ಭಾರತೀಯ ಕಿಸಾನ್ ಸಂಘದ ವತಿಯಿಂದ ನಿಂತಿಕಲ್ಲಿನ ಎಣ್ಮೂರಿನ ಕಟ್ಟ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಸಭಾಭವನದಲ್ಲಿ ಬಲರಾಮ ಜಯಂತಿ ಆಚರಣೆ ನಡೆಯಿತು.
ಕಾರ್ಯಕ್ರಮದ ಅತಿಥಿಯಾಗಿದ್ದ ಯುವ ಕೃಷಿಕ ಪ್ರಮೋದ್ ಡ್ರಾಗನ್ ಫ್ರುಟ್ ಕೃಷಿಯ ಬಗ್ಗೆ ಮಾತನಾಡಿ, ಕೃಷಿಕರು ಅಡಿಕೆ ಮಾತ್ರವಲ್ಲ ಪರ್ಯಾಯ ಕೃಷಿಯಿಂದಲೂ ಆದಾಯ ಗಳಿಸುವ ಕಡೆಗೆ ಗಮನಹರಿಸಬೇಕಿದೆ. ನಗರದ ಉದ್ಯೋಗ ಬಿಟ್ಟು ಕೃಷಿಯನ್ನೇ ಉದ್ಯೋಗ ಮಾಡುವ ವೇಳೆ ಆರ್ಥಿಕವಾಗಿಯೂ ಯಾವುದು ಹೆಚ್ಚು ಅನುಕೂಲ ಎಂದು ಅಧ್ಯಯನ ನಡೆಸಿದ ಬಳಿಕ ಡ್ರಾಗನ್ ಫ್ರುಟ್ ಮಾಡಿದ್ದೇನೆ. ಭವಿಷ್ಯದಲ್ಲಿ ಅಡಿಕೆಯ ಜೊತೆಗೆ ಪರ್ಯಾಯವಾಗಿ ಇನ್ನೊಂದು ಕೃಷಿಯೂ ಅಗತ್ಯ ಇದೆ ಎಂದು ಯುಗ ಕೃಷಿಕ ಪ್ರಮೋದ್ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಎನ್ ಜಿ ಪ್ರಭಾಕರ ರೈ ಮಾತನಾಡಿ, ಕೃಷಿಕರು ತಮ್ಮ ಸಮಸ್ಯೆಗಳಿಗೆ ಒಂದಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಹಲವಾರು ರೈತಪರವಾದ ಕೆಲಸವನ್ನು ಭಾಕಿಸಂ ಮಾಡಿದೆ ಎಂದು ಹೇಳಿದರು.
ಈ ಸಂದರ್ಭ ದೇಶೀ ಗೋತಳಿ ಸಾಕಾಣೆ ಹಾಗೂ ಗವ್ಯ ಉತ್ಪನ್ನ ತಯಾರಕರಾದ ಮಹಾಲಿಂಗೇಶ್ವರ ಭಟ್ ಜೋಗಿಯಡ್ಕ ಹಾಗೂ ಕೃಷಿಕರಾದ ನಾಗವೇಣಿ ರೈ ಎಣ್ಮೂರುಗುತ್ತು ಇವರನ್ನು ಸನ್ಮಾನಿಸಲಾಯಿತು.
ಗೋಪಾಲಕೃಷ್ಣ ಭಟ್ ನೆಟ್ಟಾರು ಪ್ರಸ್ತಾವನೆಗೈದರು. ಭಾಕಿಸಂ ಕಾರ್ಯದರ್ಶಿ ಸಾಯಿಶೇಖರ ಕರಿಕಳ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕೋಟೆ ವಂದಿಸಿದರು.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…