Advertisement
ಸುದ್ದಿಗಳು

ಕೊಕೋ ಕಹಿ | ಬೇಡಿಕೆ ಇದ್ದರೂ ಬೆಲೆ ಇಳಿಕೆ.. ರೈತರು ಸಂಕಷ್ಟದಲ್ಲಿ

Share

ಕೊಕೋಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಂತೆಯೇ ಕಂಡರೂ, ಧಾರಣೆ ತೀವ್ರವಾಗಿ ಕುಸಿದಿರುವುದು ಕೊಕೋ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಕೊರೋನಾ ಹಾಗೂ ಆ ಬಳಿಕ ವರ್ಷದಲ್ಲೂ ಉತ್ತಮ ಧಾರಣೆ ಇತ್ತು. ಕಳೆದ ವರ್ಷ ಕೂಡಾ ಉತ್ತಮ ಬೆಲೆ ಕಂಡಿದ್ದ ಕೊಕೋ, ಈ ಬಾರಿ ಕೊಯ್ಲು ಹಂತದಲ್ಲೇ ನಿರೀಕ್ಷಿತ ದರ ಪಡೆಯಲು ವಿಫಲವಾಗಿದೆ. ಈ ನಡುವೆ ಕೊಕೋ ಇಳುವರಿಯಲ್ಲೂ ಉತ್ತಮ ನಿರೀಕ್ಷೆ ಇದೆ. ಅಡಿಕೆ ಜೊತೆಗೆ ಉಪಬೆಳೆಯೂ ಅಗತ್ಯ ಹೌದು. ಆದರೆ ಈಗ ಧಾರಣೆ ಇಳಿಕೆಯೂ ಮತ್ತೆ ಸಂಕಷ್ಟ ತಂದಿದೆ.

2024ರಲ್ಲಿ ಕಿಲೋಗೆ ₹320ರ ತನಕ ವ್ಯಾಪಾರಗೊಂಡಿದ್ದ ಕೊಕೋ, 2025ರ ಆರಂಭಕ್ಕೆ ₹230ರ ಮಟ್ಟಕ್ಕೆ ಇಳಿದಿದೆ. ಕೆಲ ಮಾರುಕಟ್ಟೆಗಳಲ್ಲಿ ಕಡಿಮೆ ಗುಣಮಟ್ಟದ ಕೊಕೋಗೆ ₹80–110ರಷ್ಟೇ ದರ ಸಿಗುತ್ತಿರುವುದು, ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿಗೆ ರೈತರನ್ನು ತಳ್ಳಿದೆ.

ಸಾಮಾನ್ಯ ಮಾರುಕಟ್ಟೆ ನಿಯಮದಂತೆ ಬೇಡಿಕೆ ಹೆಚ್ಚಿದರೆ ಬೆಲೆ ಏರಬೇಕು. ಆದರೆ, ಕೊಕೋ ಮಾರುಕಟ್ಟೆಯಲ್ಲಿ ಈ ತತ್ವ ಉಲ್ಟಾ ಆಗಿದೆ.
ಈ ವರ್ಷ ಹವಾಮಾನ ಅನುಕೂಲವಾಗಿದ್ದರಿಂದ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ನಡುವೆಯೇ ಧಾರಣೆ ಕುಸಿತವು ಕೃಷಿಕರಿಗೆ ನಿರಾಸೆ ಮೂಡಿಸಿದೆ.  ಕೊಕೋ ಬೆಲೆ ಕುಸಿತದಿಂದ ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿ ಇದೆ. ಕಾರ್ಮಿಕ ಹಾಗೂ ಸಂಸ್ಕರಣಾ ವೆಚ್ಚ ಹಾಗೂ ಮುಂದಿನ ಬೆಳೆ ನಿರ್ವಹಣೆಗೆ ಹಣದ ಕೊರತೆ ಎದುರಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಉತ್ಪಾದನೆ ಹೆಚ್ಚಾಗಿರುವುದು ಸಾಮಾನ್ಯವಾಗಿ ಬೆಳೆಗಾರರಿಗೆ ಉತ್ತಮ ಸುದ್ದಿ. ಆದರೆ, ಕೊಕೋದಲ್ಲಿ ರೈತರಿಗೆ ಲಾಭವಾಗದೆ, ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಮೌಲ್ಯವರ್ಧನೆ ಇಲ್ಲ, ಸಂಸ್ಕರಣಾ ಘಟಕಗಳ ಕೊರತೆ, ರಫ್ತು ಮಾರ್ಗಗಳ ಸೀಮಿತತೆ ಇದೆಲ್ಲಾ ಪರಿಣಾಮ ಬೀರಿದೆ. ಕೊಕೋ ಧಾರಣೆ ಕುಸಿತ ಬೆಲೆ ಸಮಸ್ಯೆ ಮಾತ್ರವಲ್ಲ.ಇಂದು ಮಲೆನಾಡಿನಲ್ಲಿ ಉಂಟಾಗಿರುವ ಅಡಿಕೆ ಎಲೆಚುಕ್ಕಿ ರೋಗ ಸಹಿತ ಹವಾಮಾನದ ಸಂಕಷ್ಟದ ನಡುವೆ ಕೊಕೋದಂತಹ ಉಪಬೆಳೆ ವರದಾನವಾಗಿತ್ತು.  ಇದು ಗ್ರಾಮೀಣ ಆರ್ಥಿಕತೆಯ ಪುನಶ್ಚೇತನವೂ ಆಗಿತ್ತು. ಆದರೆ ಈಗ ಕೊಕೋ ಧಾರಣೆಯೂ ಕುಸಿತವಾಗಿರುವುದು ಮತ್ತೆ ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಯಾವುದೇ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿದಾಗ ಬೆಲೆ ಕುಸಿಯುವುದು ರೈತನ ಹಣೆಬರಹ ಅಲ್ಲ, ಅದು ಸರ್ಕಾರದ, ಸಂಸ್ಥೆಗಳ ನೀತಿಯ ಸೋಲು!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

3 minutes ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

6 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

7 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

14 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

22 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

23 hours ago