ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಮಳೆ ಇಲ್ಲದೆ ಬೆಳೆ ಬೆಳೆದ ರೈತ(Farmer) ಕಂಗಾಲಾಗಿದ್ದ. ಇರುವ ನೀರಿನ ಮೂಲಗಳನ್ನು ಬಳಸಿ ಕೆಲ ರೈತರು ಬೆಳೆ ಬೆಳೆದಿದ್ದರು. ಈ ಮಧ್ಯೆ ಬರದ ನಡುವೆಯೂ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಯುವ ರೈತ ಗಿರೀಶ್, ಬೀನ್ಸ್ (Beans) ಬೆಳೆ ಬೆಳೆದು ಬಂಪರ್ ಲಾಭ(Profit) ಮಾಡಿ ಇದೀಗ ಸುದ್ದಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಗಿರೀಶ್, ಡಿಗ್ರಿ ಮುಗಿಸಿ ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಬರುವ 15 ಸಾವಿರ ಸಂಬಳ ಸಾಕಾಗ್ತಾ ಇರಲಿಲ್ಲ. ಇದರಿಂದ ಕಂಪನಿ ಬಿಟ್ಟು ಊರಿಗೆ ಬಂದು ಇದ್ದ 8 ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಹುರುಳಿ ಬೀಜ ನಾಟಿ ಮಾಡಿದ್ದರು. ಕರೆಂಟ್ ಸಮಸ್ಯೆ ಇದ್ದರೂ ಜನರೇಟರ್ ಇಟ್ಟು ತೋಟಕ್ಕೆ ನೀರು ಹಾಯಿಸಿ ರಾತ್ರಿ ಹಗಲು ಕಷ್ಟ ಪಟ್ಟು ಬಂಪರ್ ಬೆಳೆ ಬೆಳೆದಿದ್ದಾರೆ.
ಇದೀಗ ತಾನು ಬೆಳೆದ ಬೆಳೆಗೆ ಬಂಗಾರದಂತಹ ಬೆಲೆ ಬಂದಿದ್ದು ಎರಡು ಟನ್ ಹುರಳಿಗೆ ಬರೋಬ್ಬರಿ ಇಪ್ಪತ್ತು ಲಕ್ಷ ಗಳಿಸಿದ್ದಾರೆ. ಬರದ ನಡುವೆಯೂ ಬೀನ್ಸ್ ಬೆಳೆದ ರೈತನಿಗೆ ಲಾಭ ಬಂದಿದ್ದು ಶ್ರಮದಾಯಕವಾಗಿ ಮಾಡಿದ ಕೃಷಿಯು ಈಗ ಕೈ ಹಿಡಿದಿದೆ.
ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…