ಅಡಿಕೆ ಮಾರುಕಟ್ಟೆ ಅಸ್ಥಿರಗೊಳಿಸುವ ಸತತ ಪ್ರಯತ್ನಗಳು ವಿಫಲವಾಗುತ್ತಿದೆ. ಅಸ್ಸಾಂ ಗಡಿಯ ಮೂಲಕ ಭಾರತದೊಳಕ್ಕೆ ಬರುತ್ತಿದ್ದ ಅಡಿಕೆಗೆ ನಿರಂತರ ತಡೆಯಾಗುತ್ತಿದ್ದಂತೆಯೇ ಇದೀಗ ಶ್ರೀಲಂಕಾ ಮೂಲಕ ಭಾರತದೊಳಕ್ಕೆ ಅಡಿಕೆ ಸಾಗಾಟದ ಪ್ರಯತ್ನವೂ ವಿಫಲವಾಗಿದೆ. ಶ್ರೀಲಂಕಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಡಿಕೆ ಆಮದು ಹಾಗೂ ರಫ್ತು ಬಗ್ಗೆ ಮಾಹಿತಿ ಪಡೆದು 23 ಕಂಟೈನರ್ ಅಡಿಕೆ ವಶಕ್ಕೆ ಪಡೆದುಕೊಂಡು ಕಸ್ಟಮ್ಸ್ ಇಲಾಖೆಯ ಮಾಜಿ ಸಹಾಯಕ ಅಧೀಕ್ಷಕರನ್ನುವಶಕ್ಕೆ ತೆಗೆದುಕೊಂಡಿದೆ.
ಇಂಡೋನೇಶ್ಯಾದಿಂದ ಅಡಿಕೆ ಆಮದು ಮಾಡಿ ಭಾರತಕ್ಕೆ ಮರು ರಫ್ತು ಮಾಡುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಡೋನೇಶ್ಯಾದಿಂದ ಅಡಿಕೆ ಆಮದು ಮಾಡಿ ಶ್ರೀಲಂಕಾದಲ್ಲಿ ಬೆಳೆದ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡುವಂತೆ ದಾಖಲೆ ಸೃಷ್ಟಿ ಮಾಡಿ 23 ಕಂಟೈನರ್ ಅಡಿಕೆಯನ್ನು ನಕಲಿ ದಾಖಲೆ ಮೂಲಕ ಸಾಗಾಟ ಮಾಡಲು ಯತ್ನ ನಡೆದಿತ್ತು. ಇದನ್ನು ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ ಪತ್ತೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಪರಾಧ ತನಿಖಾ ವಿಭಾಗದ ವಕ್ತಾರ ಡಿಐಜಿ ಅಜಿತ್ , ಇಂಡೋನೇಶ್ಯಾದಿಂದ ಅಡಿಕೆ ತರಿಸಿ ಭಾರತಕ್ಕೆ ಮರುರಫ್ತು ಮಾಡುವ ಜಾಲ ಇದಾಗಿದೆ. ಶ್ರೀಲಂಕಾದಲ್ಲಿ ಬೆಳೆದ ಅಡಿಕೆಯಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಸಾಗಾಟ ಮಾಡುವ ಪ್ರಯತ್ನ ನಡೆದಿತ್ತು. ಸದ್ಯ 23 ಕಂಟೈನರ್ ಅಡಿಕೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು 2020 ಆಗಸ್ಟ್ ತಿಂಗಳಿನಿಂದ ಕೆಲವು ಬಾರಿ ಅಡಿಕೆ ಶ್ರೀಲಂಕಾಕ್ಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಸ್ಟಮ್ಸ್ ಮಾಜಿ ಸಹಾಯಕ ಅಧೀಕ್ಷಕರು ಸಹಾಯ ನೀಡಿದ್ದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಅಸ್ಸಾಂ ಗಡಿಯಲ್ಲಿ ಕೂಡಾ ಅಡಿಕೆ ಆಮದು ತಡೆಯಲಾಗಿದೆ. ಕಳ್ಳ ದಾರಿ ಮೂಲಕ ಅಸ್ಸಾಂ ಗಡಿಯಲ್ಲಿ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣರವನ್ನು ಅಸ್ಸಾಂ ಗಡಿ ಭದ್ರತಾ ಪಡೆ ಪತ್ತೆ ಮಾಡಿದ್ದು ಸುಮಾರು 7.7 ಲಕ್ಷ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಮಿಜೋರಾಂನ ಚಂಪೈ ಜಿಲ್ಲೆಯ ಇಂಡೋ-ಮ್ಯಾನ್ಮಾರ್ ಅಂತರರಾಷ್ಟ್ರೀಯ ಗಡಿ ಮೂಲಕ ಕಳ್ಳಸಾಗಣೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಗಡಿ ಭದ್ರತಾ ಸಿಬಂದಿಗಳು ಮಾಹಿತಿ ನೀಡಿದ್ದಾರೆ.
Advertisement
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…