Advertisement
MIRROR FOCUS

ಮತ್ತೆ ಚರ್ಚೆಯಾಗುತ್ತಿದೆ ಕುಕ್ಕೆ ಸುಬ್ರಹ್ಮಣ್ಯದ ಪೂಜೆ…! | ಕುಕ್ಕೆಯ ಎಲ್ಲಿ ಬೇಕಾದರೂ, ಯಾರು ಬೇಕಾದರೂ ಪೂಜೆ, ಸೇವೆ ನಡೆಸಬಹುದು…! | ಏಕೆ ಸರ್ಕಾರ, ಆಡಳಿತ ಮೌನವಾಗಿದೆ…?

Share

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆ ಮತ್ತೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ಚರ್ಚೆ, ಗದ್ದಲ ನಡೆದರೂ ಸರ್ಕಾರ, ಆಡಳಿತವು ಮೌನವನ್ನೇ ವಹಿಸಿದೆ. ಭಕ್ತಾದಿಗಳಲ್ಲಿ ಗೊಂದಲ ಮೂಡಿಸುವ ಇಂತಹ ಚರ್ಚೆಗಳಿಗೆ ಯಾವಾಗ ಬ್ರೇಕ್‌ ಬೀಳುತ್ತೆ ಎನ್ನುವುದೇ ಪ್ರಶ್ನೆಯಾಗಿದೆ.

ರಾಜ್ಯದ ಪ್ರತಿಷ್ಟಿತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ನಾಗ ದೋಷ ನಿವಾರಣೆಯ ಕ್ಷೇತ್ರವಾಗಿ ಕುಕ್ಕೆ ಸುಬ್ರಹ್ಮಣ್ಯ ಹೆಸರುವಾಸಿಯಾಗಿದೆ. ಅನೇಕರು ಕುಕ್ಕೆಯಲ್ಲಿ ಪೂಜೆ ಸಲ್ಲಿಸಿ ದೋಷ ನಿವಾರಣೆಗಾಗಿ ಪ್ರಾರ್ಥಿಸಿಕೊಂಡು ತೆರಳುತ್ತಾರೆ. ನಾಗ ದೋಷ ಎಂದಾಕ್ಷಣ, ಸರ್ಪಸಂಸ್ಕಾರ, ನಾಗಪ್ರತಿಷ್ಟೆಯನ್ನು ಮಾಡುವಂತೆ ಸಾಮಾನ್ಯವಾಗಿ ಜ್ಯೋತಿಷಿಗಳು ಹೇಳುತ್ತಾರೆ. ಈ ಪ್ರಕಾರ ಭಕ್ತರು ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೇ ಪೂಜೆ ಮಾಡಿಸಲು ಬರುತ್ತಾರೆ.

ಆದರೆ ಕುಕ್ಕೆ ಕ್ಷೇತ್ರದಲ್ಲಿ ಪೂಜೆ ಮಾಡಿಸಬೇಕೋ ಅಥವಾ ಕುಕ್ಕೆಯ ಎಲ್ಲಾದರೂ ಪೂಜೆ ಮಾಡಿಸಬೇಕೋ ಎಂಬುದರ ಬಗ್ಗೆ ಜ್ಯೋತಿಷಿಗಳೂ ಹೇಳುವುದಿಲ್ಲ, ಭಕ್ತರಿಗೂ ಮಾಹಿತಿ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಭಕ್ತರಿಗೆ ಈ ಬಗ್ಗೆ ಮಾಹಿತಿ ಇದೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೇ ಪೂಜೆ ಮಾಡಿಸಬೇಕು ಎಂಬ ಕಾರಣದಿಂದ ಕ್ಷೇತ್ರದಲ್ಲಿಯೇ ಪೂಜೆ ಮಾಡಿಸುತ್ತಾರೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಅನೇಕರು ಸುಬ್ರಹ್ಮಣ್ಯದ ಎಲ್ಲಾದರೂ ಪೂಜೆ ಮಾಡಿಸಿ ತೆರಳುತ್ತಾರೆ, ನಂತರ ಪುನ: ಬಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೇ ಪೂಜೆ ಮಾಡಿಸಿದ ಉದಾಹರಣೆಯೂ ಇದೆ.

ಇದೀಗ ಚರ್ಚೆಯ ವಿಷಯ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ವಿಷಯ ಕುಕ್ಕೆ ಸುಬ್ರಹ್ಮಣ್ಯದ ಬಳಿಯಲ್ಲಿಯೇ  ಇರುವ ಮಠದ ಸರ್ಪಸಂಸ್ಕಾರ, ಆಶ್ಲೇಷ ಬಲಿಯ ಬಗ್ಗೆ. ಈ ಬಗ್ಗೆ ರಶೀದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಭಕ್ತಾದಿಗಳಿಗೆ ಎಲ್ಲಿ ಬೇಕೋ ಅಲ್ಲಿ ಸೇವೆ ಮಾಡಿಸಲು , ಪೂಜೆ ಮಾಡಿಸಲು ಅವಕಾಶ ಇದೆ. ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಸುಬ್ರಹ್ಮಣ್ಯೇಶ್ವರ ದೇವರಿಗೆ ಪೂಜೆ ನಡೆದರೆ, ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನರಸಿಂಹ ದೇವರಿಗೆ ಆರಾಧನೆ ನಡೆಯುತ್ತದೆ. ಹೀಗಿರುವಾಗ ಕುಕ್ಕೆ ಸುಬ್ರಹ್ಮಣ್ಯದ ಎಲ್ಲಿ ಬೇಕಾದರೂ ಯಾವ ಸೇವೆ, ಯಾರು ಬೇಕಾದರೂ ನಡೆಯಬಹುದು, ಭಕ್ತರು ಪೂಜೆ ನಡೆಸಬಹುದಾದರೆ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಏಕೆ ಎಂಬುದು ಚರ್ಚೆಯ ಸಾರಾಂಶವಾಗಿದೆ.

ಈ ಬಗ್ಗೆ ದೇವಸ್ಥಾನದ ಆಡಳಿತ ಮೌನ ವಹಿಸಿದೆ, ಸರ್ಕಾರ ಮೌನ ವಹಿಸಿದೆ. ಹಿಂದೂ ಹಿತರಕ್ಷಣೆ ಎನ್ನುವ ವ್ಯಕ್ತಿಗಳೂ ಮೌನವಾಗಿದ್ದಾರೆ. ಹಾಗಿದ್ದರೆ ಕುಕ್ಕೆಯ ಇತರ ಕಡೆಗಳಲ್ಲೂ ಏಕೆ ಇಂತಹ ಸೇವೆಗಳು ಸಾರ್ವಜನಿಕವಾಗಿ ನಡೆಯಬಾರದು ಎಂಬುದು ಗಂಭೀರವಾದ ಪ್ರಶ್ನೆಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್

ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…

2 days ago

ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ

ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…

2 days ago

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

2 days ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

2 days ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

2 days ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

2 days ago