Advertisement
ಸುದ್ದಿಗಳು

ಉತ್ತಮ ಮೌಲ್ಯವಿರುವ ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಿ | ರೆ|ಫಾ| ಜೋರ್ಜ್ ಅಯ್ಯನೇತ್ ಕರೆ|

Share

ಜೀವನದಲ್ಲಿ ಉತ್ತಮ ಶಿಸ್ತು ಹಾಗೂ ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಂಡು ವಿದ್ಯಾರ್ಥಿಗಳೊಂದಿಗೆ ಮಿತ್ರರಂತೆ ವರ್ತಿಸಿದರೆ ಮಕ್ಕಳ ಸರ್ವತ್ತೋಮುಖ ಬೆಳವಣಿಗೆ ಸಾಧ್ಯ ಎಂದು ಬೆಥನಿ ನವಜ್ಯೋತಿ ಪ್ರೊವಿನ್ಸಿನ ಪ್ರೊವಿನ್ಶಿಯಲ್ ಸುಪೀರಿಯರ್ , ದೀಪಿಕಾ ಮಲಯಾಳಂ ಪತ್ರಿಕೆಯ ಅಂಕಣ ಬರಹಗಾರರು ಹಾಗೂ ಉತ್ತಮ ಸಾಹಿತಿಗಳೂ ರೆ|ಫಾ| ಜೋರ್ಜ್ ಅಯ್ಯನೇತ್ ಹೇಳಿದರು.

ಅವರು ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಿದ ಅಧಿಕೃತ ಭೇಟಿ ಕಾರ್ಯಕ್ರಮದ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಉತ್ತಮ ಮೌಲ್ಯವಿರುವ ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಿ ಉತ್ತಮ ಮೌಲ್ಯಭರಿತ ಭಾರತೀಯ ಸಂಸ್ಕೃತಿಯ ವಾಹಕರಾಗಬೇಕೆಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ನಿದ್ರೆಯಲ್ಲಿ ಎನು ಮಾಡಲು ಸಾಧ್ಯವಿಲ್ಲ ಎಚ್ಚರದಿಂದಿರುವಾಗ ಮಾತ್ರ ಹೊಸತನ್ನು ಮಾಡಲು ಸಾಧ್ಯ . ಆದುದರಿಂದ ಶಿಕ್ಷಕರಾದವರು ಪ್ರತಿದಿನ ಹೊಸತನ್ನು ಕಲಿಯಬೇಕೆಂದೂ ಹೇಳಿದರು.

ವೇದಿಕೆಯಲ್ಲಿ ,ಆಡಳಿತ ಮಂಡಳಿಯ ಮೊದಲ ಸಲಹೆಗಾರರೂ ಬೆಥನಿ ನವಜ್ಯೋತಿ ಪ್ರೊವಿನ್ಸಿನ ಶಿಕ್ಷಣ ಕ್ಷೇತ್ರದ ಅಧಿಕಾರಿಯೂ ಆದ ರೆ|ಡಾ|ಫಾ| ವರ್ಗೀಸ್ ಕೈಪನಡ್ಕ ಒ.ಐ.ಸಿ, ಪ್ರೊವಿನ್ಶಿಯಲ್ ಕೋಶಾಧಿಕಾರಿಯಾದ ರೆ|ಫಾ| ಜೇಕಬ್ ಈಟಿತಡತ್ತಿಲ್ ಒ.ಐ.ಸಿ , ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ|ತೋಮಸ್ ಬಿಜಿಲಿ ಒ.ಐ.ಸಿ ಹಾಗೂ ಸಂಸ್ಥೆಯ ಉಪ ಪ್ರಾಂಶುಪಾಲರಾದ ಜೋಸ್ ಎಂ.ಜೆ. ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ|ತೋಮಸ್ ಬಿಜಿಲಿ ಒ.ಐ.ಸಿ ಸ್ವಾಗತಿಸಿ, ಶಿಕ್ಷಕಿ ಪೂರ್ಣಿಮ ಶೆಣೈ ವಂದಿಸಿದರು. ಶಿಕ್ಷಕಿ ಮಂಜು ಫಿಲಿಪ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಶಿಕ್ಷಕರೊಂದಿಗೆ ಮಕ್ತ ಚರ್ಚೆಗಳು ನಡೆಸಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

2 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

22 hours ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago