Advertisement
ನಂದನವನ

ಆಧುನಿಕ ಸಮಾಜದಲ್ಲಿ ಸಾಂಸ್ಕೃತಿಕ ಸಂವೇದನೆಯ ಅಗತ್ಯ

Share

ಇಂದಿನ ಜಗತ್ತು ಬಹುಮಟ್ಟಿಗೆ “ಗ್ಲೋಬಲ್ ವಿಲೇಜ್” ಆಗಿದೆ. ತಾಂತ್ರಿಕ ಪ್ರಗತಿ, ಆರ್ಥಿಕ ವಿನಿಮಯ, ವಲಸೆ, ಶಿಕ್ಷಣ ಮತ್ತು ಮಾಧ್ಯಮ ಇವೆಲ್ಲವು ವಿಭಿನ್ನ ಸಂಸ್ಕೃತಿಗಳ ಜನರನ್ನು ಪರಸ್ಪರ ಹತ್ತಿರದ ಸಂಪರ್ಕಕ್ಕೆ ತಂದಿವೆ.. ಇಂತಹ ಸಂದರ್ಭದಲ್ಲಿ ಕೇವಲ ವೈಯಕ್ತಿಕ ಬುದ್ಧಿವಂತಿಕೆ ಅಥವಾ ವೃತ್ತಿಪರ ಕೌಶಲ್ಯ ಸಾಕಾಗುವುದಿಲ್ಲ. ಬದುಕಿನ ನಿಜವಾದ ಅಸ್ತಿತ್ವವನ್ನು ನಿರ್ಧರಿಸುವುದು ಮೌಲ್ಯಗಳೂ, ಸಂವೇದನೆಗಳೂ. “ಸಾಂಸ್ಕೃತಿಕ ಸಂವೇದನೆ” ಎಂಬ ಪರಿಕಲ್ಪನೆ ಸಾಮಾನ್ಯವಾಗಿ ‘ಇತರರ ಸಂಸ್ಕೃತಿ–ಪದ್ಧತಿ–ಅಭ್ಯಾಸ–ಆಚಾರಗಳ ಬಗ್ಗೆ ಗೌರವ ಮತ್ತು ಸ್ವೀಕಾರ’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಇದು ಕೇವಲ ಸಹಿಷ್ಣುತೆ ಅಥವಾ ಕರುಣೆ ಎಂಬ ಅಲ್ಪ ಮಟ್ಟದ ಪ್ರತಿಕ್ರಿಯೆ ಅಲ್ಲ; ಇದು ಸಾಹಿತ್ಯಕ ವೈಭವೀಕರಣವನ್ನೇ ತರಬಲ್ಲ ಆಳವಾದ ಮಾನಸಿಕ–ಸಾಮಾಜಿಕ ಜಾಗೃತಿ.

ಸಂವೇದನೆ ಎಂದರೆ ವ್ಯಕ್ತಿಯ ಅಂತರಂಗದ ಪ್ರತಿಕ್ರಿಯೆ, ನಾಜೂಕಾದ ಮನಸ್ಸಿನ ಸ್ಪಂದನೆ. ಇದು ವೈಯಕ್ತಿಕ ಮಟ್ಟದಲ್ಲಿ ಆಗಬಹುದಾದ ಅನುಭವ.ಸಾಂಸ್ಕೃತಿಕ ಸಂವೇದನೆ ಎಂದರೆ, ಈ ಸ್ಪಂದನೆಯು ಕೇವಲ ವೈಯಕ್ತಿಕವಲ್ಲದೆ, ಇತರ ಸಮಾಜಗಳ, ಜನಾಂಗಗಳ, ಧರ್ಮ–ಭಾಷಾ–ಪ್ರದೇಶಗಳ ವೈಶಿಷ್ಟ್ಯಗಳನ್ನು ಗೌರವದಿಂದ ಸ್ವೀಕರಿಸುವ ಸಾಮರ್ಥ್ಯ. ಹೀಗಾಗಿ ಸಂವೇದನೆ ವೈಯಕ್ತಿಕ ಗುಣವಾಗಿದ್ದರೆ, ಸಾಂಸ್ಕೃತಿಕ ಸಂವೇದನೆ ಸಾಮಾಜಿಕ–ಜಾಗತಿಕ ಮೌಲ್ ಎಂಬುದಾಗಿದೆ.

ಸಾಂಸ್ಕೃತಿಕ ಸಂವೇದನೆ (Cultural Sensitivity) ಎಂಬ ಮೌಲ್ಯವೇ ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತು ಸಹಅಸ್ತಿತ್ವಕ್ಕೆ ಕೇಂದ್ರೀಯ ಶಕ್ತಿ.ನಮ್ಮದೇ ಸಂಸ್ಕೃತಿ ಪರಮೋನ್ನತವೆಂಬ ಅಹಂಕಾರವನ್ನು ತೊರೆದು, ಇತರರ ಆಚರಣೆ, ಮೌಲ್ಯ, ನಂಬಿಕೆಗಳಿಗೆ ಪ್ರಾಮುಖ್ಯತೆ ನೀಡುವ ಮನೋಭಾವ.“ವಿಭಿನ್ನತೆ”ಯನ್ನು “ಸಂಕಟ”ವಾಗಿ ನೋಡದೆ, “ಸಂಪತ್ತು”ವಾಗಿ ಸ್ವೀಕರಿಸುವ ಸಾಮರ್ಥ್ಯ.

1 .ಆಧುನಿಕ ಸಮಾಜದಲ್ಲಿ ಇದರ  ಅಗತ್ಯತೆ :  ನಗರಗಳಲ್ಲಿ ಒಂದೇ ಬೀದಿಯಲ್ಲಿ ವಿವಿಧ ಧರ್ಮ, ಭಾಷೆ, ಜಾತಿ, ವಲಸಿಗರು ಸಹವಾಸ ಮಾಡುತ್ತಿದ್ದಾರೆ. ಇವರ ನಡುವೆ ಸಾಮರಸ್ಯಕ್ಕಾಗಿ ಸಂವೇದನೆ ಮುಖ್ಯ.  ಜಾಗತಿಕ ವ್ಯವಹಾರದಲ್ಲಿ ಉದ್ಯೋಗ, ವ್ಯಾಪಾರ, ಐಟಿ ಕ್ಷೇತ್ರದಲ್ಲಿ ಬೇರೆ ದೇಶದ ಜನರೊಂದಿಗೆ ಸಹಕಾರ ಅಗತ್ಯ. ಸಾಂಸ್ಕೃತಿಕ ಸಂವೇದನೆ ಇಲ್ಲದೆ ಜಾಗತಿಕ ಸ್ಪರ್ಧೆಯಲ್ಲಿ ಯಶಸ್ಸು ಸಾಧ್ಯವಿಲ್ಲ.  ಶಿಕ್ಷಣ–ಆರೋಗ್ಯ ಕ್ಷೇತ್ರ ದಲ್ಲಿ ವಿದ್ಯಾರ್ಥಿಗಳ ವಿಭಿನ್ನ ಹಿನ್ನೆಲೆಯ ಗೌರವ, ರೋಗಿಗಳ ನಂಬಿಕೆ–ಆಚಾರಗಳನ್ನು ಪರಿಗಣಿಸುವ ಶೈಲಿ ಸಂವೇದನೆ ಇಲ್ಲದೆ ಸಾಧ್ಯವಲ್ಲ. ಸಮಾಜದ ಶಾಂತಿ ಕಾಪಾಡುವಲ್ಲಿ  ಧರ್ಮ, ಭಾಷೆ, ಸಂಸ್ಕೃತಿ ಆಧಾರಿತ ಸಂಘರ್ಷಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ಸಂವೇದನೆ ಸಾಮಾಜಿಕ ಬಾಂಧವ್ಯಕ್ಕೆ ಲೇಪನ.

2 .ಭಾರತೀಯ ದೃಷ್ಟಿಕೋನ : “ಏಕಂ ಸತ್ ವಿಪ್ರಾ ಬಹುಧಾ ವದಂತಿ” –ಎಂಬುದಾಗಿ ಋಗ್ವೇದ ಹೇಳುತ್ತದೆ . ಸತ್ಯ ಒಂದೇ ಆದರೆ ಅದನ್ನು ವಿಭಿನ್ನ ಮಾರ್ಗಗಳಲ್ಲಿ ಕಾಣಬಹುದು. ಉಪನಿಷತ್ತಿನಲ್ಲಿ  ಹೇಳಿದಂತೆ “ವಸುದೈವ ಕುಟುಂಬಕಂ” ಎಂಬ ತತ್ತ್ವವೇ ಸಾಂಸ್ಕೃತಿಕ ಸಂವೇದನೆಯ ಶ್ರೇಷ್ಠ ರೂಪ.

ಭಗವದ್ಗೀತೆಯ (೪.೧೧) ಯಲ್ಲಿ  “ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್” – ಎಲ್ಲರೂ ತಮ್ಮ ರೀತಿಯಲ್ಲಿ ಬಂದರೂ, ಭಗವಂತ ಎಲ್ಲರನ್ನೂ ಸ್ವೀಕರಿಸುತ್ತಾನೆ.ಎಂಬ  ಈ ಮೌಲ್ಯಗಳು ಭಾರತವನ್ನು ಬಹುಸಂಸ್ಕೃತಿಯ, ಸಹಿಷ್ಣುತೆಯ ನೆಲವನ್ನಾಗಿ ಮಾಡಿದವು. ಪಾಶ್ಚಾತ್ಯ ‘Pluralism’, ‘Human Rights’, ‘Tolerance’ ಪರಿಕಲ್ಪನೆಗಳು ಸಹ ಸಾಂಸ್ಕೃತಿಕ ಸಂವೇದನೆಯ ನವೋತ್ಪಾದನೆ.

