ಅನ್ನಭಾಗ್ಯ ಯೋಜನೆಯಡಿ 8,433 ಕೋಟಿ ರೂಪಾಯಿ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ

October 22, 2024
6:15 AM
ಪ್ರತಿ ಕೆಜಿ  ಅಕ್ಕಿಗೆ  34 ರೂಪಾಯಿಯಂತೆ  5 ಕೆಜಿ ಅಕ್ಕಿಗೆ  ಪ್ರತಿ ಸದಸ್ಯರಿಗೆ  170 ರೂಪಾಯಿಯಂತೆ ಕುಟುಂಬದ ಮುಖ್ಯಸ್ಥರ  ಬ್ಯಾಂಕ್ ಖಾತೆ ಹಣ ವರ್ಗಾವಣೆ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯಡಿ ಕಳೆದ  ವರ್ಷದ ಜುಲೈ ನಿಂದ ಈ ವರ್ಷದ ಜುಲೈ ಅಂತ್ಯದವರೆಗೂ 8 ಸಾವಿರದ 433.11 ಕೋಟಿ ರೂಪಾಯಿ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ ಎಂದು  ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ  ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ  ತಿಳಿಸಿದ್ದಾರೆ.

Advertisement
Advertisement
Advertisement
Advertisement

ಪ್ರತಿ ಕೆಜಿ  ಅಕ್ಕಿಗೆ  34 ರೂಪಾಯಿಯಂತೆ  5 ಕೆಜಿ ಅಕ್ಕಿಗೆ  ಪ್ರತಿ ಸದಸ್ಯರಿಗೆ  170 ರೂಪಾಯಿಯಂತೆ ಕುಟುಂಬದ ಮುಖ್ಯಸ್ಥರ  ಬ್ಯಾಂಕ್ ಖಾತೆ ಹಣ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ ನೇರ  ನಗದು ಬದಲಾವಣೆ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ ಆರು ತಿಂಗಳಿನಿಂದ  ಪಡಿತರ ಪಡೆಯದೇ ಇರುವುದು, ಒಂದು ವರ್ಷದಿಂದ ನೇರ ನಗದು ಸ್ವೀಕರಿಸದೇ ಇರುವುದು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ  ವಾರ್ಷಿಕ ವರಮಾನ ಹೆಚ್ಚುತ್ತಿರುವುದು  ಸೇರಿದಂತೆ  ವಿವಿಧ ಕಾರಣಗಳಿಂದ  ಸುಮಾರು  20 ಲಕ್ಷಕ್ಕೂ ಹೆಚ್ಚು  ಅನರ್ಹ ಪಡಿತರ ಕಾರ್ಡ್ ಗಳಿದ್ದು ಅವುಗಳಲ್ಲಿ  ಕನಿಷ್ಠ 10ರಿಂದ  12 ಲಕ್ಷ ಅನರ್ಹ  ಪಡಿತರ ಚೀಟಿಗಳು  ಪತ್ತೆಯಾಗಬಹುದು. ಅದಕ್ಕೆ  ಅನುಗುಣವಾಗಿ  ಅರ್ಜಿ ಆಹ್ವಾನಿಸಿ  ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಆಹಾರ ವ್ಯರ್ಥ  ತಡೆಯುವ ಉದ್ದೇಶದಿಂದ  ಅಂತಾರಾಷ್ಟ್ರೀಯ ಮಟ್ಟದ  ಸಮ್ಮೇಳನವನ್ನು ಆಯೋಜಿಸಲು  ಸರ್ಕಾರ ಉದ್ದೇಶಿಸಿದೆ. ಈ ಸಮ್ಮೇಳನದಲ್ಲಿ ಕೃಷಿ, ಆರೋಗ್ಯ, ಆಹಾರ ತಜ್ಞರು  ಹಾಗೂ  ಆಹಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್ ಜಿಒಗಳನ್ನು ಆಹ್ವಾನಿಸಲಾಗುವುದು.  ‘ಎಲ್ಲರಿಗೂ ಆಹಾರ  ಹಾಗೂ ಉತ್ತಮ ಜೀವನ ಮತ್ತು  ಉತ್ತಮ ಭವಿಷ್ಯಕ್ಕಾಗಿ  ಆಹಾರದ ಹಕ್ಕು’ ಘೋಷ ವಾಕ್ಯದಲ್ಲಿ  ಸಮ್ಮೇಳನ ಆಯೋಜಿಸಲು  ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನವ ಮಂಗಳೂರು ಬಂದರಿನಿಂದ ಅತ್ಯಧಿಕ ಪ್ರಮಾಣದಲ್ಲಿ ಕಾಫಿ ಸಾಗಾಣಿಕೆ | ಕಾಫಿ ರಫ್ತು ವಹಿವಾಟಿಗೆ ಆದ್ಯತೆ ಅಗತ್ಯ |
February 16, 2025
4:50 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಪೀಡಿತರ ಸಂಖ್ಯೆಯಲ್ಲಿ ಏರಿಕೆ |
February 16, 2025
4:46 PM
by: The Rural Mirror ಸುದ್ದಿಜಾಲ
ಮಂಡ್ಯ ಜಿಲ್ಲೆ| 14 ದಿನದೊಳಗೆ ರೈತರಿಗೆ ಕಬ್ಬಿನ ಹಣ ಪಾವತಿಸಬೇಕು | ಜಿಲ್ಲಾಧಿಕಾರಿ ಸೂಚನೆ
February 16, 2025
4:41 PM
by: The Rural Mirror ಸುದ್ದಿಜಾಲ
 ಬಿಎಸ್‌ಎನ್‌ಎಲ್ ಗೆ 269 ಕೋಟಿ ರೂಪಾಯಿ ಲಾಭ | ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿಕೆ
February 16, 2025
4:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror