ಬರೆಯಬೇಕೆನ್ನಿಸುವುದು,
ಸೂರ್ಯಕಿರಣಗಳು ಭುವಿಯ ಸ್ಪರ್ಶಿಸಿದಾಗ
ಚಂದ್ರನ ಬೆಳದಿಂಗಳಲ್ಲಿ ನಕ್ಷತ್ರಗಳ ಎಣಿಸುವಾಗ
ಬರೆದರೆ ಓದುವರಾರು…?
ನಾನೇನು ಖ್ಯಾತನಾಮನಲ್ಲ, ಕವಿತೆ ಗೀಚಿ ಗೊತ್ತಿಲ್ಲ.
ಬರೆಯಬೇಕೆನ್ನಿಸುವುದು,
ಮಳೆಯಲ್ಲಿ ಮೈ ಮರೆತು ನರ್ತಿಸುವ ನವಿಲಂತೆ
ಒಮ್ಮೊಮ್ಮೆ ನಾನು ಮೈಮರೆತು ಗೀಚುತ್ತೇನೆ
ಓದುವರರಾದರೂ ಸಿಗಬಹುದೆಂಬ ಹಂಬಲದಲ್ಲಿ
ಓದಿ ಮೆಚ್ಚುವರೆಂಬ ಹುಚ್ಚು ನಂಬಿಕೆಯಲ್ಲಿ
ಬರೆಯಬೇಕೆನ್ನಿಸುವುದು,
ಕುಳಿತಲ್ಲಿ , ನಿಂತಲ್ಲಿ ಶಬ್ದಗಳ ಹುಡುಕಾಟ
ಪೆನ್ನು ಹಿಡಿದರೆ ,ಮನದ ಭಾವಗಳ ತಾಕಲಾಟ
ಮನದ ಭಾವಗಳಿಗೆ ದೊರಕದಿದ್ದರೆ ಪ್ರತಿರೂಪ
ಮತ್ತದೇ ನಿರರ್ಥಕ ಭಾವ…..
ಕಠಿಣ ಕಾರ್ಯವೇನಲ್ಲ, ಈ ಬರವಣಿಗೆ
ಸುತ್ತಣದ ವಿಷಯಗಳಿಗೆ ಮನ ಮಿಡಿದಾಗ
ಅಗೋಚರ ಶಕ್ತಿಯೊಂದು ದಾರಿ ತೋರುವುದು
ಕವನಗಳ ಗೀಚಲು ಕವಿ ನಾನಾಗದಿದ್ದರೂ
ಗೀಚಿದ್ದು ಕವಿತೆಯಾದರೆ ಕವಿಯೇ ನಾನಾದೆನಲ್ಲಾ…
# ಅಪೂರ್ವ ಚೇತನ್ ಪೆರಂದೋಡಿ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…