ರಾಜ್ಯದ 5 ಜಿಲ್ಲೆಗಳಲ್ಲಿ ಖಾದಿ ಚಟುವಟಿಕೆ ಉತ್ತೇಜಿಸಲು ಖಾದಿ ಮಂಡಳಿ ಸ್ಥಾಪನೆಗೆ ನಿರ್ಧಾರ

August 1, 2025
7:31 PM

ರಾಜ್ಯದಲ್ಲಿ ಖಾದಿ ಚಟುವಟಿಕೆ ಇಲ್ಲದಿರುವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಖಾದಿ ಚಟುವಟಿಕೆ ಉತ್ತೇಜಿಸಲು ಖಾದಿ ಮಂಡಳಿ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರವಿಹಾಳ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಆರಂಭಗೊಂಡ ರಾಜ್ಯ ಮಟ್ಟದ ಖಾದಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಖಾದಿ ಚಟುವಟಿಕೆ ಇಲ್ಲದ ಈ ಐದು ಜಿಲ್ಲೆಗಳಲ್ಲಿ ಆಸಕ್ತ ಸಂಸ್ಥೆಗಳು ನೋಂದಣಿಯಾದಲ್ಲಿ ಖಾದಿ ಉತ್ಪಾದನೆ ಅಗತ್ಯವಿರುವ ಚರಕ ಮತ್ತು ಮಗ್ಗಗಳ ಖರೀದಿಗೆ ಸಹಕಾರ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಖಾದಿ ಉತ್ಪನ್ನದ ಗುಣಮಟ್ಟ ಸುಧಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ರಾಜ್ಯದಲ್ಲಿ ಟೆಕ್ಸ್‌ಟೈಲ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ನೀಡುತ್ತಿರುವ 3 ಕಾಲೇಜುಗಳಿಗೆ ಸಂಶೋಧನ ನೆರವು ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 17-05-2026 | ಮೇ 19 ರಿಂದ ಹವಾಮಾನದಲ್ಲಿ ದೊಡ್ಡ ಬದಲಾವಣೆ ಸಾಧ್ಯ..!
May 17, 2026
11:53 AM
by: ಸಾಯಿಶೇಖರ್ ಕರಿಕಳ
ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ‘ಲೈಟ್‌ ಅಬ್ಬರ’…! ಬೆಂಕಿಗಾಹುತಿಯಾದ ಬಸ್‌ ಘಟನೆ ಮತ್ತೆ ಎಚ್ಚರಿಸಿದ ಅಪಾಯದ ಗಂಟೆ..!
May 17, 2026
7:43 AM
by: ಸಮರ್ಥ ಸಮನ್ಯು
ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಮೈತ್ರಿ..! ಹವಾಮಾನ ಸವಾಲು ಎದುರಿಸಲು ಸ್ಮಾರ್ಟ್ ಕೃಷಿ ತಂತ್ರಜ್ಞಾನಕ್ಕೆ ಒತ್ತು
May 17, 2026
7:28 AM
by: ದ ರೂರಲ್ ಮಿರರ್.ಕಾಂ
“ಕೋಟಿ ವೃಕ್ಷ ಅಭಿಯಾನ”ದ ಪರಿಣಾಮವೇ? ವಿಜಯಪುರದಲ್ಲಿ ತಾಪಮಾನ 40°C ದಾಟದಿರುವುದು ಆಶಾದಾಯಕ: ಸಚಿವ ಎಂ.ಬಿ. ಪಾಟೀಲ್
May 16, 2026
10:28 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror