ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.