Advertisement
MIRROR FOCUS

ರಬ್ಬರ್‌ ಬೆಳೆಗಾರರ ಸಂಕಷ್ಟ | ಲೋಕಸಭೆಯಲ್ಲಿ ಧ್ವನಿ ಎತ್ತಿದ ಕೇರಳದ ಸಂಸದ | 250 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಒತ್ತಾಯ |

Share

ಕಳೆದ ಕೆಲವು ಸಮಯಗಳಿಂದ ರಬ್ಬರ್‌ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಧಾರಣೆ ಕುಸಿತದ ಕಾರಣದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಕೇರಳದ ಕೊಟ್ಟಾಯಂನ ಸಂಸದ ಥಾಮಸ್ ಚಾಜಿಕಡನ್ ಸಂಸತ್ತಿನಲ್ಲಿ ರಬ್ಬರ್‌ ಬೆಳೆಗಾರರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.ಪ್ರತಿ ಕೆಜಿಗೆ ಕನಿಷ್ಠ ₹ 250 ಬೆಂಬಲ ಬೆಲೆಯನ್ನು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಇದೀಗ ರಬ್ಬರ್ ಬೆಳೆಗಾರರ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಲು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಕಳೆದ ತಿಂಗಳು ಪ್ರತಿಭಟನೆ ನಡೆದಿದೆ. ರಬ್ಬರ್‌ ಧಾರಣೆ ಕುಸಿತವಾಗಿರುವ ಕಾರಣದಿಂದ ಅನೇಕ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆದಿತ್ತು.  ಕೇಋಲ , ತ್ರಿಪುರಾ, ತಮಿಳುನಾಡು ಹಾಗೂ ಕರ್ನಾಟಕವನ್ನು ಒಳಗೊಂದು ರೈತ ಸಂಸ್ಥೆಯು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ರಬ್ಬರ್‌ ಧಾರಣೆ ಏರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿತ್ತು. ರಬ್ಬರ್‌ ಆಮದು ಸ್ಥಗಿತಗೊಳಿಸಬೇಕು ಸಹಿತ ಸಹಿತ ಬೇಡಿಕೆಗಳನ್ನು ಮುಂದಿಡಲಾಗಿತ್ತು.

ಇದೀಗ ಕೇರಳದ ಕೊಟ್ಟಾಯಂನ ಸಂಸದ ಥಾಮಸ್ ಚಾಜಿಕಡನ್, ನೈಸರ್ಗಿಕ ರಬ್ಬರ್ ಬೆಳೆಯನ್ನು ಕೃಷಿ ಬೆಳೆ ಎಂದು ಘೋಷಿಸಲು ಮತ್ತು ಪ್ರತಿ ಕೆಜಿಗೆ ಕನಿಷ್ಠ ₹ 250 ಬೆಂಬಲ ಬೆಲೆಯನ್ನು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.  ಕೇಂದ್ರ ಸರ್ಕಾರವು ಕೈಗಾರಿಕಾ ಕಚ್ಚಾ ವಸ್ತುವಾದ ಸೆಣಬನ್ನು ಕೃಷಿ ಉತ್ಪನ್ನವೆಂದು ಘೋಷಿಸಿ ಬೆಂಬಲ ಬೆಲೆ ಯೋಜನೆಯಲ್ಲಿ ಹೇಗೆ ಸೇರಿಸಿದೆ, ಅದೇ ಮಾದರಿಯಲ್ಲಿ ರಬ್ಬರ್‌ ಕೂಡಾ ಸೇರಿಸಬೇಕು ಎಂದು ಒತ್ತಾಯಿಸಿದರು. ನೈಸರ್ಗಿಕ ರಬ್ಬರ್, ಕೃಷಿ ಬೆಳೆ, ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿದೆ ಎಂದು ಅವರು ಹೇಳಿದರು.

ರಬ್ಬರ್‌ ಬೆಳೆಗಾರರು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಉತ್ಪನ್ನ ಪಡೆದರೆ ಮಾತ್ರ ಕೃಷಿಯನ್ನು ಲಾಭದಾಯಕವಾಗಿ ನಡೆಸಬಹುದು ಎಂಬ ಸ್ವಾಮಿನಾಥನ್ ಆಯೋಗದ ವರದಿಯನ್ನು ಉಲ್ಲೇಖಿಸಿದ ಸಂಸದರು, ರಬ್ಬರ್‌ಗೆ ₹250 ಬೆಂಬಲ ಬೆಲೆ ಘೋಷಣೆ ಮಾಡಬೇಕು. ಸದ್ಯ  ರಬ್ಬರ್‌ನ ಉತ್ಪಾದನಾ ವೆಚ್ಚವು  ಕೆಜಿಗೆ ₹ 172 ರಷ್ಟಿದೆ ಎಂದೂ ಅವರು ಉಲ್ಲೇಖಿಸಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಶ್ಚಿಮ ಘಟ್ಟದ ಕಾಡುಗಳಿಗೆ ಹವಾಮಾನ ಬದಲಾವಣೆಯ ಹೊಡೆತ – ಪರಿಸರ ವ್ಯವಸ್ಥೆ ಅಸ್ಥಿರವಾಗುವ ಎಚ್ಚರಿಕೆ

ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟದ ನೀಲಗಿರಿ ಜೀವಗೋಳದಲ್ಲಿನ ಕಾಡು ಪರಿಸರ ವ್ಯವಸ್ಥೆಗಳು ಅಸ್ಥಿರವಾಗುವ…

4 hours ago

ಹವಾಮಾನ ವರದಿ | 24-09-2026 | ಸೆ.29ರಿಂದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸೆಪ್ಟೆಂಬರ್ 28–29ರಿಂದ ಹಲವು ಭಾಗಗಳಲ್ಲಿ ಮತ್ತೆ…

22 hours ago

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ…

1 day ago

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ

ವಿಶ್ವದ 21,439 ನದಿ ತೋಡುಗಳ ಅಧ್ಯಯನದಲ್ಲಿ ಶೇ.78.8ರಷ್ಟು ನದಿಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ…

2 days ago

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

2 days ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

2 days ago