ಚೀನಾದ ಹುಡುಗನ ಸಾಧನೆಯನ್ನು ಮೀರಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾನೆ ಕರಾವಳಿ ಜಿಲ್ಲೆಯ ಮೂಲದ ಈ ಹುಡುಗ. ಅಷ್ಟಕ್ಕೂ ಆತ ಮಾಡಿರುವ ಸಾಧನೆ ಏನು ಗೊತ್ತಾ ? ರೂಬಿಕ್ ಕ್ಯೂಬ್‌ಗಳನ್ನು ಅತೀ ಕಡಿಮೆ ಅವಧಿಯಲ್ಲಿ ಕೂಡಿಸಿ ವಿಶ್ವ ದಾಖಲೆ ಬರೆದ ಈ ಬಾಲಕನ ಹೆಸರು ಅಥರ್ವ ಆರ್ ಭಟ್. ಮೂಲತ: ಉಡುಪಿ ಜಿಲ್ಲೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಾಜೇಂದ್ರ ಭಟ್ ಹಾಗೂ ಶೋಭಾ ರಾಜ್ ಅವರು ಪುತ್ರ.
2020 ಡಿಸೆಂಬರ್ 9 ರಂದು ನಡೆದ ಸ್ಫರ್ಧೆಯಲ್ಲಿ ಅಥರ್ವ ಭಟ್ ಈ ಸಾಧನೆಯನ್ನು ಮಾಡಿದ್ದು 1 ನಿಮಿಷ 29 ಸೆಕೆಂಡ್ ಗಳಲ್ಲಿ ಮೂರು ಕ್ಯೂಬ್ ಗಳನ್ನು ಕೂಡಿಸಿ ವಿಶ್ವದಾಖಲೆ ಮಾಡಿದ್ದಾರೆ. ವಿಶೇಷ ಎಂದರೆ ತನ್ನ ಎರಡು ಕೈ ಹಾಗೂ ಒಂದು ಕಾಲುಗಳಿಂದ ಈ ಸಾಧನೆ ಮಾಡಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಾಕಿದೆ. ಆ ಬಳಿಕ ಈ ಮಾಹಿತಿ ಹೊರಬಿದ್ದಿದೆ.ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಅಥರ್ವ ಭಟ್ ಅವರು ಸುಮಾರು 6 ವರ್ಷ ವಯಸ್ಸಿರುವಾಗ ಡಬ್ಲ್ಯೂಸಿಎ( ವರ್ಲ್ಡ್ ಕ್ಯೂಬಿಂಗ್ ಅಸೋಸಿಯೇಶನ್) ನೋಂದಾಯಿಸಿಕೊಂಡಿದ್ದರು. ಅದಾದ ನಂತರ ಭಾರತದಾದ್ಯಂತ 28 ಡಬ್ಲ್ಯೂಸಿಎ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅವರು ಇದುವರೆಗೆ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ 4 ಚಿನ್ನ, 2 ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದಿದ್ದಾರೆ. ಇದೀಗ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ.
‘
ರೂಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸುವುದು ಎಷ್ಟು ಕಷ್ಟದ ಕೆಲಸ ಎಂದು ಬಹುತೇಕ ಎಲ್ಲರಿಗೂ ಗೊತ್ತಿದೆ. ಏಕಾಗ್ರತೆ ಮತ್ತು ನಿಖರ ಲೆಕ್ಕಾಚಾರ ಇದ್ದರೆ ಮಾತ್ರ ಈ ಕ್ಯೂಬ್‌ಗಳನ್ನು ತಕ್ಷಣ ಜೋಡಿಸಬಹುದು. ಹಾಗಂತ, ಇದು ಖಂಡಿತಾ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಆದರೆ, ಕೆಲವರು ಇದೇ ಕ್ಯೂಬ್‌ಗಳನ್ನು ಕ್ಷಣಮಾತ್ರದಲ್ಲಿ ಜೋಡಿಸಿ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿ, ನೀರಿನೊಳಗೆ ಕುಳಿತು ರೂಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸಿ ದಾಖಲೆ ಬರೆದವರು ಇದ್ದಾರೆ. ಇದೀಗ ಇದೇ ಸಾಲಿಗೆ ಬೆಂಗಳೂರಿನ ಎಂಟು ವರ್ಷದ ಪುಟಾಣಿ ಕೂಡಾ ಸೇರಿದ್ದಾರೆ. ಅಥರ್ವ ಆರ್ ಭಟ್ ಎಂಬ ಎಂಟು ವರ್ಷದ ಪುಟಾಣಿಯ ಸಾಧನೆ ಇದು. ಅಥರ್ವ ಒಂದೂವರೆ ನಿಮಿಷದಲ್ಲಿ ಮೂರು ಕ್ಯೂಬ್‌ಗಳನ್ನು ಜೋಡಿಸಿದ್ದಾರೆ. ಕೈಗಳ ಮೂಲಕ ಎರಡು ಮತ್ತು ಕಾಲಿನಿಂದ ಒಂದು ರೂಬಿಕ್ಸ್ ಕ್ಯೂಬ್‌ಗಳನ್ನು ಜೋಡಿಸುವ ಮೂಲಕ ಅಥರ್ವ ದಾಖಲೆಯ ಪುಟದಲ್ಲಿ ಸ್ಥಾನ ಪಡೆದಿದ್ದಾರೆ.
2018 ರಲ್ಲಿ 1 ನಿಮಿಷ 36 ಸೆಕೆಂಡುಗಳಲ್ಲಿ ಚೀನಾದ ಹುಡುಗ ಜಿಯಾನ್ಯು ಕ್ವಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಥರ್ವ ಅವರು ಆರು ಸೆಕೆಂಡ್‌ಗಳಷ್ಟು ಕಡಿಮೆ ಸಮಯದಲ್ಲಿ ಅದೇ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ.
ಅಥರ್ವ ಅವರು ಮೂಲತ: ಉಡುಪಿ ಜಿಲ್ಲೆಯವರು. ಅವರ ಅಜ್ಜ ಯಜ್ಞ ನಾರಾಯಣ ಭಟ್ ಅವರು ಪೇಜಾವರ ಹಿರಿಯ ಶ್ರೀಗಳಿಗೆ ಪರ್ಯಾಯದ ಎಲ್ಲಾ ಸಂದರ್ಭ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಉಡುಪಿಯಲ್ಲಿ ಅಟ್ಲುದ ಯಜ್ಞಣ್ಣ ಎಂದೇ ಪ್ರಸಿದ್ಧರಾಗಿದ್ದರು.
ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆಗಳು ಗೋಚರಿಸುತ್ತಿವೆ. ಒಳನಾಡಿನಲ್ಲಿ…
ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ…
ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶಿವಮೊಗ್ಗದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ…
ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ತೋಟಗಾರಿಕೆ…