ಅಡಿಕೆ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಏರಿಳಿತಗಳು ಕಂಡುಬಂದಿದೆ. ಖಾಸಗಿ ಮಾರುಕಟ್ಟೆ ಹಾಗೂ ಕ್ಯಾಂಪ್ಕೋ ಮತ್ತು ಇತರ ಸಹಕಾರಿ ಸಂಸ್ಥೆಗಳ ಧಾರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ನವೆಂಬರ್ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬರುವ ಹೊತ್ತಲ್ಲ ಧಾರಣೆ ಏಕೆ ಕಳೆಗುಂದಿದೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 380, ಹಳೆ ಅಡಿಕೆ 485, ಚೋಲ್ 550 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿತ್ತು. ಈಗ ಚೋಲ್ ಅಡಿಕೆ ಧಾರಣೆಯಲ್ಲಿ ಇಳಿಕೆ ಮಾಡಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 390 ರೂಪಾಯಿ ಹಳೆದ ಅಡಿಕೆ 480 ರೂಪಾಯಿ ಹಾಗೂ ಚೋಲ್ ಅಡಿಕೆ 555 ರೂಪಾಯಿಗೆ ಖರೀದಿ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಹಳೆ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಡಿಮೆಯಾಗಿದೆ. ಇದೇ ಟ್ರೆಂಡ್ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಗುಜರಾತ್ ಚುನಾವಣೆ ಘೋಷಣೆಯಾದ ಬಳಿಕ ಅಡಿಕೆ ಮಾರುಕಟ್ಟೆಯಲ್ಲೂ ಪ್ರಭಾವ ಕಂಡಿದೆ. ಚುನಾವಣೆ ಘೋಷಣೆಯಾದ ಬಳಿಕ ತಪಾಸಣೆಗಳು ನಡೆಯುತ್ತಿದೆ. ಚೆಕ್ ಪೋಸ್ಟ್‌ಗಳು, ಬಿಲ್ ಸೇರಿದಂತೆ ಹಲವು ಕಡೆ ತಪಾಸಣೆ ನಡೆಯುತ್ತದೆ. ಹೀಗಾಗಿ ಅಡಿಕೆ ಸಾಗಾಣಿಕೆಗೂ ಸಮಸ್ಯೆಯಾಗುತ್ತದೆ. ಆದರೆ ಬಿಲ್ , ಜಿಎಸ್‌ಟಿ ಸಹಿತ ಅಧಿಕೃತವಾಗಿ ಸಾಗಾಟ ಮಾಡುವ ಸಂಸ್ಥೆಗಳು ಈ ಸಮಸ್ಯೆ ಉಂಟಾಗುವುದಿಲ್ಲ. ಕ್ಯಾಂಪ್ಕೋ ಹಾಗೂ ಇತರ ಸಹಕಾರಿ ಸಂಸ್ಥೆಗಳು ಈಗ ಅಧಿಕೃತವಾಗಿ ಸಾಗಾಟ, ಮಾರಾಟ ಮಾಡುವುದಕ್ಕೆ ಅಷ್ಟೊಂದು ಸಮಸ್ಯೆಯಾಗುವುದಿಲ್ಲ.
ಡಿಸೆಂಬರ್ ಮೊದಲ ವಾರದ ವರೆಗೆ ಗುಜರಾತ್ ಚುನಾವಣಾ ಬ್ಯುಸಿ ಇರುತ್ತದೆ. ಈ ತಿಂಗಳಲ್ಲಿ ಇನ್ನೂ 10 ದಿನಗಳ ಕಾಲ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡುಬರಬಹುದು. ಅದಾದ ಬಳಿಕ ಮತ್ತೆ ಅಡಿಕೆ ಮಾರುಕಟ್ಟೆ ಯಥಾಸ್ಥಿತಿಗೆ ಬರಲಿದೆ ಎನ್ನುವುದು ಮಾರುಕಟ್ಟೆ ಮಾಹಿತಿ.
ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…
ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್…
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…
ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…
ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…