Advertisement
ಸುದ್ದಿಗಳು

#JackfruitFestival | ಮೇಣ ಇಲ್ಲದ ಹಲಸಿಗೆ ಮಾರು ಹೋದ ಹಲಸು ಪ್ರಿಯರು…! | ಮೈಸೂರಿನ ಹಲಸಿನ ಮೇಳಕ್ಕೆ ಜನ ಸಾಗರ |

Share

ಕೇವಲ ಬಡವರ ಪಾಲಿನ ಹಸಿವು ನೀಗಿಸುತ್ತಿದ್ದ ಹಲಸಿಗೆ ಈಗ ಅಂತರಾಷ್ಟ್ರೀಯ ಮನ್ನಣೆ. ಹಲಸು ಯಥೇಚ್ಚವಾಗಿ ಬೆಳೆಯುವ ಹಣ್ಣಾಗಿ, ವಾಣಿಜ್ಯ ಬೆಳೆಯಾಗಿ ಪರಿವರ್ತಿತವಾಗುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಮೂಲ ಕಾರಣ ಅಲ್ಲಲ್ಲಿ ಆಯೋಜನೆಗೊಳ್ಳುತ್ತಿರುವ ಹಲಸಿನ ಮೇಳಗಳು.

ಚಂದ್ರ, ಭೈರಸಂದ್ರ, ಲಾಲ್‌ ಬಾಗ್‌ ಮಧುರ, ರುದ್ರಾಕ್ಷಿ, ಸರ್ವಋತು ಅಷ್ಟೇ ಅಲ್ಲ ಅಂಟು ರಹಿತ ಹಲಸಿನ ಸಾಲುಗಳು. ಇನ್ನೇನು ಅಲ್ಲೇ ಬಿಸಿ ಬಿಸಿಯಾಗಿ ಎಣ್ಣೆಯಲ್ಲಿ ತಯಾರಾಗೋ ಹಲಸಿನ ತಿಂಡಿ ತಿನಿಸುಗಳು. ಇದೆಲ್ಲವನ್ನೂ ಕಂಡು ಖರೀದಿಗೆ ಮುಗಿಬಿದ್ದ ಗ್ರಾಹಕರು. ಈ ಎಲ್ಲ ದೃಶ್ಯ ಕಂಡುಬಂದಿದ್ದು  ಸಾಂಸ್ಕೃತಿಕ ನಗರಿ ಮೈಸೂರುನಲ್ಲಿ ನಡೆದ ಹಲಸಿನ ಮೇಳದಲ್ಲಿ.

ಫುಡ್‌ ಪ್ರಿಯರು ಹಲಸಿನ ತರಹೇವಾರಿ ತಿಂಡಿಗೆ ಫಿದಾ ಆದ್ರು. ವೆರೈಟಿ ಹಲಸಿನ ಹಣ್ಣುಗಳ ಜೊತೆಗೆ ಹಲಸಿನ ಹೋಳಿಗೆ, ಹಲಸಿನ ಚಿಪ್ಸು, ಹಲಸಿನಕಾಯಿ ಕಬಾಬು, ಹಲಸಿನ ಬಿರಿಯಾನಿ ಹೀಗೆ ಅನೇಕ ಹಲಸಿನ ಖಾದ್ಯಗಳನ್ನು ಸವಿಯೋ ಅವಕಾಶ ಆಹಾರ ಪ್ರಿಯರಿಗೆ ಸಿಕ್ಕಿತು. ಮೈಸೂರು ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್ ಇಂತಹದ್ದೊಂದು ಕಾರ್ಯಕ್ರಮ ಕಂಡು ಸಾಂಸ್ಕೃತಿಕ ನಗರಿಯ ಫುಡ್‌ ಪ್ರಿಯರಂತೂ ಫುಲ್‌ ಫಿದಾ ಆದ್ರು. ತಮ್ಮಿಷ್ಟದ ತಿಂಡಿ ತಿನಿಸುಗಳನ್ನ ಸವಿದು ಬಾಯಿ ಚಪ್ಪರಿಸಿಕೊಂಡರು.

ಚಂದ್ರ ಹಲಸು ಆಕರ್ಷಣೆ: ಇನ್ನು ವಿವಿಧ ತಳಿಯ ಹಲಸಿನ ಹಣ್ಣಿನ ಮಾರಾಟವೂ ನಡೆಯಿತು. ರಾಜ್ಯದ ಅನೇಕ ಜಿಲ್ಲೆಗಳಿಂದ ಮೈಸೂರಿಗೆ ಬಂದಿದ್ದ ರೈತರು, ಮಹಿಳಾ ಗುಂಪುಗಳು ಹಲಸಿನ ಪದಾರ್ಥ, ಸಿರಿಧಾನ್ಯ, ಕರಕುಶಲ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಿದರು.

ಇದರ ಜೊತೆಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿಶೇಷವಾದ ಚಂದ್ರ ಹಲಸು ಹಬ್ಬಕ್ಕೆ ಬಂದಂತಹ ಜನರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಹೀಗೆ ಮೈಸೂರಿನಲ್ಲಿ ನಡೆದ ಹಲಸು ಹಬ್ಬವು ಆಹಾರ ಪ್ರಿಯರ ಬಾಯಿ ರುಚಿ ಹೆಚ್ಚಿಸಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

30 minutes ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

2 hours ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

3 hours ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

3 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago