ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ ರೈತರು ತಮ್ಮ ಜೀವಾನಾಧಾರಕ್ಕೆ ಅಡಿಕೆಯೊಂದಿಗೆ ರಬ್ಬರ್ ಕೃಷಿಯನ್ನು ಅವಲಂಬಿಸಿದ್ದಾರೆ. ರಬ್ಬರಿನ ಪರ್ಯಾಯ ಕೃಷಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಈಚೆಗೆ ರಬ್ಬರ್ ಮಾರುಕಟ್ಟೆಯಲ್ಲಿ ಉಂಟಾದ ದರ ಕುಸಿತದ ಕಾರಣದಿಂದ ಕೃಷಿಕರಿಗೆ ಸಂಕಷ್ಟವಾಗಿದೆ. ಹೀಗಾಗಿ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೊರ್ ಕುಮಾರ್ ಕೊಡ್ಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಬ್ಬರ್ ಬೆಳೆಗಾರರ ಮಾರುಕಟ್ಟೆ ಸಮಸ್ಯೆಯನ್ನು ನಿವಾರಿಸಲು ಮತ್ತು ರೈತರಲ್ಲಿ ಮಿಶ್ರಬೆಳೆಯ ಕೃಷಿಯನ್ನು ಪ್ರೋತ್ಸಾಹಿಸಲು ಕ್ಯಾಂಪ್ಕೋ ರಬ್ಬರ್ ಖರೀದಿಯನ್ನು ಮಾಡುತ್ತಿದೆ. ನೈಸರ್ಗಿಕ ರಬ್ಬರಿನ ಆಮದಿನ ಮೇಲೆ 25 ಶೇಕಡ ಮತ್ತು ಕಂಪೌಂಡ್ ರಬ್ಬರಿನ ಮೇಲೆ 10 ಶೇಕಡ ಅಮದು ಸುಂಕವಿಧಿಸಲಾಗಿದೆ. ಆದರೆ ನೈಸರ್ಗಿಕ ರಬ್ಬರ್ ವಿದೇಶದಿಂದ ಕಂಪೌಂಡ್ ರಬ್ಬರ್ ಹೆಸರಿನಲ್ಲಿ 25% ನ ಬದಲು 10% ಆಮದು ಸುಂಕಪಾವತಿಸಿ ಆಮದಾಗುತ್ತಿದೆ. ಇಲ್ಲಿನ ಉತ್ಪಾದನಾ ವೆಚ್ಚಕ್ಕಿಂತ ಮಾರುಕಟ್ಟೆ ದರ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ. ನೈಸರ್ಗಿಕ ಮತ್ತು ಕಂಪೌಂಡ್ ರಬ್ಬರ್‌ಗೆ ಏಕರೂಪ ಆಮದು ಸುಂಕ ವಿಧಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
#CAMPCO demanding for Minimum Support Price (MSP) for natural #Rubber in Karnataka. @digicampco @CMofKarnataka @nsitharaman @ShobhaBJP pic.twitter.com/M5YpUoocWC
— theruralmirror (@ruralmirror) September 7, 2022
Advertisement
ಈ ವರ್ಷ ಕೇರಳದಲ್ಲಿ ರಬ್ಬರ್ ಕೃಷಿಗೆ ಅನುಕೂಲಕರವಾದ ಹವಾಮಾನ ಇದ್ದು ಫಸಲು ಜಾಸ್ತಿಯಾಗಿ ದರ ಮತ್ತೂ ಕುಸಿಯುವ ಸಾಧ್ಯತೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಮಾರುಕಟ್ಟೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಬ್ಬರ್ ಖರೀದಿಸಬೇಕು. 2016 ರಲ್ಲಿ ರಬ್ಬರ್ ಬೋರ್ಡ್ ರಬ್ಬರಿನ ಉತ್ಪಾದನಾ ವೆಚ್ಚ ಕಿಲೊಗೆ 172 ರೂಪಾಯಿ ಎಂದು ಅಂದಾಜಿಸಿದೆ. ಪ್ರಸ್ತುತ ಅದು ಕಿಲೊಗೆ 250 ರೂಪಾಯಿಗೆ ತಲುಪಿದೆ. ಕರ್ನಾಟಕ ಸರ್ಕಾರವೂ ಕೇರಳ ಮಾದರಿಯಲ್ಲೇ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು . ರೈತರನ್ನು ರಕ್ಷಿಸುವ ಮೂಲಕ ಮಿಶ್ರಬೆಳೆ ಕೃಷಿಗೆ ಉತ್ತೇಜನ ನೀಡುವಂತೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೊ ಮನವಿ ಸಲ್ಲಿಸಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.