ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಆನೆ ಯಶಸ್ವಿ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಯಶಸ್ವಿಯ ತುಂಟಾಟ, ನಡೆದಾಟ ಎಲ್ಲವೂ ಭಕ್ತರಿಗೆ ಖುಷಿ. ಹೀಗಾಗಿ ಅದು ಪ್ರೀತಿಯ ಯಶಸ್ವಿ. ಇದೀಗ ಈ ಆನೆಗೆ ಅನಾರೋಗ್ಯ ಕಾಡಿದಾಗ ಎಲ್ಲರಿಗೂ ನೋವು. ತಮಗೆ , ತಮ್ಮ ಕುಟುಂಬಕ್ಕೆ ನೋವಾದಷ್ಟೇ ಸಂಕಟವಾಗುತ್ತಿದೆ. ಹೀಗಾಗಿ ಆನೆಯ ಆರೋಗ್ಯ ವಿಚಾರಣೆಗೆ ಭಕ್ತರು ಬಂದರೆ ಕುಕ್ಕೆ ದೇವಸ್ಥಾನದ ಭಕ್ತ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಯಶಸ್ವಿಯ ಆರೋಗ್ಯ ಸುಧಾರಣೆಗೆ ಉರುಳು ಸೇವೆ ನಡೆಸಿದರು.
ಕುಕ್ಕೆ ದೇವಸ್ಥಾನದ ಆನೆ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಆನೆಯ ಆರೋಗ್ಯ ಸುಧಾರಿಸಲೆಂದು ಪ್ರಾರ್ಥಿಸಿ ಕುಕ್ಕೆ ದೇವಸ್ಥಾನದ ಭಕ್ತ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಗುರುವಾರ ಬೆಳಗ್ಗೆ ದೇಗುಲದ ಹೊರಾಂಗಣದಲ್ಲಿ ಉರುಳು ಸೇವೆ ನಡೆಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ಮರಿಯಾನೆ ಯಶಸ್ವಿಯನ್ನು ಉದ್ಯಮಿ, ಶಾಸಕ ಆನಂದ ಸಿಂಗ್ ಸೇವಾ ರೂಪದಲ್ಲಿ ನೀಡಿದ್ದರು. ಅಂದಿನಿಂದಲೇ ಭಕ್ತರೆಲ್ಲರಿಗೂ ಯಶಸ್ವಿ ಪ್ರೀತಿಯ ಆನೆಯಾಗಿದೆ. ಆನೆಯ ತುಂಟಾಟ, ನಡೆಯುವ ರೀತಿ ಎಲ್ಲವೂ ಖುಷಿ. ಹೀಗಾಗಿ ಭಕ್ತರೆಲ್ಲರೂ ಅನಾರೋಗ್ಯದಿಂದ ಬಳಲುತ್ತಿರುವ ಆನೆಯ ಆರೋಗ್ಯ ವಿಚಾರಿಸಲು ಆನೆಯ ಅಭಿಮಾನಿಗಳು ಶೆಡ್‍ನತ್ತ ತೆರಳುತಿದ್ದಾರೆ. ಶೀಘ್ರವೇ ಗುಣಮುಖಗೊಂಡು ಎಂದಿನಂತೆ ಇರುವಂತಾಗಲೆಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…