Advertisement
ಅನುಕ್ರಮ

ಸಸ್ಯ ಪರಿಚಯ | ‘ಮರಳಿ ತನ್ನಿ ಮರೆತ ಸೊಪ್ಪನ್ನ’ ಹೊನಗನೆ ಸೊಪ್ಪು

Share

ಬೇಲಿ ಬದಿಯಲ್ಲಿ, ಗದ್ದೆ ಬದಿಯಲ್ಲಿ ಅಥವಾ ನೀರಿನ ಸೆಲೆ ಇರುವ ಪ್ರದೇಶಗಳಲ್ಲಿ ತಾನಾಗಿಯೇ ಹುಟ್ಟಿ ಬೆಳೆಯುವ ಗಿಡ ಹೊನಗನೆ. ಹಸುರು ಎಲೆಗಳ ಮಧ್ಯೆ ಪುಟ್ಟ ಪುಟ್ಟ ಬಿಳಿ ಹೂಗಳಿಂದ ಕಂಗೊಳಿಸುವ ಈ ಸಸ್ಯ ಕಾಡು ಸಸ್ಯ. ಇದರ ಮಹತ್ವವನ್ನು ತಿಳಿಯದ ಜನರು ಇದನ್ನು ಕಳೆ ಸಸ್ಯ ಎಂದು ಕಿತ್ತು ಬಿಸಾಡುತ್ತಾರೆ. ಆದರೆ ಪೋಷಕಾಂಶಗಳ ಆಗರವಾಗಿರುವ ಈ ಸಸ್ಯದ ಬಳಕೆಯನ್ನು ಎಲ್ಲರೂ ಮಾಡಬಹುದಾಗಿದೆ. ಈ ಸಸ್ಯದ ಬಳಕೆಯಿಂದ ಕಣ್ಣಿನ ಆರೋಗ್ಯ ಕಾಪಾಡಲು ಸಾಧ್ಯ. ಅಸ್ಪಷ್ಟ ದೃಷ್ಟಿಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಸತತ ಆರು ತಿಂಗಳ ಕಾಲ ಆಹಾರದಲ್ಲಿ ಈ ಸೊಪ್ಪನ್ನು ಬಳಕೆ ಮಾಡಿ ಕಣ್ಣಿನ ಆರೋಗ್ಯ ಸುಧಾರಿಸಿಕೊಂಡಿದ್ದಾರೆ. ಕಬ್ಬಿಣದ ಸತ್ವ ಮತ್ತು ಇತರ ಪೋಷಕಾಂಶಗಳ ಆಗರವಾಗಿರುವ ಈ ಸಸ್ಯದ ಬಳಕೆ ನಮ್ಮ ದಿನನಿತ್ಯದ ಊಟದ ತಟ್ಟೆಗೆ ಬರಬೇಕಿದೆ.

ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Alternanthera sessilis ಎಂದು. ಆಯುರ್ವೇದದಲ್ಲಿ ಮತ್ಸಾಕ್ಷಿ ಎಂದು ಕರೆಯಲ್ಪಡುವ ಈ ಸಸ್ಯವು ವಾಂತಿ, ಭೇದಿ, ಕಫ ಮುಂತಾದ ಕಾಯಿಲೆಗೆ ಔಷಧವಾಗಿ ಬಳಕೆಯಲ್ಲಿದೆ. ಶ್ವಾಸಕೋಶದ ಸಮಸ್ಯೆಗಳನ್ನು, scabies, ಜ್ವರ, ಗಾಯ ಹಾಗೂ ಬೊಕ್ಕೆ ನಿವಾರಣೆಗೂ ಈ ಸಸ್ಯದ ರಸ ಪ್ರಯೋಜನ ಕಾರಿ. ಹೊಟ್ಟೆಯೊಳಗೆ ಗ್ಯಾಸ್ ತುಂಬಿದಾಗ, ಅಥವಾ ವಾಕರಿಕೆಯ ಭಾವನೆ ಉಂಟಾದಾಗ ಈ ಸೊಪ್ಪಿನ ಕಷಾಯ digestive stimulant  ಆಗಿ ಕೆಲಸ ಮಾಡುತ್ತದೆ. ಇದರ ಕಷಾಯವನ್ನು ಉಪ್ಪಿನ ಜತೆ ಸೇವಿಸಿದರೆ ರಕ್ತ ವಾಂತಿ ಕಡಿಮೆಯಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ….

ನಾವು ಮಳೆಗಾಲದಲ್ಲಿ ಸಮೃದ್ಧ ವಾಗಿ ದೊರಕುವ ಹೊನಗನೆ ಸೊಪ್ಪನ್ನು ಚಟ್ನಿ, ತಂಬುಳಿ, ಬಸ್ಸಾರು, ಸಾಂಬಾರು ರೂಪಗಳಲ್ಲಿ ಬಳಸುತ್ತೇವೆ. ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ದೋಸೆಹಿಟ್ಟಿಗೆ ಸೇರಿಸಿ ದೋಸೆಯ ರುಚಿಯನ್ನು ಹೆಚ್ಚಿಸಿಕೊಳ್ಳಬಹುದು. ಆ ಮೂಲಕ ನಮ್ಮ ಆರೋಗ್ಯಕ್ಕೆ ಪೂರಕ ಶಕ್ತಿಯನ್ನು ಶರೀರದಲ್ಲಿ ಕಾಪಾಡಿಕೊಳ್ಳಬಹುದು. ನೀರಿನಾಶ್ರಯವಿರುವ ಇರುವ ಜಾಗದಲ್ಲಿ ನೆಟ್ಟು ಬೆಳೆಸಿದರೆ ವರ್ಷ ಪೂರ್ತಿ ಈ ಗಿಡದ ಸೊಪ್ಪನ್ನು ಆಹಾರದಲ್ಲಿ ಬಳಕೆ ಮಾಡಬಹುದು.

