ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ ಬದಲಾವಣೆಗೆ ಒಗ್ಗಿದವರು ಬೇಗ ಸಂಸಾರದಲ್ಲಿ ಗೆಲ್ಲುತ್ತಾರೆ. ಹೊಂದಿ ಕೊಳ್ಳಲು ಕಷ್ಟವಾದವರು ಸಂಸಾರದಲ್ಲಿ ಸೋಲುತ್ತಾರೆ.
ಅಡುಗೆಯ ಮಾಪಕಗಳು ಒಂದೊಂದು ಮನೆಗೆ ಒಂದೊಂದು ರೀತಿ ಇರುತ್ತವೆ. ಅವುಗಳ ಕಡೆಗೆ ನಿಗಾ ಅಗತ್ಯ. ಕಿಟಕಿಯ ಒಳಗೆ ಮನಸ್ಸು ಸದಾ ನೋಡುತ್ತಿರಬೇಕು ಅದು.
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ. ಇಂದಿನ ದಿನ ಎಲ್ಲವೂ ಇದೆ. ಸಣ್ಣ ಕಿಟಕಿಯಿಂದ ದೊಡ್ಡ ಕಿಟಕಿಗೆ ತಲಪಿದೆ ಅಡುಗೆ…