ಮಂಗಳೂರು : ಅಂತರ್ ಜಿಲ್ಲಾ ಚೆಸ್ ಟೂರ್ನಮೆಂಟ್

June 18, 2023
11:32 AM

ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ‌ ವತಿಯಿಂದ ಮಂಗಳೂರಿನ  ಕಂಕನಾಡಿ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಭಾನುವಾರ ಅಂತರ್ ಜಿಲ್ಲಾ ಚೆಸ್ ಟೂರ್ನಮೆಂಟ್ ಉದ್ಘಾಟನೆಗೊಂಡಿತು.

ಚೆಸ್ ಪಂದ್ಯಾಟವನ್ನು‌ ದೀಪಬೆಳಗಿ‌ ಉದ್ಘಾಟಿಸಿದ
ಸಾಮಾಜಿಕ ಕಾರ್ಯಕರ್ತ ಪ್ರಭಾಕರ ಶ್ರೀಯಾನ್,
ಚೆಸ್  ಬಹು ಜಾಣ್ಮೆಯ ಆಟ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಜಾಣ್ಮೆಯ ಚುರುಕುತನ ಸಾಧ್ಯ ಎಂದರು.

ಅತಿಥಿಯಾಗಿದ್ದ, ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಾರ್ಯದರ್ಶಿ ಡಾ.ರೋಶನ್ ಮಾತನಾಡಿ,ಚೆಸ್ ಮೂಲಕ ನಮ್ಮ ಬೌದ್ಧಿಕ ಮಟ್ಟ ಏರಿಕೆಯಾಗಲು ಸಾಧ್ಯವಿದೆ. ಈ ಸ್ಫರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು.


ಸಭಾಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ, ಸುನಿಲ್ ಆಚಾರ್ ಮಾತನಾಡಿ, ತಾಳ್ಮೆಯ ಹೆಚ್ಚಿಸುವಿಕೆಗೆ ಚೆಸ್ ಅಗತ್ಯವಿದೆ. ಈಗಿನ ಬದುಕಿಗೆ ತಾಳ್ಮೆ ಅಗತ್ಯವೂ ಇದೆ.‌ಇಂದು ಚೆಸ್ ಜನಪ್ರಿಯ ವಾಗುತ್ತಿದೆ ಎಂದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ ಕೋಟೆ, ಜೊತೆ ಕಾರ್ಯದರ್ಶಿ ಸತ್ಯಪ್ರಸಾದ ಕಮಿಲ, ಕೊಶಾಧಿಕಾರಿ ಪೂರ್ಣಿಮ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ ಕೋಟೆ ಸ್ವಾಗತಿಸಿದರು. ಕಾರ್ಯದರ್ಶಿ ವಾಣಿ ವಂದಿಸಿದರು.
ದಕ್ಷಿಣ ಕನ್ನಡ,‌ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 300 ಕ್ಕೂ ಅಧಿಕ ಮಂದಿ ಸ್ಫರ್ಧಾಳುಗಳು ಭಾಗವಹಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆ ವಿಸ್ತರಣೆಗೆ ವೈಜ್ಞಾನಿಕ ನಿಯಂತ್ರಣ ಅಗತ್ಯ – ಸಮಗ್ರ ಕೃಷಿ ನೀತಿ ಅನಿವಾರ್ಯ
October 27, 2026
7:02 AM
by: ದ ರೂರಲ್ ಮಿರರ್.ಕಾಂ
ಕಬ್ಬಿನ ಬೆಲೆ ನಿಗದಿ – ರೈತರ ಬೇಡಿಕೆಗಳತ್ತ ಸರ್ಕಾರದ ಗಮನ
October 27, 2026
6:23 AM
by: ದ ರೂರಲ್ ಮಿರರ್.ಕಾಂ
ನದಿ ತೀರಗಳ ಮಾಲಿನ್ಯ ಆತಂಕಕಾರಿ: ತಲಕಾವೇರಿಯಲ್ಲಿ ಕಾವೇರಿ ಜಾಗೃತಿ ರಥಯಾತ್ರೆಗೆ ಚಾಲನೆ
October 27, 2026
6:19 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ| 26.10.2026 | ಕರ್ನಾಟಕದಲ್ಲಿ ಬಿಸಿಲು, ಒಣಹವೆ ಮುಂದುವರಿಕೆ: ನವೆಂಬರ್ ಮೊದಲ ವಾರದಲ್ಲಿ ಮತ್ತೆ ಮಳೆಯ ಮುನ್ಸೂಚನೆ
October 26, 2026
10:57 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror