ಸುಬ್ರಹ್ಮಣ್ಯ: ಅನಾರೋಗ್ಯದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ಗುರುವಾರ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ.
ನಾಗರಹೊಳೆ ಅಭಯಾರಣ್ಯದ ದುಬಾರೆ ವನ್ಯಸಂರಕ್ಷಣೆ ವಿಭಾಗದ ತಜ್ಞ ವೈದ್ಯ ಡಾ. ಶೆಟ್ಟಿಯಪ್ಪ ಆಗಮಿಸಿ ಶೆಡ್‍ನಲ್ಲಿರುವ ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದರು. ಗುತ್ತಿಗಾರು ಪಶುವೈದ್ಯ ಕೇಂದ್ರದ ವೈದ್ಯ ಡಾ.ವೆಂಕಟಾಚಲಪತಿ ಸಹಕಾರದಲ್ಲಿ ಆನೆಗೆ ಚಿಕಿತ್ಸೆ ನೀಡಲಾಯಿತು. ಆನೆಯು ಅಜೀರ್ಣದಿಂದ ಬಳಲುತ್ತಿದ್ದು ತಿಂದ ಆಹಾರ ಜೀರ್ಣವಾಗುತಿಲ್ಲ. ದೇಹ ಉಷ್ಣತೆಯೂ ಅಧಿಕವಾಗಿದ್ದು ಆಹಾರ ಜೀರ್ಣವಾಗುತಿಲ್ಲ. ತಿಂದ ಆಹಾರ ಹೊಟ್ಟೆಯಲ್ಲಿ ಕರಗದೆ ಸೊಪ್ಪುವಿನ ನಾರು ಲದ್ದಿ ಜತೆ ಸುತ್ತಿಕೊಂಡು ಲದ್ದಿ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಆನೆಯ ಆರೋಗ್ಯ ಪರೀಕ್ಷಿಸಿದ ವೈದ್ಯರು ತಿಳಿಸಿದರು. ಈಗ ಆಹಾರ ಜೀರ್ಣವಾಗಲು ಔಷಧಿ ನೀಡಲಾಗಿದೆ. ದೇಹದ ಉಷ್ಣಾಂಶ ಕಡಿಮೆಗೊಳಿಸಲು ಎಳನೀರು ಗುರುವಾರ ನೀಡಲಾಗಿದೆ. ದೇಹದಲ್ಲಿ ನೀರಿನಂಶ ಹೆಚ್ಚಿಸಲು ತುಸು ಬೆಚ್ಚಗಿನ ನೀರು ಕುಡಿಸಲಾಗುತ್ತಿದೆ. ಜತೆಗೆ ಮೃದು ಆಹಾರವನ್ನು ನೀಡಲಾಗುತ್ತಿದೆ. ಆನೆಯು ಸ್ವಲ್ಪವೇ ಚೇತರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಚಿಕಿತ್ಸೆ ಮುಂದುವರೆಸಲಾಗುತ್ತಿದೆ.
ಆನೆಯ ಆರೋಗ್ಯ ಸುಧಾರಣೆಗೆ ಸಾಕಷ್ಟು ಕಾಳಜಿ ವಹಿಸಿ ಶ್ರಮ ವಹಿಸಲಾಗುತ್ತಿದೆ ಎಂದು ಕಳೆದ ನಾಲ್ಕು ದಿನಗಳಿಂದ ಹಗಲು ರಾತ್ರಿ ಶೆಡ್‍ನಲ್ಲೆ ಇದ್ದು ಆನೆಗೆ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯ ಡಾ.ವೆಂಕಟಾಚಲಪತಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸೆಪ್ಟೆಂಬರ್ 28–29ರಿಂದ ಹಲವು ಭಾಗಗಳಲ್ಲಿ ಮತ್ತೆ…
ತ್ರಿಪುರಾದಲ್ಲಿ ರಬ್ಬರ್ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ…
ವಿಶ್ವದ 21,439 ನದಿ ತೋಡುಗಳ ಅಧ್ಯಯನದಲ್ಲಿ ಶೇ.78.8ರಷ್ಟು ನದಿಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ…
ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…
ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…
₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್ 18 ಪ್ರೊ ಖರೀದಿಗಾಗಿ ದೇಶದ ಹಲವು…