ಹೀಗಾಗಿ ಸಾಂಸ್ಕೃತಿಕ ಸಂವೇದನೆ ಕೇವಲ ಸಾಮಾಜಿಕ ಸಾಮರಸ್ಯವಲ್ಲ, ಇದು ಮೌಲ್ಯ–ಸಾಧನೆಗಳೇ (Value Realization) ಆಗಿದೆ.

3 .ಪ್ರಾಯೋಗಿಕ ಅಂಶಗಳು : ಉದ್ಯೋಗ ಕ್ಷೇತ್ರದಲ್ಲಿ ಬೇರೆ ಭಾಷೆಯ ಸಹೋದ್ಯೋಗಿಯನ್ನು ಹಾಸ್ಯ ಮಾಡುವ ಬದಲು, ಅವನ ಸಂಪ್ರದಾಯ ತಿಳಿದುಕೊಳ್ಳುವುದು.ಶಿಕ್ಷಣದಲ್ಲಿ  ಮಕ್ಕಳ ಮನೆ–ಸಂಸ್ಕೃತಿ, ಆಹಾರ, ಉಡುಪಿಗೆ ಗೌರವ ಕೊಡುವುದು.ಸಾಮಾಜಿಕ ಜೀವನದಲ್ಲಿ  ಹಬ್ಬ–ಹರಿದಿನಗಳ ವಿಭಿನ್ನ ಆಚರಣೆಗಳನ್ನು ಗೌರವದಿಂದ  ಕಾಣುವುದು. ಅದರಂತೆಯೇ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬೇರೆ ರಾಷ್ಟ್ರಗಳ ಸಂಸ್ಕೃತಿ ಅಧ್ಯಯನದಿಂದ ನಂಬಿಕೆ–ಸಂಬಂಧ ಗಾಢವಾಗುವುದು.

4 .ವ್ಯಾಪ್ತಿ ಮತ್ತು ಪರಿಣಾಮ: ವೈಯಕ್ತಿಕ ಮಟ್ಟದಲ್ಲಿ ಹೃದಯದ ವಿಶಾಲತೆ, ಸಹಾನುಭೂತಿ, ಸ್ವೀಕಾರಶಕ್ತಿ ಬೆಳೆಯುತ್ತದೆ.ಸಾಮಾಜಿಕವಾಗಿ  ಸಾಮರಸ್ಯ, ಸಮಾನತೆ, ಪರಸ್ಪರ ಸಹಕಾರ ಬಲಗೊಳ್ಳುತ್ತದೆ.ಜಾಗತಿಕ ವಾಗಿ ನೋಡುವುದಾದರೆ  ಶಾಂತಿ, ಮಾನವ ಹಕ್ಕುಗಳ ಗೌರವ, ಮಾನವಕುಲದ ಏಕತೆ ಸಾಧ್ಯವಾಗುತ್ತದೆ. ಆಧುನಿಕ ಸಮಾಜದಲ್ಲಿ ವಿಜ್ಞಾನ–ತಂತ್ರಜ್ಞಾನ, ಆರ್ಥಿಕತೆ, ರಾಜಕೀಯ ಶಕ್ತಿಗಳು ಎಷ್ಟೇ ಬಲಶಾಲಿಯಾಗಿದ್ದರೂ, ಅವುಗಳ ಮೇಲೆ ನಿಲ್ಲುವ ಮೌಲ್ಯವೇ ಸಾಂಸ್ಕೃತಿಕ ಸಂವೇದನೆ.ಇದು ಕೇವಲ “ಸಹಿಷ್ಣುತೆ” ಅಲ್ಲ; ಇದು ವಿಶ್ವಮಾನವತೆ, “ಮಾನವೀಯತೆ” ಮತ್ತು “ಸಹಅಸ್ತಿತ್ವ”ದ ಆಳವಾದ ಬುನಾದಿ. ವಿಭಿನ್ನತೆಯಲ್ಲಿಯೇ ಏಕತೆ ಕಂಡುಕೊಳ್ಳುವುದು – ಅದೇ ನವಯುಗದ ಸಾಂಸ್ಕೃತಿಕ ಸಂವೇದನೆಯ ಮರ್ಮ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

3 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

4 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

5 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

7 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

19 hours ago