ಸುಳ್ಯದಲ್ಲಿ ಕಂಕಣ ಸೂರ್ಯಗ್ರಹಣ: ಹಲವರಿಂದ ಖಗೋಳ ವಿಸ್ಮಯ ವೀಕ್ಷಣೆ

December 26, 2019
12:36 PM

ಸುಳ್ಯ: ಅಪರೂಪದ ಕಂಕಣ ಸೂರ್ಯಗ್ರಹಣ ಸುಳ್ಯದಲ್ಲಿ ಗೋಚರಿಸಿತು. ಹಲವಾರು ಮಂದಿ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಮೋಡ ಅಥವಾ ಯಾವುದೇ ಅಡೆ ತಡೆ ಇಲ್ಲದೆ ಗ್ರಹಣ ಗೋಚರಿಸಿತ್ತು. ಬೆಳಿಗ್ಗೆ 8 ಗಂಟೆ 4 ನಿಮಿಷಕ್ಕೆ ಸೂರ್ಯಗ್ರಹಣ ಆರಂಭಗೊಂಡಿತು. ಸುಮಾರು 9.17ರ ವೇಳೆಗೆ ಕಂಕಣ ಸೂರ್ಯಗ್ರಹಣ ಗೋಚರಿಸಿತು. ಕೆಲ ಹೊತ್ತು ಕಂಕಣ ಸೂರ್ಯಗ್ರಹಣದ ಸ್ಥಿತಿ ಇತ್ತು‌. ಪೂರ್ಣ ಗ್ರಹಣ ಉಂಟಾದ ಸಮಯದಲ್ಲಿ ಮಬ್ಬು ಕವಿದು ಸ್ವಲ್ಪ ಸಮಯ ಕತ್ತಲಿನ ವಾತಾವರಣ ಉಂಟಾಗಿತ್ತು. 11 ಗಂಟೆಯವರೆಗೂ ಗ್ರಹಣ ಗೋಚರಿಸಿತ್ತು. ಹಲವಾರು ಮಂದಿ ಗ್ರಹಣ ದರ್ಶನ ಕನ್ನಡಕದ ಮೂಲಕ ಸೂರ್ಯಗ್ರಹಣ ವೀಕ್ಷಿಸುವುದು ಕಂಡು ಬಂದಿತ್ತು. ದೇವಸ್ಥಾನಗಳಲ್ಲಿ ಪೂಜೆಗಳು ನಡೆಯಲಿಲ್ಲ‌. ಕೆಲವು ದೇವಾಲಯಗಳಲ್ಲಿ ಗ್ರಹಣ ಶಾಂತಿ ಹೋಮವೂ ನಡೆದಿತ್ತು. ಸುಳ್ಯ ನಗರದಲ್ಲಿ ಹಲವು ಹೋಟೆಲ್ ಗಳು ಬಂದ್ ಆಗಿತ್ತು. ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್
August 28, 2026
9:16 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ
August 28, 2026
8:56 PM
by: ದ ರೂರಲ್ ಮಿರರ್.ಕಾಂ
101 ತಾಲೂಕುಗಳಲ್ಲಿ ಬರದ ಛಾಯೆ – ಗ್ರಾಮೀಣರಿಗೆ ಉದ್ಯೋಗ ಹೆಚ್ಚಿಸಲು ಸಚಿವ ಖಂಡ್ರೆ ಸೂಚನೆ
August 28, 2026
8:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ಬದಲಾವಣೆ ಎಲ್ಲಿದೆ?
August 28, 2026
2:10 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror