ಒಂದು ಭತ್ತ ದ ಕಾಳಿಗಿಂತ ಅಡಿಕೆ ಕಾಯಿ ಎಷ್ಟು ದೊಡ್ಡ ಇರಬಹುದು…? ಭತ್ತದ ಕಾಳಿಗಿಂತ ಅಡಿಕೆ ಕನಿಷ್ಠ ನೂರುಪಟ್ಟಾದರೂ ದೊಡ್ಡದಿರಬಹುದಲ್ವ….?. ಆದರೆ, ಬತ್ತದ ಕಾಳನ್ನು ಮಿಲ್ ಗೆ ಅಕ್ಕಿ ಮಾಡಲು ಹಾಕಿದಾಗ ತುಂಬಾ ಸುಸೂತ್ರವಾಗಿ “ಅಕ್ಕಿ”ಯಾಗುತ್ತದೆ , ಬೇಕಾದಷ್ಟು ಪಾಲೀಷ್ ಆಗುತ್ತದೆ , ನುಚ್ಚು, ನೆಲ್ಲು , ಕಲ್ಲು , ದೂಳು ಮತ್ತು ಹೊಟ್ಟು ಬೇರೆಯಾಗುತ್ತದೆ.
ಆದರೆ ನೀವು ಯಾವತ್ತಾದರೂ ನಮ್ಮ “ಅಡಿಕೆ ಕಾಯಿ ” (ಹಸಿ – ಒಣ) ಸುಲಿಯುವ ಯಂತ್ರದಲ್ಲಿ ಯಾಕೆ ಇಷ್ಟು ಸಲೀಸಾಗಿ ನೀಟಾಗಿ “ಅಡಿಕೆ” ಸುಲಿದು ಹೊರಬರೋಲ್ಲ…? ಅಂತ ಚಿಂತನೆ ಮಾಡಿದ್ದೀರಾ…?.
ಇಪ್ಪತ್ತೈದು ವರ್ಷಗಳ ಹಿಂದೆ ಸಾಗರದ ತಂತ್ರಜ್ಞರೊಬ್ಬರ ತಂತ್ರಜ್ಞಾನದ ಮೊದಲ ಅಡಿಕೆ ಸುಲಿಯುವ ಯಂತ್ರ ತೀರ್ಥಹಳ್ಳಿ ಯ ಉದ್ಯಮಿಯೊಬ್ಬರ ಮೂಲಕ ಹೊರ ಬಂತು. ಅಲ್ಲಿಂದೀಚೆಗೆ ಅದೇ ತಂತ್ರಜ್ಞಾನ ಬೆಳವಣಿಗೆ ಯಾಗುತ್ತಾ ಯಂತ್ರ ದ ಬಣ್ಣ ಗಾತ್ರ , capacity ಬದಲಾಯಿತು ಅದರ ಹೊರತಾಗಿ ಬೇರೆ ಯಾವ ತಾಂತ್ರಿಕ ಬದಲಾವಣೆಯೂ ಆಗಿಲ್ಲ…!!
ಅಡಿಕೆ ಸುಲಿಯುವ ಯಂತ್ರದಿಂದ ಅಡಿಕೆ ಕಾಯಿ forcefully ಅಗೆದು ಕಚ್ಚಿ ಚುಚ್ಚಿ ಹಿಂಡಿ ಸುಲಿಬೇಳೆ ಸುಲಿದು ಕೊಡುವ ವ್ಯವಸ್ಥೆ ಬದಲಾಗಿಲ್ಲ…!!. ಈ ಯಂತ್ರ ದಲ್ಲಿ ಕೆಲವು ಕಡಿಮೆ ಕಚ್ಚುತ್ತದೆ ಕೆಲವು ಹೆಚ್ಚು ಕಚ್ಚುತ್ತದೆ ಅಷ್ಟೇ .. !!
ಎಲ್ಲಾ ಯಾಂತ್ರಿಕ ಅಡಿಕೆ ಸುಲಿ ಯಂತ್ರಗಳು ಕಚ್ಚಿ ಹಿಂಡಿ ಅಗೆದು ಉಗಿದು ಬಿಸಾಡುತ್ತವೆ. ಯಾವುದೇ ಯಂತ್ರ ವೂ ಈ ಪ್ರಕ್ರಿಯೆಯಲ್ಲಿ ಬಿನ್ನವಿಲ್ಲ. ಎಲ್ಲಾ ಯಂತ್ರ ಗಳೂ ಒಂದೇ. ಎಲ್ಲಾ ಯಂತ್ರ ಗಳಿಗೂ ಮೂರು ಮೂರು ಜನ ಬೇಕೇ ಬೇಕು.
ನಮ್ಮ ರೈತರು ಅಡಿಕೆ ಸುಲಿಯುವ ಯಂತ್ರ ದಿಂದ ಸುಲಿದು ಹೊರ ಬರುವ ಟ್ರೇ ಎದುರು ಕಣ್ಣರಳಿಸಿ ನೋಡ್ತಾರೆ.. ಆದರೆ ರೈತ ಬಾಂಧವರು ಆ ಅಡಿಕೆ ಸುಲಿ ಯಂತ್ರದಿಂದ ಹೊರ ಬರುವ ಅಡಿಕೆ ಸಿಪ್ಪೆಯನ್ನು ಪರೀಕ್ಷೆ ಮಾಡಿ ನೋಡಿರುತ್ತಾರಾ…?
ಸಿಪ್ಪೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ನಷ್ಟವಾಗಿ ಹೋಗುತ್ತದೆ. ಹಸ ಮಾದರಿಯ ಎಳೆ ಅಡಿಕೆಕಾಯಿ ಯಂತ್ರದ ಮೊಳೆಯ ಹೊಡೆತಕ್ಕೆ ಅರೆದು ನುಜ್ಜು ಗೊಜ್ಜಾಗಿ ಹೋಗಿರುತ್ತದೆ, ಅಡಿಕೆ ಸುಲಿಯುವ ಯಂತ್ರ ಶಕ್ತಿ ಮೀರಿ ಅಡಿಕೆಯನ್ನು ಹಿಂಡುವುದರಿಂದ ಅಡಿಕೆ ಯಲ್ಲಿನ ಚೊಗರಿನ ಅಂಶದಲ್ಲಿ ಗಣನೀಯವಾಗಿ ಹಿಂಡಿ ಹೋಗಿ ಅಡಿಕೆ ಬೇಯಿಸಿ ನಂತರ ಅದನ್ನು ಒಣಗಿಸಿದಾಗ ಅಡಿಕೆ ತೂಕ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಯಾಗಿರುತ್ತದೆ. ಇವತ್ತು ಅಡಿಕೆ ಯನ್ನು ನೇರವಾಗಿ ತಿನ್ನುವವನೇ ಅಡಿಕೆ ಗ್ರಾಹಕನಾಗಿದ್ದಿದ್ದಲ್ಲಿ ಮಿಷನ್ ನಲ್ಲಿ ಸುಲಿದ ಬಣ್ಣ ರುಚಿ ಆಕಾರವಿಲ್ಲದ ಅಡಿಕೆ ಯನ್ನು ಖಂಡಿತವಾಗಿಯೂ ಕೊಳ್ಳುತ್ತಲೇ ಇರಲಿಲ್ಲ….!.
ಗುಟ್ಕಾ ತಯಾರಕನೇ ಅಡಿಕೆ ಖರೀದಿದಾರನಾಗಿರುವುದರಿಂದ ಅವನಿಗೆ ಅಡಿಕೆ ಯ ಬಣ್ಣ ಗುಣಮಟ್ಟ ಕ್ಕಿಂತ quantity ಮಾತ್ರ ಮುಖ್ಯ ವಾಗಿದ್ದರಿಂದ ಅಡಿಕೆ ಖರೀದಿ ಯಾಗುತ್ತಿದೆ. ಈ mechanical ಅಡಿಕೆ ಸುಲಿಯುವ ಯಂತ್ರ ತಂತ್ರಜ್ಞಾನದಲ್ಲಿ ಬದಲಾವಣೆಯಾಗದೇ ಉಳಿದಿರುವದಕ್ಕೆ ಈ ಗುಟ್ಕಾ ಕಂಪನಿಯ ಖರೀದಿದಾರರೂ ಕಾರಣ.
ಅಡಿಕೆ ಕಾಯಿ ಗಾತ್ರ ಬೇರೆ ಬೇರೆಯಾಗಿರುವುದು ಮತ್ತು ಮಾದರಿ (ಹಸ -ಎಳೆಯ ಅಡಿಕೆ , ಬೆಟ್ಟೆ – ಮದ್ಯಮ ಎಳೆಯ ಅಡಿಕೆ, ಇಡಿ – ಪೂರ್ಣ ಬೆಳೆದ ಅಡಿಕೆ, ಗೊರಬಲು- ಅತಿ ಬೆಳೆದ ಅಡಿಕೆ) ಬೇರೆ ಬೇರೆಯಾಗಿರುತ್ತದೆ. ಆದರೆ ಈ mechanical ಅಡಿಕೆ ಸುಲಿಯುವ ಯಂತ್ರಗಳಲ್ಲಿ ಈ ಅಡಿಕೆ ಕಾಯಿಯ ಮಾದರಿ ಗುರುತಿ ಸಲಾರದೇ ಎಲ್ಲಾ ಮಾದರಿಯ ಅಡಿಕೆ ಗೂ ಅದೇ ಅಥವಾ ಒಂದೇ ಜಿoಡಿಛಿe ನಲ್ಲಿ ಸುಲಿ ಯುವುದರಿಂದ ನಷ್ಟವಾಗುತ್ತಿದೆ.ಅಡಿಕೆ ಕಾಯಿಯೂ ಗುಣಮಟ್ಟದಲ್ಲಿ ಹಾಳಾಗುತ್ತದೆ, ನಷ್ಟ ವಾಗುತ್ತಿದೆ ಮತ್ತು ವಿದ್ಯುತ್ ಕೂಡ ಅಗತ್ಯಕ್ಕಿಂತ ಹೆಚ್ಚು ಬಳಕೆಯಾಗುತ್ತದೆ…!!
ಈಗ ಮಾರುಕಟ್ಟೆ ಯಲ್ಲಿ ಹೊಸ ತಯಾರಿಕಾ ಸಂಸ್ಥೆಯ ಅಡಿಕೆ ಸುಲಿಯುವ ಯಂತ್ರ ಬಂದಿದೆ ಎಂದು ಯಾರಾದರೂ ಹೇಳಿದರು ಅಂತ ಆ ಹೊಸ ಯಂತ್ರದ ಕಾರ್ಯ ಕ್ಷಮತೆಯನ್ನು ನೋಡಲು ಹೋದರೆ ನಿರಾಸೆ ಖಂಡಿತ. ಹೊರಗಿನಿಂದ ಬಣ್ಣ ಬಣ್ಣ … ಚಂದ ಚಂದ…
ಎಲ್ಲಾ ಅಡಿಕೆ ಸುಲಿಯುವ ಯಂತ್ರ ದವರು ಈ ಕ್ಷೇತ್ರದಲ್ಲಿ ನಾವೇ ನಂಬರ್ “ಒನ್ ” ಎನ್ನುತ್ತಾರೆ. ಆದರೆ ಎಲ್ಲಾ ಅದೇ ಬಗೆ…
ಹೊರಗಿನ ಕವರ್ ತೆಗದರೆ ಎಲ್ಲಾ ಅದೇ ಬೆಲ್ಟ್ ಅದೇ ಮೊಳೆ ಅಷ್ಟೇ….
ಅಡಿಕೆ ಸುಲಿಯುವ ಯಂತ್ರ ಎಲ್ಲಿಯವರೆಗೆ mechanical ಆಗಿರುತ್ತದೋ ಅಲ್ಲಿಯವರೆಗೆ ಅಡಿಕೆ ಸುಲಿಯುವ ಗುಣಮಟ್ಟ ದಲ್ಲಿ ಯಾವುದೇ ಬದಲಾವಣೆ ಆಗೋಲ್ಲ…!!. ಈಗಿನ ಅಡಿಕೆ ಸುಲಿಯುವ ಯಂತ್ರ ಮನುಷ್ಯ ರಿಂದ ಅಡಿಕೆ ಸುಲಿದು ಪೂರೈಸಲಾಗದ ಅನಿವಾರ್ಯ ಕಾರಣದಿಂದ ನೆಡೆಯುತ್ತಿದೆ. ಅಡಿಕೆ ಕಾಯಿಯನ್ನು , ಹಿಂಡಿ ಅಗೆದು ಜಗೆದು ಉಗಿಯುವ ಈ ಸುಲಿ ಯಂತ್ರಗಳು ಖಂಡಿತವಾಗಿಯೂ ಮನುಷ್ಯರು ಅಡಿಕೆ ಸುಲಿಯುವುದಕ್ಕೆ ಪರ್ಯಾಯವಲ್ಲ. ಕೇವಲ ಅನಿವಾರ್ಯತೆಯೇ ಈ ಯಂತ್ರ ದ ಬಳಕೆಗೆ ಕಾರಣ….
ಯಾಕೆ ಹೀಗಾಗತ್ತಿದೆ….?. ಅಡಿಕೆ ಸುಲಿಯುವ ಯಂತ್ರ ಮಾರುಕಟ್ಟೆ ಗೆ ಬಂದ ಆರಂಭದಲ್ಲಿ ಆಗಲೇ ದೊಡ್ಡ ಅಡಿಕೆ ಬೆಳಗಾರರಿಗೆ ಅಡಿಕೆ ಸುಲಿತ ಸಂಸ್ಕರಣೆಯ ಸಮಸ್ಯೆ ಆರಂಭವಾಗಿತ್ತು. ಏನೇ ಮಾಡಿದರೂ manually ಅಷ್ಟು ಪ್ರಮಾಣದ ಅಡಿಕೆ ಸುಲಿದು ಪೂರೈಸ ಲಾಗುತ್ತಿರಲಿಲ್ಲ. ಅಡಿಕೆ ಕೊಳೆಯದೆ ಸಕಾಲದಲ್ಲಿ ಸಂಸ್ಕರಣೆ ಆದಷ್ಟು ಆದರೆ ಸಾಕಿತ್ತು. ಹಾಗಾಗಿ ಅಂದಿನಿಂದಲೂ ಇಂದಿನವರೆಗೂ ದೊಡ್ಡ ಬೆಳೆಗಾರರು ಅಡಿಕೆ ಸುಲಿಯುವ ಯಂತ್ರದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಗುಣಮಟ್ಟವನ್ನು ಅಪೇಕ್ಷಿಸುತ್ತಿಲ್ಲ …!!
ಎಂದಿನಂತೆ ಸಣ್ಣ ಬೆಳೆಗಾರರ ಧ್ವನಿ ಕ್ಷೀಣ ಆದ್ದರಿಂದ ಅಂದಿನಿಂದ ಇಂದಿನವರೆಗೂ ಅಪ್ ಡು ಡೇಟಾಗದ ಯಂತ್ರ ಹಾಗೇ ಮುಂದುವರಿದಿದೆ…!!
ಇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಅಡಿಕೆ ಬೆಳೆ ಆವತ್ತು ಮತ್ತು ಇವತ್ತು ಕೂಡ ಎಷ್ಟೇ ಅಡಿಕೆ ಬೆಳೆ ವಿಸ್ತರಣೆ ಆಗಿದೆಯೆಂದರೂ ಜಾಗತಿಕವಾಗಿ ಅತಿ ಕಡಿಮೆ ವಿಸ್ತೀರ್ಣ ದಲ್ಲಿ ಬೆಳೆಯುವ ಬೆಳೆ ಯಾಗಿದೆ. ಇವತ್ತು ಮಿತಿ ಮೀರಿ ಅಡಿಕೆ ತೋಟ ವಿಸ್ತರಣೆ ಯಾಗಿದೆ ಎನ್ನುವುದು ಅಡಿಕೆ ಬೆಳೆಗಾರರ ದೃಷ್ಟಿಯಿಂದ ಮಾತ್ರ , ಆದರೆ ಜಾಗತಿಕ ದೃಷ್ಟಿಯಿಂದ ಅಡಿಕೆ ಬೆಳೆ ವಿಸ್ತೀರ್ಣ ನಗಣ್ಯ. ಅಡಿಕೆ ಬೆಳೆ ಜಗತ್ತಿನ ಒಟ್ಟಾರೆ ಕೃಷಿ ಕ್ಷೇತ್ರದ ದೃಷ್ಟಿಯಿಂದ ನಗಣ್ಯ ವಾಗಿದೆ. ಹಾಗಾಗಿ ಹೊಸ ಹೊಸ ತಂತ್ರಜ್ಞಾನ ಬರಲಿಲ್ಲ..!! ಬರುತ್ತಿಲ್ಲ…!!. ಇವತ್ತು ಅಡಿಕೆ ಎಲೆಚುಕ್ಕಿ ರೋಗ ಹಳದಿ ಎಲೆ ರೋಗಕ್ಕೆ ಸಂಶೋಧನೆಗಳು ಆಗುತ್ತಿಲ್ಲದ ಮುಖ್ಯ ಕಾರಣವೂ ಇದೆ.
ಬತ್ತ ರಾಗಿ ಕಬ್ಬು ಇತ್ಯಾದಿ ಆಹಾರ ಬೆಳೆಗಳ ಬೆಳೆ ವ್ಯಾಪ್ತಿ ದೊಡ್ಡದು. ವಿಶ್ವದಾದ್ಯಂತ ಇದೆ. ನಮ್ಮ ನೆರೆಯ ಅನೇಕ ದೇಶಗಳಲ್ಲಿ ಅಡಿಕೆ ಬೆಳೆಯುತ್ತಾರಾದರೂ ಅಲ್ಲೆಲ್ಲಾ ಅಡಿಕೆ “ಕಾಡು ಬೆಳೆ…!!” ಅಡಿಕೆ ಬೆಳೆಯನ್ನು ವ್ಯವಸ್ಥಿತವಾಗಿ ಬೆಳೆಯುವ ದೇಶ ಭಾರತ ಮಾತ್ರ.
ಕೇವಲ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಅಡಿಕೆ ಕೊನೆಗೆ ಸಿಂಪಡಣೆ ಮಾಡುವ ಔಷಧ ಸ್ಪ್ರೇಯರ್ ಗಳು, ಅಡಿಕೆ ಮರ ಏರುವ ಬೈಕ್ ಗಳು, ಕಾರ್ಬನ್ ಫೈಬರ್ ದೋಟಿಗಳು ಪ್ರಚಲಿತ ವಾಗತೊಡಗಿದೆ. ಈ ತಂತ್ರಜ್ಞಾನದ ಉಪಯೋಗದ ಲಭ್ಯತೆ ಅಡಿಕೆ ಬೆಳೆ ಸಂಸ್ಕರಣೆಯ ವಿಷಯದಲ್ಲಿ ಅತ್ಯಂತ ನಿಧಾನವಾಗಿದೆ ಅಲ್ವೆ…? ತಂತ್ರಜ್ಞಾನಿಗಳು, ತಾಂತ್ರಿಕ ಹೂಡಿಕೆದಾರರನ್ನ ಅಡಿಕೆ ಕೃಷಿ/ಕೃಷಿಕರು ಆಕರ್ಷಿಸಿಲ್ಲ ದಿರುವುದು ಅಚ್ಚರಿಯ ಸಂಗತಿ.
ಅಡಿಕೆ ಸುಲಿಯುವ ಯಂತ್ರ ಘರ್ಷಣೆ ಯಿಲ್ಲದೇ ಅಡಿಕೆ ಕಾಯಿಗೆ ಗಾಯಮಾಡದೇ ಅಡಿಕೆಯ ಮೇಲು ಹೊದಿಕೆ (wrapper)) ಗೆ ಹಾನಿ ಮಾಡದೆ ಅಡಿಕೆ ಕಾಯನ್ನ ಹಿಂಡದೆ, ಅಡಿಕೆ ಯ ಮೇಲಿನ ಮುಗುಸು ತೆಗೆದು ಅಡಿಕೆ ಸುಲಿಯುವ ಅಡಿಕೆ ಸುಲಿಯುವ ಪರಿಪೂರ್ಣ ಯಂತ್ರ “ಅಡಿಕೆ ಸುಲಿಯುವ” ಯಂತ್ರ ಮಾರುಕಟ್ಟೆ ಗೆ ಬಂದು ಇಪ್ಪತ್ತು ವರ್ಷಗಳಾದರೂ ಇನ್ನೂ ಹೊಸ moಜiಜಿಥಿ ಯಂತ್ರ ಯಾಕೆ ಬಂದಿಲ್ಲ…!!??. ಪ್ರತಿ ಅಡಿಕೆ ಕೊಯ್ಲಿನಲ್ಲೂ ಈ ಅಡಿಕೆ ಸುಲಿಯುವ ಯಂತ್ರ ಗಳನ್ನು ನೋಡಿದಾಗ ಈ ಪ್ರಶ್ನೆ ಕಾಡುತ್ತದೆ.
ಈ ದೇಶದಲ್ಲಿ ಅದೆಷ್ಟು ತಾಂತ್ರಿಕ ವಿಶ್ವವಿದ್ಯಾಲಯ ಗಳಿವೆ..!! ಎಷ್ಟು ಜನ ಸಂಶೋಧಕರು ಹೊಸ ಹೊಸ ಯಂತ್ರ ಗಳನ್ನು ಆವಿಷ್ಕಾರ ಮಾಡುವವರಿದ್ದಾರೆ.. !! ಆದರೆ ಯಾರಿಗೂ ಅಡಿಕೆ ಸುಲಿಯುವ ಹೊಸ ಬಗೆಯ compact ಆದ ಯಂತ್ರ ಸಂಶೋಧಿಸುವ ತಯಾರಿಸುವ ಆಸಕ್ತಿ ಯಾಕಿಲ್ಲ…?!
ಒಮ್ಮೆ ಆಲೋಚಿಸಿ ಬಂಧುಗಳೇ… ಇದೇ ಅಡಿಕೆ ಸುಲಿತ ಚೀನಾ ದಲ್ಲೋ, ಜಪಾನ್ ನಲ್ಲೋ , ಕೊರಿಯಾ ದೇಶದಲ್ಲೋ ಇದ್ದಿದ್ದರೆ ಇಷ್ಟೊತ್ತಿಗೆ ಎಂಥಹ ಅಡ್ವಾನ್ಸ್ಡ್ ಆದ ಅಡಿಕೆ ಸುಲಿ ಯುವ ಯಂತ್ರ ಗಳು ಬರುತ್ತಿದ್ದವೇನೋ…?!! ಅಲ್ವ…!?
ಈ ಕಂಪ್ಯೂಟರಿಕೃತ ಆಟೋಮಿಷನ್ ತಾಂತ್ರಿಕ ಉತ್ಕರ್ಷತೆಯ ಈ ಹೊತ್ತಿನಲ್ಲಿ ಅಡಿಕೆ ಸುಲಿಯುವ ಯಂತ್ರ ಗಳಲ್ಲಿ ಅದೆಷ್ಟು ನವನಾವಿನ್ಯತೆ ಬರಬೇಕಿತ್ತು…? ಇವತ್ತಿಗೂ ಬರುತ್ತಿರುವ ನೂರಕ್ಕೆ ನೂರರಷ್ಟು ಅಡಿಕೆ ಸುಲಿಯುವ ಯಂತ್ರ ಗಳು mechanical . ..!!!. ನಾವು ಅಡಿಕೆ ಬೆಳೆಗಾರರು ನಮ್ಮ ಅಡಿಕೆ ಹಿಡುವಳಿಯ ಸಾಮರ್ಥ್ಯ ಕ್ಕೆ ತಕ್ಕಂತೆ ಅಡಿಕೆ ಸುಲಿಯುವ ಯಂತ್ರ ಅಪೇಕ್ಷೆ ಮಾಡುತ್ತಿದ್ದೇವೆ.
ಇತ್ತ ಕಡೆಯಿಂದ ಅಡಿಕೆ ಕೊನೆ ಹಾಕಿದರೆ ಅದರ ‘ಮಾದರಿಗೆ’ ತಕ್ಕಂತೆ ಕಂಪ್ಯೂಟರಿಕೃತ ಸ್ಕ್ಯಾನರ್ ಗಳು ‘ಹಸ ಬೆಟ್ಟೆ ಇಡಿ ‘ ಗಳನ್ನ ಬೇರೆ ಬೇರೆ ಜಿoಡಿಛಿe ನಲ್ಲಿ ಸುಲಿದು, ಅಡಿಕೆ ಯಂತ್ರ ದಲ್ಲಿ ಬೇರೆ ಬೇರೆ ವಿಭಾಗವಾಗಿ , ಅಲ್ಲೇ ಅಡಿಕೆ ಬೆಂದು, ಯಂತ್ರದೊಳಗಿರುವ ಡ್ರೇಯರ್ ನಲ್ಲೇ ಅಡಿಕೆ ಒಣಗಿ ರೆಡಿ ಟು ಮಾರ್ಕೇಟ್ ಆಗಿ ಹೊರಗೆ ಬರುವಂತಹ ಯಂತ್ರ ಯಾವತ್ತು ಸಂಶೋಧನೆಯಾಗಿ ಎಂದು ತಯಾರಾಗಿ ಮಾರುಕಟ್ಟೆಗೆ ಬರುತ್ತದೆ….?. ಇದು ತಿರುಕನ ಕನಸೇ …? ಇದು ಸಾದ್ಯವಿಲ್ಲವೇ..?.
ಬಂಡವಾಳ ಶಾಹಿ ಉದ್ಯಮಿಗಳು, ಅಡಿಕೆ ಮಾರಾಟ ಸಹಕಾರಿ ಸಂಘಗಳು ಅಡಿಕೆ ಸುಲಿಯುವ ಹೊಸ ಯಂತ್ರ ಗಳ ವಿಷಯ ದಲ್ಲಿ ಆಸಕ್ತಿ ತೋರಿಸಬೇಕು. ಹೊಸ ಯಂತ್ರ ಸಂಶೋಧಕರಿಗೆ ಹಸಿ / ಒಣ ವಿವಿಧ ಮಾದರಿಯ ಅಡಿಕೆ ಕಾಯಿ ಕೊಟ್ಟು ಇದನ್ನು ಸುಲಿಯುವ ಯಂತ್ರ ತಯಾರಿಸಿ ಕೊಡಿ ಎನ್ನಬೇಕು.
ಅಡಿಕೆ ಸುಲಿಯುವ modified ಯಂತ್ರ ಬರದಿರುವ ಕಾರಣದಲ್ಲಿ ಈಗಿನ ಚಾಲ್ತಿ “mechanical ಯಂತ್ರ ಗಳ ಮಾದರಿ” ಗಳೂ ಪ್ರಮುಖ ಅಡ್ಡಗಾಲಾಗಿದೆ. ತಂತ್ರಜ್ಞಾನಿಗಳು ಈ ಚಾಲ್ತಿ ಯಂತ್ರ ನೋಡಿ ಇದೇ ಮಾದರಿಯ ಯಂತ್ರ ಗಳನ್ನೇ ಮತ್ತೆ ಮತ್ತೆ ತಯಾರಿಸುತ್ತಿದ್ದಾರೆ.
ಹೊಸದಾಗಿ ಅಡಿಕೆ ಸುಲಿಯುವ ಯಂತ್ರ ತಯಾರಿಸುವವರು ಈ ಹಳೆ ಯಂತ್ರ ವನ್ನು ಗಣನೆಗೆ ತೆಗೆದುಕೊಳ್ಳದೇ ಅಡಿಕೆ ಕಾಯಿಯನ್ನ ಇಟ್ಟುಕೊಂಡು ಹೊಸ ಬಗೆಯ ಅಡಿಕೆ ಸುಲಿಯುವ ಸಾಧ್ಯತೆ ಯ ಬಗ್ಗೆ ಚಿಂತನೆ ನೆಡೆಸಿ ಆ ಬಗ್ಗೆ ಪ್ರಯತ್ನ ಮಾಡಬೇಕು. ಹೊಸ ಬಗೆಯ ಅಡಿಕೆ ಸುಲಿಯುವ ಯಂತ್ರ ತಯಾರಾಗಿ ಮಾರುಕಟ್ಟೆ ಗೆ ಬರಲೆಂದು ಆಶಿಸೋಣ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೊಪ್ಪ ದ (ಸನ್ಮಾನ್ಯ ಮಾಜಿ ಗೃಹ ಸಚಿವರ ಸ್ವಂತ ಊರು) ಯುವ ಸಂಶೋಧಕರೊಬ್ಬರು ಈ ಅಡಿಕೆ ಸುಲಿಯುವ ಯಂತ್ರ ದಲ್ಲೇ ಬಿನ್ನ ಶೈಲಿಯ ಅಡಿಕೆ ಕಾಯಿ ಸುಲಿದು ಕಟ್ ಮಾಡುವ ಯಂತ್ರ ತಯಾರಿಸಿದ್ದರು. ಇವತ್ತಿನ ವರೆಗೆ ಮಾರುಕಟ್ಟೆಗೆ ಬಂದ ಯಂತ್ರದಲ್ಲಿ ಅವರ ಯಂತ್ರ ಮಾತ್ರ ಬಿನ್ನವಾಗಿತ್ತು. ವಿಪರ್ಯಾಸವೆಂದರೆ ಅವರಿಗೆ ಯಾಕೋ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ…!
ಇವತ್ತು ಅಡಿಕೆ ಸುಲಿದು ಕೊಡುವ ದೊಡ್ಡ ಯಂತ್ರ ವನ್ನು ವಾಹನದಲ್ಲಿ ಮನೆ ಮನೆಗೆ ಕೊಂಡೊಯ್ದು ಸುಲಿದು ಕೊಡುವ ಜಾಬ್ ವರ್ಕ್ ಆರಂಭಿಕವಾಗಿ ಒಂದಷ್ಟು ಯುವಕ ರಿಗೆ ಸ್ವ ಉದ್ಯೋಗ ವಾಗಿದೆ. ಆದರೆ ಈ ಯಂತ್ರ ನೆಡೆಸಲು ನಮ್ಮ ಮಲೆನಾಡಿನಲ್ಲಿ ಗುಣಮಟ್ಟದ ವಿದ್ಯುತ್ ಇಲ್ಲ..!! ಜೊತೆಗೆ ಈ ಯಂತ್ರ ವನ್ನು ನೆಡೆಸುವಾಗ ನಾಲ್ಕೈದು ಜನ ಬೇಕು. ಹೊಸ ಸಂಶೋಧನೆ ಯ compact ಯಂತ್ರ ಬಂದಲ್ಲಿ ಇಂತಹ ಸಮಸ್ಯೆ ಬಗೆ ಹರಿತದೆ. ಹೊಸ ಪೀಳಿಗೆಯ computerized compact areca de husking ಯಂತ್ರ ನಿರೀಕ್ಷೆಯಲ್ಲಿರುವ ರೈತ……
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…