Advertisement
Opinion

ಹೃದಯ-ಶ್ವಾಸ ಪ್ರಚೋದನೆ ಕ್ರಿಯೆ | ಆಸ್ಪತ್ರೆಯಲ್ಲಿ ಹೃದಯ ಬಡಿತ ನಿಂತುಹೋದ ರೋಗಿಯ ಎದೆಯನ್ನು ವೈದ್ಯರು ಪದೇ ಪದೇ ಏಕೆ ಒತ್ತುತ್ತಾರೆ?

Share

ಇದನ್ನು ನೀವು ಆಸ್ಪತ್ರೆಯಲ್ಲಿ(Hospital) ನೋಡಿರದಿದ್ದರೂ ಸಿನಿಮಾದಲ್ಲಿ(Cinema) ಖಂಡಿತಾ ನೋಡಿರುತ್ತೀರಿ. ಹೃದಯವು(Heart) ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆ. ಪಂಪ್‌ನಂತೆ, ಹೃದಯವು ದೇಹದಾದ್ಯಂತ ಒತ್ತಡದಲ್ಲಿ ರಕ್ತವನ್ನು(Blood) ಚಲಿಸುವಂತೆ ಮಾಡುತ್ತದೆ. ಒಂದು ನಿಮಿಷದಲ್ಲಿ, ಹೃದಯವು 72 ಬಾರಿ ಸಂಕುಚಿತಗೊಳ್ಳುತ್ತದೆ. ಸಂಕೋಚನವನ್ನು ಸೃಷ್ಟಿಸುವ ಮತ್ತು ಹರಡುವ ಪ್ರಚೋದನೆಯು ಹೃದಯ ಸ್ನಾಯುವಿನ (ಪೇಸ್‌ಮೇಕರ್ ಅಥವಾ ಸೈನೋ-ಹೃತ್ಕರ್ಣದ ನೋಡ್) ಪ್ರಚೋದನೆಯ ಮೂಲದಿಂದ ಬರುತ್ತದೆ.

ಸಂಕೇತಗಳನ್ನು ಸೃಷ್ಟಿಸುವ ಈ ನೋಡ್ ಕೆಟ್ಟು ಅದರ ಕಾರ್ಯ ನಿಂತು ಹೋದರೆ ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಕೆಲವೊಮ್ಮೆ ಹೃದಯ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ನಾಳಗಳಲ್ಲಿನ ಅಸಮರ್ಪಕ ಕಾರ್ಯದಿಂದಾಗಿ, ಹೃದಯವು ಪೋಷಕಾಂಶಗಳಿಂದ ವಂಚಿತವಾಗುತ್ತದೆ ಮತ್ತು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯದ ಪ್ರಚೋದನೆಯ ಮೂಲದ ಕಾರ್ಯವು ಎಲೆಕ್ಟ್ರೋಕೆಮಿಕಲ್ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಲ್ಲಿಸಿದ ಹೃದಯವನ್ನು ಮರುಪ್ರಾರಂಭಿಸಲು ಹೊಸ ಪೇಸ್‌ಮೇಕರ್ ಅಥವಾ ಸ್ಫೂರ್ತಿಯ ಮೂಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಬೇಕು. ಕೆಲವೊಮ್ಮೆ ವಿದ್ಯುತ್ ಆಘಾತ ನೀಡಿ ಹೃದಯವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತದೆ.

ಎದೆಯ ಮೇಲೆ ಕೈಯಿಂದ ಬಲವಾಗಿ ಒತ್ತಿದಾಗ, ಹೃದಯದ ಮೇಲೆ ಒತ್ತಡ ಬರುತ್ತದೆ ಮತ್ತು ಅದು ಸಂಕುಚಿತಗೊಳ್ಳುತ್ತದೆ. ಇದರಿಂದ ದೇಹದಲ್ಲಿ ರಕ್ತವು ಹರಿಯುತ್ತದೆ. ಈ ರೀತಿಯ ಪುನರಾವರ್ತಿತ ಸಂಕೋಚನಗಳು ಕೆಲವೊಮ್ಮೆ ಸ್ಥಗಿತಗೊಂಡ ಹೃದಯವನ್ನು ಮರುಪ್ರಾರಂಭಿಸಬಹುದು. ಮುಖ್ಯ ವಿಷಯವೆಂದರೆ ಈ ಚಿಕಿತ್ಸೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಏಕೆಂದರೆ, ಇದನ್ನು ಮಾಡಲು ಯಾವುದೇ ಉಪಕರಣಗಳು ಅಥವಾ ಔಷಧಿಗಳ ಅಗತ್ಯವಿಲ್ಲ.

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

6 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

15 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

22 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

23 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

1 day ago