ತನ್ನ ಪ್ರವಾಸದ ಸಂದರ್ಭ ಮಿತ್ರರಿಗೆ ಉಡುಗೊರೆಯಾಗಿ ಅಡಿಕೆ ಪ್ಯಾಕೆಟ್ ಸಾಗಾಟ ಮಾಡಿದ ಆರೋಪದ ಮೇಲೆ ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನದ ಲಾಹೋರ್‌ನ 26 ವರ್ಷದ ನಿವಾಸಿ ಮುಹಮ್ಮದ್ ಅವೈಸ್ ಬಿಡುಗಡೆಯ ಜೊತೆಗೆ ಟರ್ಕಿಗೆ ಅಡಿಕೆಯನ್ನು ಶಾಶ್ವತವಾಗಿ ಸಾಗಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.
ಪಾಕಿಸ್ತಾನದ ಮುಹಮ್ಮದ್ ಅವೈಸ್ ತನ್ನ ಪ್ರವಾಸದ ವೇಳೆ ಮಿತ್ರರಿಗೆ ಎರಡು ಅಡಿಕೆ ಪ್ಯಾಕೆಟ್ ಸಾಗಾಟ ಮಾಡುತ್ತಿದ್ದ. ಈ ಸಂದರ್ಭ ಟರ್ಕಿಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಾಗರಿಕ ವಿಮಾನಯಾನ ಪ್ರಾಧಿಕಾರದ ತಪಾಸಣೆಯ ವೇಳೆ ಸಿಕ್ಕಿಹಾಕಿಕೊಂಡು ಬಂಧಿಸಲ್ಪಟ್ಟಿದ್ದ. ಪಾಕಿಸ್ತಾನದಲ್ಲಿ ಅಡಿಕೆ ನಿಷೇಧ ಇಲ್ಲ, ಆದರೆ ಟರ್ಕಿಯಲ್ಲಿ ಅಡಿಕೆಯು ಮಾದಕವಸ್ತು/ಡ್ರಗ್ಸ್ ವರ್ಗದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಅಡಿಕೆ ಸಾಗಾಟ,ಬಳಕೆ ನಿಷೇಧವಾಗಿತ್ತು. ಈ ಬಗ್ಗೆ ಅರಿವು ಇರದ ಪಾಕಿಸ್ತಾನದ ಪ್ರಜೆ ಅಡಿಕೆ ಸಾಗಾಟ ಮಾಡಿದ್ದ. ದೇಶದ ಕಾನೂನು ಪ್ರಕಾರ ಟರ್ಕಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದರು.
ಬಳಿಕ ಇಸ್ತಾನ್‌ಬುಲ್‌ನಲ್ಲಿರುವ ಪಾಕಿಸ್ತಾನಿ ದೂತಾವಾಸದ ಸತತ ಪ್ರಯತ್ನಗಳ ನಂತರ, ಇಸ್ತಾನ್‌ಬುಲ್‌ನ ಸ್ಥಳೀಯ ನ್ಯಾಯಾಲಯವು ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೇ ಮುಂದೆ ಟರ್ಕಿಯಲ್ಲಿ ಅಡಿಕೆ ಸಾಗಾಟ, ಬಳಕೆ ಮಾಡದಂತೆ ಪಾಕಿಸ್ತಾನಿ ಪ್ರಜೆಗೆ ಎಚ್ಚರಿಕೆ ನೀಡಿ ಶಾಶ್ವತವಾಗಿ ಅಡಿಕೆ ಸಾಗಾಟವನ್ನು ನಿಷೇಧ ಮಾಡಿದೆ.
ಕೆಲವು ದೇಶಗಳಲ್ಲಿ ಅಡಿಕೆ ಬಳಕೆ ಹಾಗೂ ಸಾಗಾಟಕ್ಕೆ ನಿರ್ಬಂಧ ಇದೆ. ದೇಶದ ಕಾನೂನು ಪ್ರಕಾರ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಡಿಕೆ ಪತ್ತೆಯಾದರೆ ಬಂಧಿಸಲಾಗುತ್ತದೆ.
ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…
ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…
ಇತ್ತೀಚೆಗೆ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬರುತ್ತಿದೆ. ವ್ಯಾಪಾರಿಗಳ ನಿಧಾನ ಖರೀದಿ,…
ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲು ಹಾಗೂ ಗಾಳಿ ಮಳೆಯ ಅಪಾಯ ಇರುವ ಹಿನ್ನೆಲೆಯಲ್ಲಿ…
ರಾಜ್ಯದಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೇರಳದಿಂದ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.…
ಅಕ್ಕಿ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಪರಿವರ್ತಿಸಿದಾಗ ಮಣ್ಣಿನ ನೈಟ್ರೋಜನ್ ಲಭ್ಯತೆ ಕಡಿಮೆಯಾಗುತ್ತದೆ ಎಂದು…