ಸುಬ್ರಹ್ಮಣ್ಯ: ಸುನಾದ ಸಂಗೀತ ಕಲಾ ಶಾಲೆ ಸುಬ್ರಹ್ಮಣ್ಯ ಶಾಖೆಯ ವತಿಯಿಂದ ನಡೆಸಲ್ಪಡುವ “ಸುನಾದ ಸಂಗೀತೋತ್ಸವ -2019” ಶ್ರೀ ವನದುರ್ಗ ದೇವಿ ಸಭಾಭವನದಲ್ಲಿ ಡಿ.15 ರಂದು ನಡೆಯಿತು. ಸುನಾದದ ಮುಖ್ಯಸ್ಥರಾದ ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ದೀಪ ಬೆಳಗುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು, ಗುರುಭಕ್ತಿ, ಶ್ರದ್ಧೆ, ಸತತ ಅಭ್ಯಾಸವಿದ್ದರೆ ಮಾತ್ರ ಶಾಸ್ತ್ರೀಯ ಸಂಗೀತದಲ್ಲಿ ಯಶಸ್ಸು. ಭಗವಂತನ ನಾಮಸ್ಮರಣೆಯ ಮೂಲಕ ಭವ ಸಾಗರವನ್ನು ದಾಟುವುದೇ ಸಂಗೀತದ ಉದ್ದೇಶ. ಮೊಬೈಲ್, ಇಂಟರ್ನೆಟ್ ಯುಗದಲ್ಲಿ ನಮ್ಮ ಸಂಸ್ಕೃತಿಗೆ ಧಕ್ಕೆಯಾಗದಂತೆ ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕೆಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಪೋಷಕರಾದ ಶ್ರೀ ಸೋಮಶೇಖರ್, ರೇಖರಾಣಿ, ಸವಿತಾ, ಲತಾ ಸರ್ವೇಶ್ವರ, ಸುಭಾಶಿಣಿ ಶಿವರಾಂ, ಪ್ರತಿಭಾ ಉದಯ ಕುಮಾರ್, ಸಂಧ್ಯಾ ಶ್ರೀನಿವಾಸ್, ಗಂಗಾದೇವಿ, ಅಮೃತವರ್ಷಿಣಿ, ನೀಲಪ್ಪ ಗೌಡ ಉಪಸ್ಥಿತರಿದ್ದರು.
ತದನಂತರ ಸುಬ್ರಮಣ್ಯ ಶಾಖೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು. ಇವರಿಗೆ ವಯಲಿನ್ ನಲ್ಲಿ ಧನಶ್ರೀ ಶಬರಾಯ, ಧನ್ಯಶ್ರೀ, ಶ್ರೀರಾಮ ಕಾಂಚನ, ಮೃದಂಗದಲ್ಲಿ ವಿದ್ವಾನ್ ಶ್ಯಾಮ ಭಟ್ ಸುಳ್ಯ, ಅರವಿಂದ, ಶ್ರೀರಾಮ, ಮೋರ್ಸಿಂಗ್ ನಲ್ಲಿ ಭರತ್ ಕುಮಾರ್ ಇವರು ಸಾಥ್ ನೀಡಿದರು. ಶ್ರೀಮತಿ ರೇಖರಾಣಿ, ಸವಿತಾ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಪ್ರಧಾನ ಕಾರ್ಯಕ್ರಮವಾಗಿ ಡಾ. ಅಕ್ಷಯ ನಾರಾಯಣ ಕಾಂಚನ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಇವರಿಗೆ ವಯಲಿನ್ ನಲ್ಲಿ ವಿದ್ವಾನ್ ಬಿ ರಘುರಾಮ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್ ಹಾಗೂ ಮೋರ್ಸಿಂಗ್ ನಲ್ಲಿ ವಿದ್ವಾನ್ ವಿ ಎಸ್ ರಮೇಶ್ ಮೈಸೂರು ಇವರು ಸಾಥ್ ನೀಡಿದರು.
ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…
ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…
ಇತ್ತೀಚಿನ ನೈಸರ್ಗಿಕ ವಿಪತ್ತುಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದ್ದು, ಕಾನೂನು ಮತ್ತು…
ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…
ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…