ಕಳೆದು ಮೂರ್ನಾಲ್ಕು ದಿನದಿಂದ ಔರಂಗಜೇಬ್ ವಿಚಾರ ರಾಜಕೀಯ ಪಡಸಾಲೆಯಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು.ಈಗ ಈ ಕಲಹ ರಾಜಕೀಯದಿಂದ ಸಿನೆಮಾ ರಂಗಕ್ಕೂ ಕಾಲಿಟ್ಟಿದೆ.ನಿನ್ನೆ ಶಿವಾಜಿ ವಂಶಜರ ಕಥಾ ಹಂದರವುಳ್ಳ ಇನಾಮ್ದಾರ ಸಿನೆಮಾದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಔರಂಗಜೇಬ್ ವರ್ಸಸ್ ಶಿವಾಜಿ ವಿಚಾರ ಮುನ್ನೆಲೆಗೆ ಬಂತು.
ಸಿನೆಮಾದ ಕುರಿತು ಮಾತನಾಡುತ್ತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜಕುಮಾರ ಖ್ಯಾತಿಯ ಹಿರಿಯ ನಟ ಎಮ್.ಕೆ ಮಠ ಔರಂಗಜೇಬ ಯಾವನ್ರಿ ಅವನೊಬ್ಬ ಮತಾಂಧ ಅಂತ ಹರಿಹಾಯ್ದಿದ್ದಾರೆ. ಇವನಿಂದ ದೇಶಕ್ಕೆ ಯಾವ ಅನುಕೂಲನೂ ಆಗಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರನ್ನೂ ನೋಡದೆ ಜನರನ್ನು ಕೊಂದವನು ಅವನು. ನಮ್ಮ ದೇಶದ ಎಷ್ಟು ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡಿದ್ದಾನೆ. ಅವನು ನಮ್ಮ ದೇಶದ ಮಹಾರಾಜ ಅಂತ ಸೋಶಿಯಲ್ ಮಿಡಿಯಾಗಳಲ್ಲಿ ಹೊಗಿ ಅಟ್ಟಕ್ಕೇರಿಸ್ತಿದ್ದಾರೆ. ಅಷ್ಟೆಲ್ಲಾ ಹೊಗಳುವಷ್ಟು ದೊಡ್ಡ ಜನ ಅವನಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತದನಂತರ ಖ್ಯಾತ ನಟರಾದ ಪ್ರಮೋದ್ ಶೆಟ್ಟಿ ಮಾತನಾಡಿ ಸಮಾನತೆ ಬೇಕು ಆದ್ರೆ ಇವತ್ತು ಯಾವ ತರಹದ ಸಮಾನತೆ ಇದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಅನ್ನೋ ರೀತಿ ಜನರ ನಿಲುವುಗಳಿಗೆ ಚಾಟಿ ಬೀಸಿದ್ರು. ಜನ ಆರಿಸೋ ಸರ್ಕಾರದ ಮೇಲೆ ಸಮಾಜವನ್ನು ಕಾಪಾಡುವ ಹೆಚ್ಚಿನ ಜವಾಬ್ದಾರಿ ಇದೆ. ನಾವು ಕಲಾವಿದರು, ಜನರನ್ನು ಮನರಂಜಿಸಲು ಬರ್ತೇವೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಲು ನಮ್ಮಿಂದ ಸಾಧ್ಯವಿಲ್ಲ. ಬೆಂಬಲಕ್ಕಷ್ಟೇ ನಿಲ್ಲಬಹುದು ಎಂದರು.
ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮಾತನಾಡಿ ಔರಂಗಜೇಬನ ಬ್ಯಾನರ್ ಹಾಕೋಕೆ ಅಡ್ಡಿ ಇಲ್ಲ ಆದ್ರೆ ಮೊನ್ನೆ ಸಂಘಟನೆಯೊಂದು ಶಿವಾಜಿ ಕುರಿತು ಕಾರ್ಯಕ್ರಮ ಮಾಡಲು ಹೊರಟಾಗ ಪುತ್ಥಳಿ ಇಡಲು ಬಿಡ್ಲಿಲ್ಲ.ಇವೆಲ್ಲಾ ಯಾವ ರೀತಿಯ ಧೋರಣೆ ಎಂದು ಪ್ರಶ್ನೆ ಮಾಡುತ್ತಲೆ ಶಿವಾಜಿ ಕನ್ನಡಿಗ ಎಂದು ಹೇಳುವ ಮೂಲಕ ಹೊಸದೊಂದು ವಿವಾದ ಶುರು ಮಾಡಿದ್ದಾರೆ.
ಬರೀ ಮಾತಿನಲ್ಲಷ್ಟೆ ಇದೇ ತಿಂಗಳು 27ನೇ ತಾರೀಖು ಬಿಡುಗಡೆಗೊಳ್ಳಲಿರುವ ಇನಾಮ್ದಾರ್ ಸಿನೆಮಾ ಟ್ರೈಲರ್ ನಲ್ಲೂ ಕೂಡ ಶಿವಾಜಿಯನ್ನ ಕನ್ನಡದ ಕುಲ ತಿಲಕ ಅಂತ ಕರೆಯಲಾಗುತ್ತದೆ. ಶಿವಾಜಿ ಕನ್ನಡಿಗ ಎಂಬ ಮಾತನ್ನು ಹೇಳುವ ಮೂಲಕ ವಾದ-ವಿವಾದವನ್ನು ಹುಟ್ಟು ಹಾಕಿದೆ ಈ ಇನಾಮ್ದಾರ್ ಚಿತ್ರ.
ಈ ಹಿಂದೆಯೂ ಕೂಡ ಶಿವಾಜಿ ಕನ್ನಡಿಗ ಎಂದು ಹೇಳಿದ್ದ ರಾಜಕಾರಣಿಗಳ ವಿರುದ್ಧ ಕನ್ನಡಪರ ಸಂಘಟನೆಗಳು ಗರಂ ಆಗಿದ್ವು. ಇದೀಗ ಮತ್ತೆ ಅದೇ ಹೇಳಿಕೆ ಸಿನೆಮಾದಲ್ಲಿ ಬಳಸಿರೋದ್ರಿಂದ ಪರ-ವಿರೋಧ ಚರ್ಚೆಗಳು ಈಗಾಗಲೆ ಶುರುವಾಗಿವೆ. ಇದಕ್ಕೆಲ್ಲ ಚಿತ್ರ ತಂಡ ಯಾವ ಸಮಜಾಯಿಷಿ ಕೊಡುತ್ತೆ ಕಾದು ನೋಡಬೇಕಿದೆ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…