ಶಿವಮೊಗ್ಗ ಜಿಲ್ಲೆಯ ಸಾಗರ(Shivmoga,Sagara) ವೈವಿಧ್ಯ ಭತ್ತದ ಪ್ರಬೇಧಗಳ(Paddy breed) ಕಣಜವೇ ಆಗಿತ್ತು… ಸಿಹಿ ಕೆಂಪಕ್ಕಿಯ ಸಿದ್ಧಸಾಲೆ, ಶ್ರೀಮಂತರ ಅಕ್ಕಿ(Rice) ಎಂದೇ ಖ್ಯಾತವಾದ ರಾಜಭೋಗ-ರಾಜಮುಡಿ , ಪಾಯಸಕ್ಕೆ ಪರಿಮಳ ಕೊಡುವ ಜೀರಿಗೆ ಸಣ್ಣ -ಗಂಧಸಾಲೆ-ಕುಂಕುