Advertisement
The Rural Mirror ಫಾಲೋಅಪ್

ಮಳೆಕೊಯ್ಲು ಬಾವಿ ಉಳಿಸಿತು – ಕೃಷಿಕನ ಸುಲಭ ಪ್ರಯತ್ನ ಪರಿಣಾಮ ನೀಡಿತು

Share

ಗುತ್ತಿಗಾರು: ಮಳೆನೀರನ್ನು ಬಾವಿಗೆ ಬಿಡುವ ಮೂಲಕ ಬತ್ತಿ ಹೋಗುವ ಬಾವಿಯನ್ನು  ಮತ್ತೆ ಜೀವ ಮಾಡಿರುವ ಯಶೋಗಾಥೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಏರಣಗುಡ್ಡೆ ಬಳಿಯ ಮಲ್ಕಜೆಯ ಬಿಟ್ಟಿ ನೆಡುನೀಲಂ ಅವರದು.

ಕಳೆದ ಕೆಲವು ವರ್ಷಗಳಿಂದ ಅವರು ಮಳೆಕೊಯ್ಲು ಮಾಡುತ್ತಿದ್ದಾರೆ. ಯಾವುದೇ ದೊಡ್ಡ ಸಾಧನಗಳು ಇಲ್ಲದೆ, ತಮ್ಮ ಮನೆಯಲ್ಲೇ ಇರುವ ಸಾಮಾಗ್ರಿ ಬಳಸಿ ಮಳೆನೀರನ್ನು ಸೋಸಿ ಬಾವಿಗೆ ಬಿಡುತ್ತಿದ್ದಾರೆ. ಇದೀಗ ಬಾವಿಯಲ್ಲಿ ನೀರು ಉಳಿದಿದೆ. ಕಳೆದ 2 ವರ್ಷಗಳಲ್ಲಿ  ಬಿಟ್ಟಿ ನೆಡುನೀಲಂ ಅವರ ಈ ಯಶೋಗಾಥೆಯನ್ನು ವಿವಿಧ ಮಾಧ್ಯಮಗಳು ಫೋಕಸ್ ಮಾಡಿತ್ತು. ಮನೆಯ ಟೆರೇಸ್, ಛಾವಣಿ ನೀರನ್ನು 200 ಲೀಟರ್  ಬ್ಯಾರೆಲ್ ಮೂಲಕ ಸೋಸುವಂತೆ ಮಾಡಿ ಶುದ್ಧವಾದ ಬಳಿಕ ಬಾವಿಗೆ ಬಿಡುತ್ತಿದ್ದಾರೆ. ಹಿಂದೆಲ್ಲಾ ಸುಮಾರು ಮಾರ್ಚ್-ಎಪ್ರಿಲ್ ವೇಳೆಗೆ ಬಾವಿಯಲ್ಲಿ ನೀರು ಬರಿದಾಗುತ್ತಿತ್ತು. ಮಳೆಕೊಯ್ಲು ಮಾಡಿದ ಬಳಿಕ ನೀರು ಬತ್ತುವುದಕ್ಕೆ ತಡೆಯಾಗಿದೆ. ಅಲ್ಲದೆ ಬಾವಿಗಿಂತ ಕೆಳಗಿನ ಭಾಗದ ಕೆರೆಯಲ್ಲೂ ನೀರು ಹೆಚ್ಚಾಗಿದೆ ಎನ್ನುತ್ತಾರೆ ಬಿಟ್ಟಿ ನೆಡುನೀಲಂ.  ಬ್ಯಾರೆಲ್ ಒಳಗಡೆ ಜಲ್ಲಿ , ಮಸಿ ಹಾಗೂ ಮರಳನ್ನು  ಹಾಕಿ ನೀರು ಸೋಸುವಂತೆ ಮಾಡಿ ಬಾವಿಗೆ ಬಿಡುತ್ತಾರೆ. ಮಳೆಗಾಲ ಪೂರ್ತಿ ಈ ರೀತಿಯಾಗಿ ಬಾವಿಗೆ ನೀರು ಇಂಗುತ್ತದೆ.  ಈ ಮಾದರಿಯನ್ನು  ಎಲ್ಲಾ ಮನೆಗಳಲ್ಲೂ ಮಾಡಬಹುದಾಗಿದೆ.

 

ನಿಮಗೆ ತಿಳಿದಿರುವ ಮಳೆ ಕೊಯ್ಲು , ಜಲಸಂರಕ್ಷಣೆಯ ಸುಲಭ ಉಪಾಯಗಳನ್ನು , ಕೃಷಿಕರ ಮಾದರಿಗಳನ್ನು , ಸಣ್ಣ ಖರ್ಚಿನಲ್ಲಿ  ಮಾಡಬಹುದಾದ , ಮಾಡಿರುವ ಉದಾಹರಣೆಗಳು, ಯಾವುದೇ ಉಪಕರಣಗಳು ಇಲ್ಲದೆ ಮಾಡಬಹುದಾದ ಪ್ರಯತ್ನಗಳು ಇದ್ದರೆ ನಮಗೆ  ಇಮೈಲ್ ಅಥವಾ ವ್ಯಾಟ್ಸಪ್ ಮಾಡಿ ( sullianews@gmail.com ಅಥವಾ 9449125447 )  ತಿಳಿಸಿ. ನಾವು ಸಮಾಜಕ್ಕೆ ತಿಳಿಸುತ್ತೇವೆ. 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

23 hours ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

1 day ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

1 day ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

2 days ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

2 days ago