ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಮೈತ್ರಿ..! ಹವಾಮಾನ ಸವಾಲು ಎದುರಿಸಲು ಸ್ಮಾರ್ಟ್ ಕೃಷಿ ತಂತ್ರಜ್ಞಾನಕ್ಕೆ ಒತ್ತು

May 17, 2026
7:28 AM
ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಸಹಕಾರದಿಂದ ಹವಾಮಾನ ಸ್ನೇಹಿ ಕೃಷಿ, ಡ್ರೋನ್‌, AI ಹಾಗೂ ಸ್ಮಾರ್ಟ್ ಫಾರ್ಮಿಂಗ್‌ಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೊಸ ವರದಿ ತಿಳಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಗ್ರಿಟೆಕ್ ಸಹಕಾರ ಭವಿಷ್ಯದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಡಬಹುದೆಂದು ಹೊಸ ವರದಿ ಹೇಳಿದೆ. “Australia-India AgTech Business Opportunities Report 2026” ವರದಿಯಲ್ಲಿ ಹವಾಮಾನ ಬದಲಾವಣೆ, ನೀರಿನ ಕೊರತೆ, ಉತ್ಪಾದನಾ ವೆಚ್ಚ ಏರಿಕೆ ಹಾಗೂ ಸರಬರಾಜು ಸರಪಳಿ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳ ಅಗತ್ಯವನ್ನು ಒತ್ತಿ ಹೇಳಲಾಗಿದೆ.

ವರದಿ ಪ್ರಕಾರ, ಭಾರತದಲ್ಲಿ ಈಗಾಗಲೇ 4,000ಕ್ಕೂ ಹೆಚ್ಚು ಅಗ್ರಿಟೆಕ್ ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 150 ಮಿಲಿಯನ್ ರೈತರು ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಆಸ್ಟ್ರೇಲಿಯಾದಲ್ಲಿ ಉನ್ನತ ಮಟ್ಟದ ಕೃಷಿ ಸಂಶೋಧನೆ, ನಿಯಂತ್ರಣ ವ್ಯವಸ್ಥೆ ಹಾಗೂ ನವೀನ ತಂತ್ರಜ್ಞಾನ ಅಭಿವೃದ್ಧಿಗೆ ಬಲವಾದ ಮೂಲಸೌಕರ್ಯವಿದೆ ಎಂದು ವರದಿ ವಿವರಿಸಿದೆ.

ಈ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಪ್ರಿಸಿಷನ್ ಕೃಷಿ (Precision Agriculture -ಅಂದರೆ ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸಿ “ಅಗತ್ಯವಿರುವಷ್ಟು ಮಾತ್ರ” ನೀರು, ಗೊಬ್ಬರ, ಔಷಧಿ ಹಾಗೂ ಇತರೆ ಸಂಪನ್ಮೂಲಗಳನ್ನು ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿ ಬಳಸುವ ವಿಧಾನ)  ಜೈವಿಕ ಕೃಷಿ ತಂತ್ರಜ್ಞಾನ, ಹವಾಮಾನ ಸ್ನೇಹಿ ಕೃಷಿ , ಡ್ರೋನ್‌, IoT ಸೆನ್ಸರ್‌, AI ಆಧಾರಿತ ಕೃಷಿ ನಿರ್ವಹಣೆ ಹಾಗೂ ಡಿಜಿಟಲ್ ಸರಬರಾಜು ಸರಪಳಿ ವ್ಯವಸ್ಥೆಗಳು ಸೇರಿವೆ.

ವರದಿ ಪ್ರಕಾರ, ಬೆಂಗಳೂರು, ಹೈದರಾಬಾದ್‌, ಪುಣೆ, ಮುಂಬೈ ಮತ್ತು ದೆಹಲಿ ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಸಹಭಾಗಿತ್ವದ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಸಂಯುಕ್ತ ಸಂಶೋಧನೆ, ಸ್ಟಾರ್ಟ್‌ಅಪ್‌ ಸಹಕಾರ, ಸ್ಥಳೀಯ ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಗಾಗಿ “Australia–India AgTech Innovation Fund” ಸ್ಥಾಪನೆಗೂ ಶಿಫಾರಸು ಮಾಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಮಳೆ ಅಸ್ಥಿರತೆ, ನೀರಿನ ಕೊರತೆ ಮತ್ತು ಉತ್ಪಾದನಾ ವೆಚ್ಚ ಏರಿಕೆಯನ್ನು ಎದುರಿಸಲು ಸ್ಮಾರ್ಟ್ ಕೃಷಿ ತಂತ್ರಜ್ಞಾನವೇ ಭವಿಷ್ಯದ ದಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡ್ರೋನ್‌, AI, ಸೆನ್ಸರ್‌ ಹಾಗೂ ಡೇಟಾ ಆಧಾರಿತ ಕೃಷಿ ನಿರ್ವಹಣೆಯಿಂದ ನೀರಿನ ಬಳಕೆ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸಲು ಸಾಧ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

A new Australia–India AgTech report highlights major opportunities for collaboration in climate-smart farming, precision agriculture, AI, drones, and digital farm technologies. The report says India’s scale and Australia’s research strength can together drive sustainable and resilient agricultural growth.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ‘ಲೈಟ್‌ ಅಬ್ಬರ’…! ಬೆಂಕಿಗಾಹುತಿಯಾದ ಬಸ್‌ ಘಟನೆ ಮತ್ತೆ ಎಚ್ಚರಿಸಿದ ಅಪಾಯದ ಗಂಟೆ..!
May 17, 2026
7:43 AM
by: ಸಮರ್ಥ ಸಮನ್ಯು
“ಕೋಟಿ ವೃಕ್ಷ ಅಭಿಯಾನ”ದ ಪರಿಣಾಮವೇ? ವಿಜಯಪುರದಲ್ಲಿ ತಾಪಮಾನ 40°C ದಾಟದಿರುವುದು ಆಶಾದಾಯಕ: ಸಚಿವ ಎಂ.ಬಿ. ಪಾಟೀಲ್
May 16, 2026
10:28 PM
by: ಮಿರರ್‌ ಡೆಸ್ಕ್
ಉತ್ತರ ಪ್ರದೇಶದಲ್ಲಿ ಭೀಕರ ಚಂಡಮಾರುತ – 142 ಕ್ಕೂ ಹೆಚ್ಚು ಮಂದಿ ಬಲಿ…! ಈ ದುರಂತಕ್ಕೆ ಕಾರಣವೇನು?
May 16, 2026
9:45 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗಿನಿಂದಲೇ ಮಳೆ- ಸಂಜೆ ಗುಡುಗು ಸಹಿತ ಭರ್ಜರಿ ಮಳೆ
May 16, 2026
4:24 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror