ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟ ಒಂದು ದಿನದ ನಂತರ, ವಿಕ್ರಮ್ (ಲ್ಯಾಂಡರ್) ಮತ್ತು ಪ್ರಗ್ಯಾನ್ (ರೋವರ್) ಒಳಗೊಂಡ ಲ್ಯಾಂಡಿಂಗ್ ಮಾಡ್ಯೂಲ್ ಶುಕ್ರವಾರ ಮೊದಲ ಡೀಬೂಸ್ಟ್ ( ವೇಗ ತಗ್ಗಿಸುವ ಕಾರ್ಯ ) ಯಶಸ್ವಿಯಾಗಿ ಪೂರ್ಣಗೊಳಿಸಿತು. ಆಗಸ್ಟ್ 18ರಂದು ಭಾರತೀಯ ಕಾಲಮಾನ ಸಂಜೆ 4:00 ಗಂಟೆಗೆ ವಿಕ್ರಮ್ ಚಂದ್ರನ ಮೇಲ್ಮೈಯೆಡೆಗೆ ಇಳಿಯುವ ಪ್ರಕ್ರಿಯೆಯನ್ನು ಆರಂಭಿಸಿತು.ಲ್ಯಾಂಡಿಂಗ್‌ಗೆ ಮುಂಚಿತವಾಗಿ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಯಿತು. ಎರಡನೇ ಡೀಬೂಸ್ಟಿಂಗ್ ಕಾರ್ಯಾಚರಣೆ ಆಗಸ್ಟ್ 20 ರಂದು ರಾತ್ರಿ 02:00 ಗಂಟೆಗೆ (ಭಾರತೀಯ ಕಾಲಮಾನ) ನೆರವೇರಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ-3 ಯೋಜನೆ ಬಹುತೇಕ ಯಶಸ್ವಿಯಾಗುತ್ತಿದೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗಿಗೆ ಬಾಕಿ ಇದೆ. ಅಮೆರಿಕಾ, ಸೋವಿಯತ್ ಒಕ್ಕೂಟ, ಚೀನಾಗಳ ಬಳಿಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ನಾಲ್ಕನೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel