ಈಚೆಗಷ್ಟೇ ಜಲಸ್ಫೋಟದ ಸುದ್ದಿ ಕೇಳಿ ತಣ್ಣಗಾಗಿತ್ತು. ಇದೀಗ ಸೋಮವಾರ ಸಂಜೆ ಸುರಿದ ಮಳೆ ಸುಬ್ರಹ್ಮಣ್ಯದಲ್ಲಿ ಕೆಲಕಾಲ ಆತಂಕ ಸೃಷ್ಠಿ ಮಾಡಿತು.ಜಲಸ್ಫೋಟದ ಮಾದರಿಯಲ್ಲಿ ಒಮ್ಮೆಲೇ ದರ್ಪಣ ತೀರ್ಥ ನದಿಯಲ್ಲಿ ನೀರು ಹರಿಯಿತು. ಈ ಬಗ್ಗೆ ಈಗಲೇ ಜಾಗೃತರಾಗಬೇಕಾದ ಅನಿವಾರ್ಯತೆ ಇದೆ ಎನ್ನುವ ಆಶಯದೊಂದಿಗೆ….
ಸುಬ್ರಹ್ಮಣ್ಯದಲ್ಲಿ ಸೋಮವಾರ ಸುಮಾರು 2 ಗಂಟೆ ಭಾರೀ ಮಳೆ, ಗುಡುಗಿನ ಸದ್ದು ಕೇಳಿತು. ಅದಾದ ಕೆಲವೇ ಹೊತ್ತಲ್ಲಿ ದರ್ಪಣ ತೀರ್ಥ ನದಿಯಲ್ಲಿ ನೀರು ಉಕ್ಕಿ ಹರಿಯಿತು. ಇದುವರೆಗ ಈ ಮಾದರಿಯಲ್ಲಿ ನೀರು ಬರಲಿಲ್ಲ ಎಂದು ಸ್ಥಳೀಯರು ನೆನಪಿಸಿಕೊಂಡರು. ಹಾಗಿದ್ದರೆ ಇಷ್ಟು ನೀರು ಒಮ್ಮೆಲೇ ಏಕೆ ಹಾಗೂ ಹೇಗೆ ಹರಿಯಿತು ?. ಪರ್ವತದ ತಪ್ಪಲು ಭಾಗದಲ್ಲಿ ಜಲಸ್ಫೋಟವಾಗಿರುವ ಸಾಧ್ಯತೆಯನ್ನು ಸ್ಥಳೀಯರು ಹೇಳುತ್ತಾರೆ. ಭಾರೀ ಗುಡುಗು ಮಾದರಿಯ ಸದ್ದು ಕೇಳಿದೆ ಎಂದೂ ಹೇಳುತ್ತಾರೆ. ಹೀಗಾಗಿ ಅಪಾಯವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…