ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಗ್ಯಾರಂಟಿಯನ್ನು #Guarantee ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದೇ ಬಿಟ್ಟಿದೆ. ಈ ಗ್ಯಾರಂಟಿಗಾಗಿಯೇ ಕಾಂಗ್ರೆಸ್ ಪಕ್ಷವನ್ನು ಬಹುತೇಕ ಮತದಾರರು ಅಧಿಕಾರಕ್ಕೆ ತಂದಿದ್ದಾರೆ. ಕೊಟ್ಟ ಭರವಸೆಯಂತೆ ಗ್ಯಾರಂಟಿಗಳು ಜಾರಿಗೆ ಕೂಡ ಬಂದವು. ಇದೇ ಖುಷಿಯಲ್ಲಿ ಸರ್ಕಾರ ಹೇಳಿದಂತೆ ಗ್ಯಾರಂಟಿಯ ಪ್ರಯೋಜನ ಪಡೆಯಲು ಜನರಿಗೆ ಆನ್ ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಹೇಳಿದೆ. ಆದರೆ ಫಲಾನುಭವಿಗಳು ಎಚ್ಚರ ಇರಬೇಕಾಗಿದೆ. ನಕಲಿ ಲಿಂಕ್‌ಹಾವಳಿ ಹೆಚ್ಚಾಗಿದೆ. ಈ ಹಿಂದೆಯೂ ಹಲವು ಸಂದರ್ಭ ಇದೇ ಮಾದರಿ ನಕಲಿ ಲಿಂಕ್ ಕೆಲಸ ಮಾಡಿತ್ತು.
ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಗ್ಯಾರಂಟಿ #Guarantee ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳು ಎಚ್ಚರಿಕೆ ವಹಿಸಬೇಕು. ಯಾಕೆಂದ್ರೆ ಅರ್ಜಿ ಸಲ್ಲಿಕೆ ಮಾಡುವವರ ಮಾಹಿತಿಗೆ ಕನ್ನ ಹಾಕಲು ಸೈಬರು ಕಳ್ಳರು ಕಾಯುತ್ತಿದ್ದಾರೆ ಎನ್ನುವ ಸುದ್ದಿ ನೀಡುವ ಮೂಲಕ ಸೈಬರ್ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ. ಈ ಹಿಂದೆಯೂ ಉದ್ಯೋಗ ಮಾಹಿತಿ ಸೇರಿದಂತೆ ಇತರೇ ಸಂದರ್ಭದಲ್ಲಿಯೂ ಇಂತಹ ನಕಲಿ ಹಾವಳಿ ಹೆಚ್ಚಾಗಿತ್ತು.
ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಎಚ್ಚರವಾಗಿರಿ. ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಫೇಕ್ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ. ಇದೇ ಮಾದರಿ ವ್ಯಾಟ್ಸಪ್, ಟೆಲಿಗ್ರಾಂ ಮೂಲಕವೂ ನಕಲಿ ಜಾಲ ಕೆಲಸ ಮಾಡುತ್ತಿದೆ.ಈ ಲಿಂಕ್ ಕ್ಲಿಕ್ ಮಾಡಿ, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಬ್ಯಾಂಕ್‌ನಲ್ಲಿರುವ ದುಡ್ಡು ಸೈಬರ್ ಚೋರರ ಪಾಲಾಗೋದು ಖಚಿತ. ಹೀಗಾಗಿ ಜನ ತುಂಬಾ ಎಚ್ಚರಿಕೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಸಿಕ್ಕ ಸಿಕ್ಕ ಲಿಂಕ್‌ಗಳಲ್ಲಿ ಸಲ್ಲಿಕೆ ಮಾಡಬಾರದು ಎನ್ನುವ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ.
ಸರ್ಕಾರ ಕೂಡ ಈ ವಿಚಾರದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಇಲ್ಲದೇ ಇದ್ರೆ ಜನರಿಗೆ ತೊಂದರೆಯಾಗಲಿದೆ. ಈಗಾಗಲೇ ಸಾಕಷ್ಟು ಫೇಕ್ ಲಿಂಕ್‌ಗಳ ಜಾಲ ಕೂಡ ಹರಿದಾಡುತ್ತಿದೆ ಎಂದು ಸೈಬರ್ ತಜ್ಞರಾದ ಶುಭಾ ಮಂಗಳಾ ಎಚ್ಚರಿಸಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಎಲ್ಲೆಲ್ಲಿ ಮಾಡಬಹುದು, ಯಾವ ಲಿಂಕ್‌ನಲ್ಲಿ ಮಾಡಬೇಕು ಎನ್ನುವುದನ್ನು ಸರ್ಕಾರ ಪ್ರಕಟಿಸಿದೆ. ಹೀಗಾಗಿ ಜನ ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ತಿಳಿಸಿದ್ದಾರೆ.
ಶರಧಿ, 7 ನೇ ತರಗತಿ, ನವಚೇತನ ಆಂಗ್ಲಮಾಧ್ಯಮ ಶಾಲೆ, ವೇಣೂರು | - ದ ರೂರಲ್ ಮಿರರ್.ಕಾಂ
Bhargava Ram S, LKG 'A' Section Surana Vidyalaya, Bangalore |…
ಕೊಪ್ಪಳ ನಗರದಲ್ಲಿ ಆಯೋಜನೆಗೊಂಡಿದ್ದ ಆರು ದಿನಗಳ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನ …
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ 'ಗಗನ್ಯಾನ್' ಪ್ರಗತಿಯಲ್ಲಿದೆ. 80% ಪರೀಕ್ಷೆಗಳು ಪೂರ್ಣಗೊಂಡಿವೆ,…
ಬೆಂಗಳೂರಿನ ಕಸ ವಿಲೇವಾರಿಗೆ 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್ಗಳಾಗಿ ವಿಂಗಡಿಸಿ, ಟೆಂಡರ್…
ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿದ ಸಚಿವರು, ಅಡಿಕೆ ಬಗ್ಗೆ ಈ ವರದಿಯು…