Advertisement
MIRROR FOCUS

ಅಡಿಕೆ ಮಾರುಕಟ್ಟೆ | ಗುಜರಾತ್‌ ಚುನಾವಣೆ ಬಳಿಕ ಅಡಿಕೆ ಧಾರಣೆ ಏರಿಕೆ ನಿರೀಕ್ಷೆ |

Share

ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯ ಸೂಚನೆ ಕಂಡುಬಂದಿದೆ. ಚಾಲಿ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದ್ದು ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಉತ್ಸಾಹದ ಕಡೆಗೆ ಸಾಗಿದೆ. ಕ್ಯಾಂಪ್ಕೋ ಅಡಿಕೆ ಧಾರಣೆಯಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಖಾಸಗಿ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೂಡಾ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಿದೆ.ಸದ್ಯ ಕ್ಯಾಂಪ್ಕೋ ಚಾಲಿ ಅಡಿಕೆಯ ಹೊಸ ಅಡಿಕೆಯನ್ನು 380 ಹಳೆ ಅಡಿಕೆ 490 ರೂಪಾಯಿಗೆ ಹಾಗೂ ಡಬಲ್‌ ಚೋಲ್‌ 545 ರೂಪಾಯಿಗೆ ಖರೀದಿ ನಡೆಸುತ್ತಿದೆ. 

ಗುಜರಾತ್‌ ಚುನಾವಣೆಯ ಬಳಿಕ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಲಿದೆ. ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ  ಭಾರೀ ನಿರೀಕ್ಷೆಯನ್ನು ಅಡಿಕೆ ಬೆಳೆಗಾರರು ಇರಿಸಿಕೊಳ್ಳಬೇಕಾಗಿಲ್ಲ ಎಂಬುದು ಮಾರುಕಟ್ಟೆ ವರದಿ ಹೇಳುತ್ತದೆ.

ಹೊಸ ಅಡಿಕೆ ಧಾರಣೆ ಈಗ 380 ರೂಪಾಯಿ ಇದ್ದು ಈ ಧಾರಣೆ ಇನ್ನೂ ಸ್ವಲ್ಪ ಏರಿಕೆಯ ನಿರೀಕ್ಷೆ ಇದೆ. ಹಳೆ ಅಡಿಕೆ ಧಾರಣೆಯು ಸದ್ಯ 480 ರೂಪಾಯಿ ಆಸುಪಾಸಿನಲ್ಲಿಯೇ ಮುಂದುವರಿದು ನಂತರ 450 ರೂಪಾಯಿ ಆಸುಪಾಸಿನಲ್ಲಿ ಅಡಿಕೆ ಮಾರುಕಟ್ಟೆ ನಿಲ್ಲಲಿದೆ. ಭಾರೀ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆ ಏರಿಕೆಯಾದರೆ ಅಡಿಕೆ ವ್ಯಾಪಾರಿಗಳಿಗೂ, ಮಾರಾಟಗಾರರಿಗೂ ಸಮಸ್ಯೆಯಾಗುವುದರಿಂದ ಈ ಬಾರಿ ಅಡಿಕೆ ಮಾರುಕಟ್ಟೆ ನಿಯಂತ್ರಣಕ್ಕೆ ಬರಲಿದೆ. ಸಂಸ್ಥೆಗಳು ಕೂಡಾ ಅಡಿಕೆ ಮಾರುಕಟ್ಟೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆಯಾಗದಂತೆ ತಡೆಯುವ ಸಾಧ್ಯತೆ ಹೆಚ್ಚಿದೆ. ಹಿಂದೆ ಚಾಲಿ ಹೊಸ ಅಡಿಕೆ ಹಾಗೂ ಹಳೆ ಅಡಿಕೆಗೆ 20-30 ರೂಪಾಯಿ ವ್ಯತ್ಯಾಸ ಇತ್ತು. ಈ ಬಾರಿ 100 ರೂಪಾಯಿ ವ್ಯತ್ಯಾಸ ಇದ್ದು ಈ ಅಂತರ ಕಡಿಮೆಯಾಗಲಿದೆ. 450 ರೂಪಾಯಿ ಧಾರಣೆಯಲ್ಲಿ ಸ್ಥಿರವಾಗುವ ನಿರೀಕ್ಷೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

2 days ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

3 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

3 days ago