Advertisement
ಮಾಹಿತಿ

ಮಳೆಯೊಂದಿಗಿನ ಮಾತು ಇಲ್ಲಿದೆ…

Share

ಸುಳ್ಯ: ಮಳೆ ಹಾಗೂ ಪರಿಸರದ ಕುತೂಹಲಕಾರಿ ಸಂಗತಿಗಳು ಸಾಕಷ್ಟಿವೆ. ನಿತ್ಯವೂ ಪರಿಸರವನ್ನು , ನೀರಿನ ಹರಿವು , ಮಳೆ ವೀಕ್ಷಣೆ ಮಾಡುವುದು ಅನೇಕ ಹೊಸ ಹೊಸ ಸಂಗತಿಯನ್ನು  ತೆರೆದಿಡುತ್ತದೆ.

 

ಹೀಗೇ ಪರಿಸರವನ್ನು ವಾಚ್ ಮಾಡುವವರು ಅನೇಕರು ಇದ್ದಾರೆ. ಮಳೆ , ಹವಾಮಾನದ ಬಗ್ಗೆ  ಅನುಭವದ ಆಧಾರದಿಂದ ನಿಖರವಾಗಿ  ಹೇಳುವವರು ಕೆಲವರು ಇದ್ದಾರೆ. ಹವಾಮಾನ ಎಷ್ಟೊಂದು ಬದಲಾಗುತ್ತದೆ ಎಂದರೆ ದೂರದ ಎಲ್ಲೋ ಆಗಿರುವ ಸಣ್ಣ ಬದಲಾವಣೆಯೂ ಸುಳ್ಯದಲ್ಲೂ ಪರಿಣಾಮ ಕೊಡುತ್ತದೆ. ಹೀಗೇ ಮಳೆಯ ಬಗ್ಗೆಯೇ ಸದಾ ದಾಖಲೆ ಇರಿಸಿ ಮಾತನಾಡುವವರು ಬಾಳಿಲದ ಪಿ ಜಿಎಸ್ ಎನ್ ಪ್ರಸಾದ್. ಅವರು ಮಳೆಯೊಂದಿಗೆ ಮನಸ್ಸಿನಲ್ಲಿ  ಮಾತನಾಡಬಲ್ಲರು.  ಹೀಗಾಗಿ ಇದು ಮಳೆಯೊಂದಿಗಿನ ಮಾತುಕತೆ.

 

ಈಗ ಮಳೆ ನಕ್ಷತ್ರ ರೋಹಿಣಿ ಕಳೆದು ಮೃಗಶಿರಾ ಆರಂಭವಾಗಿದೆ. ಹಾಗಿದ್ದರೆ ರೋಹಿಣಿ ನಕ್ಷತ್ರದಲ್ಲಿ ಬಿದ್ದ ಮಳೆಯ ಮಾತುಕತೆ ಹೀಗಿದೆ.

ಮೇ 25 ರಿಂದ ಜೂ.7  ಒಟ್ಟು ಬಿದ್ದ ಮಳೆ 39 ಮಿಮೀ. 

ಕಳೆದ ವರ್ಷ 426 ಮಿಮೀ.   

ಗರಿಷ್ಟ 824 ಮಿಮೀ 2006 ರಲ್ಲಿ.

ಅತೀ ಕಡಿಮೆ 2003 ರಲ್ಲಿ  ಹನಿ ಮಾತ್ರಾ.

 

ಇನ್ನಷ್ಟು ಕುತೂಹಲಕಾರಿ  ಮಾತುಕತೆ  ; 

ಮಹಾ/ಮಳೆ ನಕ್ಷತ್ರ ರೋಹಿಣಿ  ಅವಧಿಯಲ್ಲಿ 100 ಮಿ.ಮೀ.ಗೂ ಕಡಿಮೆ ಮಳೆ ದಾಖಲಾದ ವರ್ಷಗಳು ಮತ್ತು ಆ ವರ್ಷ ದಾಖಲಾದ ವಾರ್ಷಿಕ ಒಟ್ಟು ಮಳೆ….

ವರ್ಷ     ಮಳೆ   – ಸರಾಸರಿ
1979  – 097  –  3579
1983 – 046 – 5119
1986 – 054 – 3477
1988 – 040 – 2991
1993 – 076 – 3690
1995 – 051 – 4037
1996 – 082 – 4562
1997 – 066 – 4769
1998 – 013 – 5443
2003 – ಹನಿ – 4046
2005 – 088 – 4253
2007 – 077 – 4868
2012 – 052 – 4314
2014 – 047 – 4450
2019 – 039 – ????

ಸರಾಸರಿ ವಾರ್ಷಿಕ ಮಳೆ 4257 ಮಿಮೀ

ನನ್ನ ಸಂಗ್ರಹದ ಪುಟಗಳಲ್ಲಿ ಅತ್ಯಂತ ಕಡಿಮೆ ವಾರ್ಷಿಕ ಮಳೆ ( 2732 ಮಿ.ಮೀ.) ದಾಖಲಾದ 1987 ರಲ್ಲಿ ರೋಹಿಣಿ ನಕ್ಷತ್ರದ ಅವಧಿಯಲ್ಲಿ 147 ಮಿ.ಮೀ.ಮಳೆ ಸುರಿದಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

5 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

6 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago