Advertisement
MIRROR FOCUS

ಆರುಷಿ ಮೈ ಡಾಟರ್ ಯೋಜನೆ ಜಾರಿಗಾಗಿ ಜಾಗೃತಿ | ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಮಾಜ ಸೇವಕನ ಪಾದಯಾತ್ರೆ

Share

ಜಗತ್ತು, ದೇಶ, ತಂತ್ರಜ್ಞಾನ ಎಷ್ಟೇ ಮುಂದುವರೆದರು ಹೆಣ್ಣು, ಗಂಡು ಎಂಬ ಕೀಳು ಭಾವನೆ ಇನ್ನು ಸಂಪೂರ್ಣವಾಗಿ ಹೋದಂತಿಲ್ಲ. ಈಷ್ಟೆಲ್ಲಾ ಶಿಕ್ಷಣ ಇದ್ರೂ ಜನ ಬದಲಾಗಿಲ್ಲ. ಹೆಣ್ಣು-ಗಂಡು ಮಕ್ಕಳು ಒಂದೇ. ಹೆಣ್ಣು (Girl Child)ಕೂಡ ಗಂಡು ಮಕ್ಕಳಷ್ಟೇ ಸಮರ್ಥಳು ಅನ್ನೋದನ್ನು ಅದೆಷ್ಟೋ ಮಂದಿ ಇವಾಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಈ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ (Fetusicide) ತಡೆಯಲು ಸಮಾಜ ಸೇವಕ ಹೊನ್ನಾಳಿ ನಗರದ ಚನ್ನೇಶ್.ಸಿ.ಎಂ ಜಕ್ಕಾಳಿ ಕನ್ಯಾಕುಮಾರಿಯಿಂದ ಸೆ 23 ರಿಂದ ದೆಹಲಿಯವರೆಗೂ ಪಾದಯಾತ್ರೆ ಮೂಲಕ ಜನ ಜಾಗೃತಿ(Public awareness) ಮೂಡಿಸಿ ದೇಶದ ಗಮನ ಸೆಳೆಯಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದೇಶದ ಗಮನ ಸೆಳೆಯಲು ಆರುಷಿ ಮೈ ಡಾಟರ್ ಅನುಷ್ಠಾನ ಕನ್ಯಾಕುಮಾರಿಯಿಂದ ಪಾದಯಾತ್ರೆ ಹೊರಟಿದ್ದು, ಅ.19ಕ್ಕೆ ದಾವಣಗೆರೆಗೆ ಆಗಮಿಸಲಿದೆ. ಯಶಸ್ವಿ ಇಪ್ಪತ್ತೊಂದನೆ ದಿನದ ಪಾದಯಾತ್ರೆ ಇದಾಗಿದೆ. ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಹಲವಾರು ವರ್ಷಗಳಿಂದ ಒಂದಿಲ್ಲೊಂದು ರೀತಿಯ ಹೊರಾಟ ನಡೆಯುತ್ತಿದ್ದರೂ ಅದಕ್ಕೆ ಬೇಕಾದ ಕಾನೂನು ನೆರಳು ಇದ್ದರೂ ಸಹಿತ ಅನುಷ್ಠಾನ ಮಾಡುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು, ವಿಫಲವಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ನಿಂತಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ದೊರಕಿಲ್ಲ.

ಪ್ರಸ್ತುತ ದಿನಮಾನಗಳಲ್ಲಿ ಯುವಕರಿಗೆ ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಬಲವಾದ ಕೂಗು ಕೇಳಿ ಬರುತ್ತಿದ್ದು ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣ ಆಗಬಹುದೆಂಬ ಆತಂಕ ಇದ್ದೆ ಇದೆ. ಇದಕ್ಕೆಲ್ಲ ಉತ್ತರ ನೀಡಬೇಕಾದ ಇಲಾಖೆ ಜನಪ್ರತಿನಿಧಿಗಳು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವ ಕೂಗು ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ. ಇದಕ್ಕೆಲ್ಲ ನವೀನ ಮಾದರಿಯ ಮೂಲಕ ತಾಯಿಯ ಗರ್ಭಾವಸ್ಥೆಯಿಂದಲೇ ಭ್ರೂಣವನ್ನು ಡಿಜಿಟಲ್ ಕೋಡ್ ನೀಡುವ ಮೂಲಕ ಹೆಣ್ಣು ಭ್ರೂಣ ತಡೆಗಟ್ಟುವ ಹಾಗೂ ಹೆಣ್ಣು ಸಂತತಿ ಉಳಿಸುವ ಪಣ ತೊಟ್ಟು ರಾಜ್ಯ ಮತ್ತು ಕೇಂದ್ರ ಸಚಿವರುಗಳ ಗಮನ ಸೆಳೆದು ಚರ್ಚಿಸಿದ್ದಾದರೂ ಅನುಷ್ಠಾನ ಆಗದಿರುವ ಬಗ್ಗೆ ಚನ್ನೇಶ್.ಸಿ.ಬೇಸರ ವ್ಯಕ್ತಪಡಿಸುತ್ತಾರೆ.

ಭ್ರೂಣ ಹತ್ಯೆ ತಡೆಗೆ ನವೀನ ಗುರುತಿನ ಮಾದರಿ ಬೇಕಾಗಿದೆ. ಬಹುತೇಕ ಸೌಲಭ್ಯಕ್ಕಾಗಿ ಪ್ರಸ್ತುತ ಗುರುತಿನ ಚೀಟಿಯಂತೆ ಇರುವ ಆಧಾರ್ ಕಾರ್ಡ್ನಂತೆ ತಾಯಿಯ (ಗರ್ಭಿಣಿಯಾದ ಮಹಿಳೆ) ಭ್ರೂಣದಿಂದಲೆ ಹೆರಿಗೆ ನಂತರದ ಆರೈಕೆಯ ಹಂತದವರೆಗೂ ಈ ನಂಬರ್ ಬಳಕೆ ಮಾಡಬೇಕು. ಆದ್ದರಿಂದ ಆರುಷಿ (ಮೈ ಡಾಟರ್) ನಡಿ ಪ್ರಸ್ತುತ ಸರ್ಕಾರದಲ್ಲಿ ಇರುವ ಆರುಷಿ ಯೋಜನೆಯ ಮೂಲಕ ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸೇವೆಯ ಮೂಲಕ ಈ ಯೋಜನೆಯನ್ನು  ಸುಲಭವಾಗಿ ಅನುಷ್ಠಾನಗೊಳಿಸಬಹುದು ಎನ್ನುತ್ತಾರೆ ಚನ್ನೇಶ್.

To prevent female foeticide, social worker Channesh CM Jakkali of Honnali Nagar has started a walk from Kanyakumari to Delhi from September 23 to raise public awareness and attract the attention of the country. Aarushi My Daughter’s implementation of Padayatra started from Kanyakumari and will arrive at Davangere on 19th. This was a successful twenty-first day trek.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

3 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

5 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

6 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

9 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

10 hours ago

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

13 hours ago