ಗುತ್ತಿಗಾರು: ಶಂಕಿತ ಡೆಂಗ್ಯು ಪ್ರಕರಣ ಪತ್ತೆಯಾದ ತಕ್ಷಣವೇ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ತಕ್ಷಣ ಕಾರ್ಯಪ್ರವೃತ್ತವಾಗಿ ಫಾಗಿಂಗ್ ಹಾಗೂ ಜಾಗೃತಿ ಮೂಡಿಸಿದೆ.
ಗುತ್ತಿಗಾರು ಗ್ರಾಮದ ವಳಲಂಬೆ ಪರಿಸರದ ಒಂದು ಮನೆಯಲ್ಲಿ ಶಂಕಿತ ಡೆಂಗ್ಯು ಪ್ರಕರಣ ಪತ್ತೆಯಾಗಿತ್ತು. ಹೀಗಾಗಿ ತಕ್ಷಣ ಕಾರ್ಯಪ್ರವೃತ್ತವಾದ ಆರೋಗ್ಯ ಇಲಾಖೆಯು ಫಾಗಿಂಗ್ ವ್ಯವಸ್ಥೆಗೆ ಮುಂದಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು ಸಹಯೋಗ ದೊಂದಿಗೆ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಪರಿಸರದ ಮನೆಗಳಲ್ಲಿ ಫಾಗಿಂಗ್ ಮಾಡಲಾಯಿತು. ಇದರ ಜೊತೆಗೆ ವಳಲಂಬೆ ಪ್ರದೇಶದ ವಿವಿಧ ಕಡೆಗಳಲ್ಲಿ ಡೆಂಗ್ಯು ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲಾಯಿತು.
ಈಗ ಎಲ್ಲೆಡೆ ಸಾಮಾನ್ಯ ಜ್ವರಗಳು, ವೈರಲ್ ಜ್ವರಗಳು ಇದೆ. ಆದರೆ ಒಂದೆರಡು ದಿನಗಳಲ್ಲಿ ಜ್ವರದ ಲಕ್ಷಣ ಕಡಿಮೆಯಾಗದೇ ಇದ್ದರೆ ತಕ್ಷಣವೇ ರಕ್ತ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಗೆ ಮಾಡಬೇಕು ಎಂದು ಇದೇ ವೇಳೆ ಸಲಹೆ ನೀಡಲಾಯಿತು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಮನೆ ಸಮೀಪ, ತೋಟಗಳಲ್ಲಿ ಮುಂಜಾಗ್ರತೆ ಕೈಗೊಳ್ಳಲೂ ಸೂಚನೆ ನೀಡಲಾಯಿತು.