ಕೆಲಸವಿಲ್ಲದಂತೆ ಮಾಡಿರುವುದರಿಂದ  ಅರ್ಥವ್ಯವಸ್ಥೆ  ಹದಗೆಟ್ಟಿದೆ. ನಿರುದ್ಯೋಗ  ಸಮಸ್ಯೆ ಹೆಚ್ಚಳವಾಗಿದ್ದು,  ಅಭಿವೃದ್ಧಿಯ ವೇಗ ಸ್ಥಗಿತಗೊಂಡಿದೆ.  ಇಂತಹ ಪರಿಸ್ಥಿತಿಯಲ್ಲಿಯೇ ದೇಶದ ಮೇಲೆ ಬಾಹ್ಯ ಆಕ್ರಮಣಗಳು ಪ್ರಾರಂಭವಾಗಿವೆ. ಪಕ್ಕದ ರಾಷ್ಟ್ರ ಚೀನಾ ಭಾರತದ ವಿರುದ್ಧ  ಎದ್ದು ನಿಂತಿದೆ. ಗಲವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ನುಸುಳಿ, ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ  ಭಾರತದ 20 ಸೈನಿಕರು ಹುತಾತ್ಮರಾದರು; ಆದರೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಕೊಂದು, ಅವರಿಗೆ ತಕ್ಕ ಪಾಠ ಕಲಿಸಿದರು. ಇದರಿಂದ ಚೀನಾದ ಅಹಂಕಾರಕ್ಕೆ ಪೆಟ್ಟು ಬಿದ್ದಿತು.

 ಈಗ ಭಾರತಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಹಿಂದೂ ರಾಷ್ಟ್ರವೆಂದು  ಘೋಷಿಸದೇ ಪರ್ಯಾಯವಿಲ್ಲ. ಇದಕ್ಕಾಗಿ ಹಿಂದೂಗಳೇ ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮದ ಉತ್ಥಾನಕ್ಕಾಗಿ ಕಾರ್ಯನಿರತರಾಗಬೇಕಾಗಿದೆ. ಮುಖ್ಯವಾಗಿ ಇದೇ ಕಾರಣಕ್ಕಾಗಿಯೇ ಹಿಂದೂ ಜನಜಾಗೃತಿ ಸಮಿತಿಯು ಕಳೆದ 8 ವರ್ಷಗಳಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ.  ಈ ಬಾರಿ ಕೊರೊನಾ ಸೋಂಕು ಹರಡಿರುವುದರಿಂದ  ಜುಲೈ 30 ರಿಂದ ಪ್ರಾರಂಭವಾಗುವ ಈ ಅಧಿವೇಶನ ಆನ್‌ಲೈನ್ ಇರಲಿದೆ. ಈ ನಿಮಿತ್ತದಿಂದ ದೇಶ-ವಿದೇಶದ ಹಿಂದುತ್ವನಿಷ್ಠರು  ನಿವಾಸದಲ್ಲಿದ್ದುಕೊಂಡೇ ಈ ಅಧಿವೇಶನದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಲಿದ್ದಾರೆ. ಹಾಗೆಯೇ ಒಂದೇ ಸಮಯದಲ್ಲಿ ಸಾವಿರಾರು ಹಿಂದುತ್ವನಿಷ್ಠರು, ರಾಷ್ಟ್ರಾಭಿಮಾನಿಗಳು, ಧರ್ಮಾಭಿಮಾನಿಗಳು, ಜಿಜ್ಞಾಸುಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.  ಅಧಿವೇಶನವು  ಜುಲೈ 30 ರಿಂದ 2 ಆಗಸ್ಟ್ ಹಾಗೂ 6 ರಿಂದ 9 ಆಗಸ್ಟ್  ವರೆಗೆ ಜರುಗಲಿದೆ.

ಅಧಿವೇಶನವು ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಫೇಸಬುಕ್ ಪೇಜ್ ಮತ್ತು ‘ಯು-ಟ್ಯೂಬ್ ಚಾನಲ್ ಮೇಲೆ ನೋಡಬಹುದಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ  ರಮೇಶ ಶಿಂದೆ ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ

ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…

19 hours ago

ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌

ಹಲಸಿನ ಬೇಳೆ ಸೂಪ್‌ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…

22 hours ago

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…

23 hours ago

ಪ್ರೇಮ ವಿಚಾರದಲ್ಲಿ ಈ ರಾಶಿಯವರಿಗೆ ಭಾವನಾತ್ಮಕ ಏರಿಳಿತ

ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…

23 hours ago

ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!

ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…

1 day ago

ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ

ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ…

1 day ago