ಹೊನ್ನ ಹಣೆಯ ಎಲೆಹಕ್ಕಿ(golden fronted leaf bird ) ( Gold Fronted Chloropsis)
ಈ ಎಲೆಹಕ್ಕಿಯ ಗಾತ್ರ( 19 cm) ಬುಲ್ ಬುಲ್ ಹಕ್ಕಿಯಷ್ಟಿರುತ್ತದೆ. ಸಂಸ್ಕೃತದಲ್ಲಿ ಪಕ್ಷಗುಪ್ತ ,ಪತ್ರಗುಪ್ತ, ಎಂದೂ, ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಕರೆಯುತ್ತಾರೆ.
ತಲೆ, ಬೆನ್ನು , ಬಾಲ, ರೆಕ್ಕೆಗಳೆಲ್ಲವೂ ಎಲೆ ಹಸಿರು ಹಸಿರು ಇರುವುದರಿಂದ ಹಸಿರು ಹಕ್ಕಿ ಎಂಬುದು ರೂಡಿಯಲ್ಲಿರುವ ಹೆಸರು.
ಕೊಕ್ಕು, ಕುತ್ತಿಗೆ , ಕೆನ್ನೆ ಕಪ್ಪು ಬಣ್ಣದಲ್ಲಿದ್ದು, ಹಣೆಯ ಮದ್ಯದಲ್ಲಿ ಹೊಂಬಣ್ಣವಿದೆ . ಆದುದರಿಂದ ಹೊನ್ನ ಹಣೆಯ ಹಕ್ಕಿ ಎಂಬ ಹೆಸರಿದೆ. ರೆಕ್ಕೆಯ ಬುಡ, ಕೊಕ್ಕಿನ ಬುಡ ನೀಲಿಮಚ್ಚೆ ಇದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ.
ಜೋಡಿಯಾಗಿ ಇರುತ್ತವೆ, ಗುಂಪಿನಲ್ಲಿಯೂ ಇರುತ್ತವೆ. ಹೂ ಹಣ್ಣಿನ ಮರಗಳು ನೆಚ್ಚಿನ ತಾಣ. ಕಾಡುಗಳಲ್ಲಿ, ಉದ್ಯಾನವನ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ.ಹೂವಿನ ಮಕರಂದ, ಹಣ್ಣುಗಳು, ಕೀಟಗಳು ಇವುಗಳ ಆಹಾರ.
ಭಾರತ, ಬಾಂಗ್ಲಾ, ದೇಶ, ಮಾಯನ್ಮಾರ್, ಶ್ರೀ ಲಂಕಾ ಮೊದಲಾದೆಡೆಗಳಲ್ಲಿ ಕಂಡು ಬರುತ್ತದೆ. ವಲಸೆ ಹಕ್ಕಿಯಾಗಿದೆ.
ತನ್ನ ಆಕರ್ಷಕ ಬಣ್ಣ, ಮಧುರ ಧ್ವನಿಯಿಂದಾಗಿ ಮನುಷ್ಯನ ಇಷ್ಟದ ಹಕ್ಕಿಯಾಗಿದೆ. ಈ ಹಕ್ಕಿಯ ವಿಭಿನ್ನ , ವಿಶಿಷ್ಟ ಚರ್ಯೆಯಿಂದಾಗಿ ಜನರು ಪಂಜರದಲ್ಲಿಟ್ಟು ಸಾಕುತ್ತಾರೆ. ಇದು ಬಹು ಬೇಡಿಕೆಯಲ್ಲಿರುವ ಹಕ್ಕಿಯಾಗಿದೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…