ಪೊದರು ಸಸ್ಯವಾಗಿ ಬೆಳೆಯುವ ಹೊನಗನೆ ಸಪೂರ ಉದ್ದುದ್ದವಾದ ಕಡ್ಡಿಯಂತಿದ್ದು ಅಲ್ಲಲ್ಲಿ ಮೂಡಿದ ಗಂಟುಗಳ ಗೆಲ್ಲುಗಳಾಗಿ ಹರಡಿಕೊಂಡಿರುತ್ತದೆ. ಪ್ರತಿ ಗಂಟಿಗೂ ಐದಾರು ಎಲೆಗಳು ಹಾಗೂ ಅವುಗಳ ನಡುವೆ ಒಂದು ಬಿಳಿ ಹೂ ಇರುತ್ತದೆ. ಹೂವನ್ನು ಕೊಯ್ಯದೆ ಚಿಗುರುಗಳನ್ನು ಮಾತ್ರ ಕೊಯ್ದು ಉಪಯೋಗಿಸುವುದೇ ಕ್ರಮ. ಉತ್ತರ ಕನ್ನಡದ ಹಳ್ಳಿಗಳಲ್ಲಿ ಈ ಗಿಡದ ಬಳಕೆ ಜಾಸ್ತಿ ಇದೆಯಂತೆ. ಆದರೆ ದಕ್ಷಿಣ ಕನ್ನಡದ ಕಡೆ ಇದರ ಬಳಕೆ ಕಡಿಮೆಯಾಗಿದೆ. ಅದು ಈ ಪ್ರದೇಶದಲ್ಲಿ ಮರೆತೇ ಬಿಟ್ಟ ಸೊಪ್ಪು ಎಂದಾಗಿದೆ. ಆದರೆ ಈಗೀಗ ಪ್ರಾಕೃತಿಕ ಸಸ್ಯಗಳ ಬಗೆಗೆ ಒಲವು ಜಾಸ್ತಿಯಾಗಿರುವುದರಿಂದ ಈ ಸೊಪ್ಪಿನ ಬಳಕೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಮಂಗಳೂರಲ್ಲಿ ಸೊಪ್ಪಿನ ಮೇಳ ಜರಗಿದಾಗ ಹೊನಗನೆ ಸೊಪ್ಪು ಕೂಡಾ ಸ್ಟಾಲ್ಗಳಲ್ಲಿ ಜಾಗ ಪಡೆದಿತ್ತು. ದೃಷ್ಟಿ ದೋಷವನ್ನು ಸರಿಪಡಿಸುವ ಶಕ್ತಿಯನ್ನು ಹೊಂದಿರುವ ಈ ಸೊಪ್ಪನ್ನು ವಾರದಲ್ಲಿ ಒಮ್ಮೆಯಾದರೂ ಆಹಾರದಲ್ಲಿ ಉಪಯೋಗಿಸುವ ಮೂಲಕ ನಾವು ಆರೋಗ್ಯವಂತರಾಗಬಹುದು.

ನಾವು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ‘ಎಲೆಯರಿವು’ ಎಂಬ ಕಾರ್ಯಕ್ರಮವನ್ನು ಮಾಡುತ್ತೇವೆ. ಮಕ್ಕಳು ವಾರದಲ್ಲಿ ಒಂದು ದಿನವಾದರೂ ಆಹಾರದಲ್ಲಿ ಹಸಿರು ಸೊಪ್ಪಿನ ಬಳಕೆ ಮಾಡಬೇಕು ಎಂಬ ಮಾಹಿತಿ ನೀಡುವ ಕಾರ್ಯಕ್ರಮವಿದು. ಒಂದೆಲಗ, ಸಾಂಬ್ರಾಣಿ ಸೊಪ್ಪು, ವಿಟಮಿನ್ ಸೊಪ್ಪು, ಹೊನಗನೆ ಸೊಪ್ಪು, ನುಗ್ಗೆ ಸೊಪ್ಪು, ಕರಿಬೇವು ಮುಂತಾಗಿ ಯಾವುದಾದರೂ ಹಸಿರು ಸೊಪ್ಪನ್ನು ವಾರದಲ್ಲಿ ಒಂದು ದಿನವಾದರೂ ಆಹಾರದಲ್ಲಿ ಬಳಸಬೇಕು. ಈ ವಿಷಯ ತಿಳಿದ ಮಕ್ಕಳು ಆಸಕ್ತಿ ವಹಿಸಿ ಹಸಿರು ಸೊಪ್ಪನ್ನು ಆಹಾರದಲ್ಲಿ ಬಳಕೆ ಮಾಡಲು ಮನೆಯವರಲ್ಲಿ ಕೇಳಿಕೊಳ್ಳುತ್ತಾರೆ. ವಾರ ವಾರ ಮಕ್ಕಳು ಈ ಹಸಿರು ಸೊಪ್ಪನ್ನು ಬಳಸಿದ ಬಗ್ಗೆ ತರಗತಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಜಯಲಕ್ಷ್ಮಿ ದಾಮ್ಲೆ

ಜಯಲಕ್ಷ್ಮಿ ದಾಮ್ಲೆ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಸಂಬಂಧಿತ ಬರಹ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ.

Published by
ಜಯಲಕ್ಷ್ಮಿ ದಾಮ್ಲೆ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

1 hour ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

20 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

2 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago