Advertisement
MIRROR FOCUS

ಇಂದು ನಿರ್ಲಕ್ಷ್ಯ, ನಾಳೆ ಹಸಿವು | ಹವಾಮಾನ ಬದಲಾವಣೆಯ ಎಚ್ಚರಿಕೆ

Share

ಹವಾಮಾನ ಬದಲಾವಣೆಗೆ ತಡೆಗಟ್ಟುವ ಗಂಭೀರ ನೀತಿಗಳನ್ನು ತಕ್ಷಣ ಜಾರಿಗೊಳಿಸದಿದ್ದರೆ, 2100 ರೊಳಗೆ ವಿಶ್ವದಾದ್ಯಂತ 1.1 ಬಿಲಿಯನ್ (110 ಕೋಟಿ) ಜನರು ತೀವ್ರ ಆಹಾರ ಸಂಕಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಯುರೋಪಿಯನ್ ಯೂನಿಯನ್‌ನ ರೀಸರ್ಚ್‌ ಸೆಂಟರ್‌ EU Science Hub) ಪ್ರಕಟಿಸಿರುವ ಮಹತ್ವದ ಸಂಶೋಧನಾ ವರದಿ ಎಚ್ಚರಿಸಿದೆ.

ಈ ಅಧ್ಯಯನವು ಪ್ರತಿಷ್ಠಿತ Scientific Reports ಪತ್ರಿಕೆಯಲ್ಲಿ ಪ್ರಕಟವಾಗಿದೆ.  ಇದರಲ್ಲಿ ಕಂಡುಬಂದಿರುವ ಮುಖ್ಯ ಅಂಶಗಳು, ಹವಾಮಾನದ ಬದಲಾವಣೆಗಳು ಮಾತ್ರವಲ್ಲದೆ ಹವಾಮಾನ ಸಂಘರ್ಷ (Conflict) ಮತ್ತು ಇದರಿಂದ ಸಾಮಾಜಿಕ–ಆರ್ಥಿಕ ಅಸಮಾನತಯು  ಆಹಾರ ಭದ್ರತೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ ಎಂದು ಸೂಚಿಸಿವೆ.

ಸಂಶೋಧನಾ ಮಾದರಿಯ ಪ್ರಕಾರ, 1.16 ಬಿಲಿಯನ್ ಜನರು ಕನಿಷ್ಠ ಒಂದು ಬಾರಿ ತೀವ್ರ ಆಹಾರ ಸಂಕಟ ಎದುರಿಸಬಹುದು. ಇವರಲ್ಲಿ 600 ಮಿಲಿಯನ್‌ಗೂ ಹೆಚ್ಚು ಮಕ್ಕಳು ಸೇರಿರಬಹುದು, ಬಹುತೇಕ ಸಂಕಟಗ್ರಸ್ತರು ಆಫ್ರಿಕಾ ಮತ್ತು ಏಷ್ಯಾ ಪ್ರದೇಶಗಳಲ್ಲಿ ವಾಸಿಸುವವರು ಎಂದು ಎಚ್ಚರಿಸಿದೆ.

ಹೀಗಾಗಿ ಭವಿಷ್ಯದ ಎರಡು ದಾರಿಗಳನ್ನು ಕೂಡಾ ಈ ವರದಿ ಹೇಳಿದೆ.  ಮೊದಲನೆಯದು ಸುಸ್ಥಿರ ಕೃಷಿ ಬೆಳವಣಿಗೆ. ಎರಡನೆಯದು,  ಹಸಿರು ಬೆಳವಣಿಗೆ, ಪರಿಸರ –ಸಹಕಾರಿ ಕೃಷಿ, ನೀರು ನಿರ್ವಹಣೆ ಮತ್ತು ಹವಾಮಾನ ಸ್ನೇಹಿ ನೀತಿಗಳನ್ನು ಅನುಸರಿಸಿದರೆ,  ಆಹಾರ ಸಂಕಟ ಎದುರಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಸಮಸ್ಯೆಗೆ ಮೂಲ ಕಾರಣಗಳನ್ನು ಕೂಡಾ ಈ ವರದಿ ಹೇಳಿದೆ. ಹವಾಮಾನ ಬದಲಾವಣೆ ಒಂದು ಪ್ರತ್ಯೇಕ ಸಮಸ್ಯೆಯಲ್ಲ; ಅದು ಹಲವು ಸಂಕಷ್ಟಗಳಿಗೆ ಹೆಚ್ಚು ಕಾರಣವಾಗುತ್ತದೆ.  ತಾಪಮಾನ ಏರಿಕೆ, ನೀರಿನ ತೀವ್ರ ಕೊರತೆ, ಬೆಳೆ ಉತ್ಪಾದನೆಯಲ್ಲಿ ಕುಸಿತ,  ಸಾಮಾಜಿಕ ಅಸಮಾನತೆ ಮತ್ತು ರಾಜಕೀಯ ಅಸ್ಥಿರತೆ ಈ ಎಲ್ಲ ಅಂಶಗಳು ಸೇರಿ ವಿಶ್ವ ಆಹಾರ ಭದ್ರತೆಯನ್ನು ಅಪಾಯದ ಅಂಚಿಗೆ ತಳ್ಳುತ್ತಿವೆ.

ಈ ವರದಿಯು ನೀಡಿದ ಸಂದೇಶಗಳಲ್ಲಿ ಹವಾಮಾನ ಬದಲಾವಣೆ , ಸಾಮಾಜಿಕ ಅಸಮಾನತೆಯು ಭವಿಷ್ಯದಲ್ಲಿ ಆಹಾರ ಸಮಸ್ಯೆಗೆ ಕಾರಣವಾಗಬಹುದು.  ಆದರೆ, ಸಮತೋಲನಯುತ ನೀತಿಗಳು, ಹವಾಮಾನ ಸ್ನೇಹಿ ಕ್ರಮಗಳು ಮತ್ತು ಸಾಮಾಜಿಕ ನ್ಯಾಯವನ್ನು ಮಾಡಿಕೊಳ್ಳುವ ಅಭಿವೃದ್ಧಿ ಮಾರ್ಗ ಅನುಸರಿಸಿದರೆ, ವಿಶ್ವದಲ್ಲಿ ಸಾವಿರಕೋಟಿ ಜನರನ್ನು ಆಹಾರ ಸಂಕಟದಿಂದ ರಕ್ಷಿಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ….

ನಿಮ್ಮ ಅಭಿಪ್ರಾಯಗಳಿಗೆ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 24-09-2026 | ಸೆ.29ರಿಂದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸೆಪ್ಟೆಂಬರ್ 28–29ರಿಂದ ಹಲವು ಭಾಗಗಳಲ್ಲಿ ಮತ್ತೆ…

18 minutes ago

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ…

7 hours ago

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ

ವಿಶ್ವದ 21,439 ನದಿ ತೋಡುಗಳ ಅಧ್ಯಯನದಲ್ಲಿ ಶೇ.78.8ರಷ್ಟು ನದಿಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ…

16 hours ago

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

1 day ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

1 day ago

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’

₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್‌ 18 ಪ್ರೊ ಖರೀದಿಗಾಗಿ ದೇಶದ ಹಲವು…

2 days ago