Advertisement
ಸುದ್ದಿಗಳು

Arecanut_Market | ಎಲ್ಲೆಡೆಯೂ ಅಡಿಕೆ ಮಾರುಕಟ್ಟೆ ಮೇಲೆ ಕಣ್ಣು | ಪಾಕಿಸ್ತಾನದಲ್ಲೂ ಅಡಿಕೆ ಮೇಲೆ ನಿಗಾ | 7 ಕೋಟಿ ಮೌಲ್ಯದ ಅಡಿಕೆ ವಶ |

Share

ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದಂತೆಯೇ ಭಾರತ ಮಾತ್ರವಲ್ಲ ವಿವಿಧ ದೇಶಗಳಲ್ಲೂ ಅಡಿಕೆ ಮೇಲೆ ನಿಗಾ ಇಡಲಾಗಿದೆ. ಈಚೆಗೆ ಪಾಕಿಸ್ತಾನದಲ್ಲೂ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ 7 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು  ಕಸ್ಟಮ್ಸ್ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಅಡಿಕೆ ಧಾರಣೆ ಏರಿಕೆಯಾಗಿರುವುದು  ಹಾಗೂ ಆ ಬಳಿಕ ಅಡಿಕೆ ಕಳ್ಳಸಾಗಾಣಿಕೆ ಬಗ್ಗೆ ಎಲ್ಲೆಡೆಯೂ ನಿಗಾ ವಹಿಸಲಾಗಿತ್ತು. ಈಚೆಗೆ ಪಾಕಿಸ್ತಾನದಲ್ಲೂ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವ ಬಗ್ಗೆಯೂ ವರದಿಯಾಗಿದೆ. ಅಪ್ಘಾನ್‌ ಮೂಲಕವೂ ಅಡಿಕೆ ಸಾಗಾಟವಾಗುತ್ತಿರುವ ಬಗ್ಗೆಯೂ ಆಗಸ್ಟ್‌ ತಿಂಗಳಲ್ಲಿ ವರದಿಯಾಗಿತ್ತು. ಅದಾದ ನಂತರ ಬೇರೆ ಮಾರ್ಗಗಳ ಮೂಲಕ ಅಡಿಕೆ ಕಳ್ಳದಾರಿಯ ಮೂಲಕ ಪಾಕಿಸ್ತಾನಕ್ಕೆ ಆಮದು ಆಗುವ ಬಗ್ಗೆ ಮಾಹಿತಿ ಇತ್ತು.  ಹೀಗಾಗಿ ಪಾಕಿಸ್ತಾನದ ಕಸ್ಟಮ್ಸ್ ಇಲಾಖೆಯು ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿತ್ತು. ಈ ಸಂದರ್ಭ  ಸುಮಾರು ಏಳು ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಪಡಿಸಿಕೊಂಡಿದೆ ಎಂದು  ವರದಿಯಾಗಿದೆ. ಸೆ 18  ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 48 ಸಾವಿರ ಕೆಜಿ ಅಡಿಕೆ ವಶಪಡಿಸಿಕೊಂಡಿದ್ದರು. ಒಟ್ಟು 30 ದಿನಗಳಲ್ಲಿ 13 ಕೋಟಿ ರೂಪಾಯಿಗೂ ಮಿಕ್ಕಿದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಹೀಗೆ ವಶಪಡಿಸಿಕೊಂಡ ಅಡಿಕೆಯ ವಿದೇಶಿ ಅಡಿಕೆ ಎಂದಷ್ಟೇ ದಾಖಲಾಗಿದ್ದು ಎಲ್ಲಿಯ ಅಡಿಕೆ ಎಂಬವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿಯಲ್ಲಿ  ತಿಳಿಸಿವೆ. ಪಾಕಿಸ್ತಾನದಲ್ಲಿ  ಅಡಿಕೆ ಬಳಕೆಯ ವಿವಿಧ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಗುಟ್ಕಾ ಮೊದಲಾದ ವಸ್ತುಗಳ ತಯಾರಿಕೆ ಅಲ್ಲಿ ನಡೆಯುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

11 hours ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

1 day ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

2 days ago