ಉಜಿರೆ: ಧರ್ಮಸ್ಥಳದಲ್ಲಿ ಬುಧವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.
ಹೆಗ್ಗಡೆಯವರ ನಿವಾಸದಿಂದ (ಬೀಡಿನಿಂದ) ಸಂಜೆ ಏಳು ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹೋತ್ಸವ ಸಭಾ ಭವನಕ್ಕೆ ಹೋದ ಬಳಿಕ ಅಲ್ಲಿ ಪಂಚ ನಮಸ್ಕಾರ ಮಂತ್ರ ಪಠಣ, ಸಮವಸರಣ ಪೂಜಾ ಮಂತ್ರ ಪಠಣ ಆದ ಮೇಲೆ ಶ್ರಾವಕ-ಶ್ರಾವಿಕೆಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಗಣಧರ ಪರಮೇಷ್ಠಿ ಪೂಜೆ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಯಿತು.
ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತು ಅಭಿಜ್ಞಾ ಹಾಗೂ ಬಳಗದವರು ಪೂಜಾ ಮಂತ್ರ ಪಠಣ ಮಾಡಿದರು. ಕ್ಷುಲ್ಲಕ 105 ಶ್ರೀ ನಿರ್ಮಲ ಸಾಗರ್ಜಿ ಉಪಸ್ಥಿತರಿದ್ದರು.
ಶಿಶಿರ್ ಇಂದ್ರರ ನೇತೃತ್ವದಲ್ಲಿ ನಡೆದ ಅಷ್ಟವಿಧಾರ್ಚನೆ ಸಂಗೀತ ಪೂಜಾ ಮಂತ್ರ ಪಠಣದಲ್ಲಿ ಮಲ್ಲಿನಾಥ್‍ಜೈನ್, ಸೌಮ್ಯಎಸ್. ರಾಜ್, ಅಭಿಜ್ಞಾ ಬಳ್ಳಾಲ್, ಮಂಜುಳಾ, ಎಂ.ಸಾವಿತ್ರಿ ಪುಷ್ಪದಂತ ಹಾಗೂ ಹಿಮ್ಮೇಳದಲ್ಲಿ ಭಗೀರಥ ಮತ್ತು ಶೋಧನ್ ಸಹಕರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು. ಪಾಕ ಪರಿಣತರಾದ ಕನ್ನಡಿಕಟ್ಟೆಯ ರತ್ನರಾಜ ಮತ್ತು ಇರ್ವತ್ತೂರು ಜಯಕೀರ್ತಿ ಜೈನ್ ಅವರನ್ನು ಸನ್ಮಾನಿಸಲಾಯಿತು.
ಮಹಾ ಮಂಗಳಾರತಿ ನಂತರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ತರಲಾಯಿತು. ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…