Advertisement
ಸುದ್ದಿಗಳು

ಪರಿಶಿಷ್ಟ ಪಂಗಡದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

Share

ಮಂಗಳೂರು : 2018-19ನೇ ಸಾಲಿನಲ್ಲಿ  ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡವರ ಅಭಿವೃದ್ಧಿ ಕಾರ್ಯಕ್ರಮಗಳಡಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಾದ ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಸರಕು ಸಾಗಾಣಿಕೆ ವಾಹನ, ಹಂದಿ ಸಾಕಾಣಿಕೆ ಸೌಲಭ್ಯ ಪಡೆಯಲು ಷರತ್ತಿಗೊಳಪಟ್ಟು ಆಸಕ್ತ ಅರ್ಜಿದಾರರಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಆದ್ದರಿಂದ ಮೂಲನಿವಾಸಿ ಮತ್ತು ಅರಣ್ಯ ಅವಲಂಭಿತ ಪರಿಶಿಷ್ಟ ವರ್ಗದವರು ನಿಗಧಿತ ನಮೂನೆಯ ಅರ್ಜಿಯನ್ನು ಸಹಾಯಕ ನಿರ್ದೇಶಕರು, (ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ, ರಸಿಕ್ ಚೇಂಬರ್ಸ್, 3ನೇ ಮಹಡಿ, ಮಾರ್ಕೆಟ್ ರೋಡ್, ಮಂಗಳೂರು ಈ ಕಚೇರಿಯಿಂದ ಪಡೆದು, ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲಾತಿಗೊಂದಿಗೆ ಸೆಪ್ಟಂಬರ್ 16ರೊಳಗಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಷರತ್ತುಗಳು ಇಂತಿವೆ:ಅರ್ಜಿದಾರರು ಕರ್ನಾಟಕದವರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಹಂದಿ ಸಾಕಾಣಿಕೆ ಸೌಲಭ್ಯ ಪಡೆಯುವ ಅರ್ಜಿದಾರರು ವಯಸ್ಸು 18 ರಿಂದ 60 ವರ್ಷದೊಳಗಿರಬೇಕು, ಅರ್ಜಿದಾರರ ವಾರ್ಷಿಕ ಆದಾಯ ರೂ.1.50 ಲಕ್ಷಗಳ ಒಳಗಡೆ ಇರಬೇಕು, ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು, ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಯಾವುದೇ ಯೋಜನೆಯಡಿ ಈ ಹಿಂದೆ ಯಾವುದೇ ಇಲಾಖೆ/ನಿಗಮದಿಂದ ಸೌಲಭ್ಯವನ್ನು ಪಡೆದಿರಬಾರದು, ಪಡೆದ ಘಟಕ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು, ಅರ್ಜಿದಾರರು ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು, ಹೈನುಗಾರಿಕೆ ಮತ್ತು ಕುರಿ, ಮೇಕೆ ಘಟಕಗಳನ್ನು ಮಹಿಳೆಯವರಿಗೆ ಮಾತ್ರ ನೀಡಲಾಗುವುದು, ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದೊಳಗಿರಬೇಕು, ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್(ಲಘು/ಭಾರಿ)ಹೊಂದಿರಬೇಕು, ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶವಾದಲ್ಲಿ ರೂ.1.50ಲಕ್ಷ ಹಾಗೂ ನಗರ ಪ್ರದೇಶವಾದಲ್ಲಿ ರೂ.2 ಲಕ್ಷ ಮಿತಿಯೊಳಗಿರಬೇಕು ಎಂದು ಸಹಾಯಕ ನಿರ್ದೇಶಕರು (ಗ್ರೇಡ್ 1) ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

10 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

18 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

19 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

20 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago