ಗೂಡು ಕಟ್ಟುವ ವಿಶಿಷ್ಟವಾದ ಶೈಲಿಯಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಹಕ್ಕಿ ಯಾವುದೆಂದರೆ ಅದುವೇ ದರ್ಜಿ ಹಕ್ಕಿ. ಸಿಂಪಿಗ,ಟುವ್ವಿ ಟುವ್ವಿ ಹಕ್ಕಿ ಎಂಬ ಹೆಸರುಗಳೂ ಇವೆ. ಟೈಲರ್ ಹಕ್ಕಿಯೆಂದು ಆಂಗ್ಲ ಭಾಷೆಯಲ್ಲಿ, ಪತ್ರಪುಟ ಎಂದು ಸಂಸ್ಕೃತ ದಲ್ಲಿ ಕರೆಯುತ್ತಾರೆ.
ಈ ಹಕ್ಕಿ ಕಣ್ಣಿಗೆ ಕಾಣುವುದು ಬಲು ಅಪರೂಪ. ಬಹಳ ನಾಚಿಕೆ ಪ್ರವೃತ್ತಿ ಯ ಸ್ವಭಾವವನ್ನು ಹೊಂದಿದ್ದು ಎಲೆ, ಗಿಡಗಳ ಮರೆಯಿಂದ ಸ್ವರವನ್ನು ಕೇಳಿಯೇ ಅಲ್ಲಿ ಹಕ್ಕಿಯಿದೆಯೆಂದು ಗುರುತಿಸ ಬೇಕಷ್ಟೇ. ಸದಾ ಚಟುವಟಿಕೆಯಿಂದಿರುವ ಈ ಹಕ್ಕಿ ಜನವಸತಿಯ ಪಕ್ಕದ ಗಿಡ ಮರಗಳಲ್ಲೇ ಹೆಚ್ಚಾಗಿ ಗೂಡು ಕಟ್ಟುತ್ತವೆ. ಮರದ ಎಲೆಗಳೊಂದಿಗೆ ಸುತ್ತಮುತ್ತ ಸಿಕ್ಕುವ ಅಂಟು, ಹೂವುಗಳನ್ನೂ ಕೂಡ ಗೂಡು ನಿರ್ಮಾಣದಲ್ಲಿ ಬಳಸುವುದು ಇದರ ವಿಶೇಷತೆ. ಬಹಳ ಕಲಾತ್ಮಕವಾಗಿರುತ್ತವೆ ಹಕ್ಕಿಯ ಗೂಡು ಹದಿಮೂರು ನಮೂನೆಯ ಟೈಲರ್ ಹಕ್ಕಿಗಳಿವೆ. ಗುಬ್ಬಚ್ಚಿಗಿಂತ ಚಿಕ್ಕವು. 10 ರಿಂದ14 ಸೆಂಮೀ ನಷ್ಟು ದೊಡ್ಡದಿರುವ ಈ ಹಕ್ಕಿಯು 6 ರಿಂದ10 gm ನಷ್ಟು ತೂಕವಿರುತ್ತದೆ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಚಿತ್ರ : ಯು. ರಾಧಾಕೃಷ್ಣ ರಾವ್, ಬಾಳಿಲ
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?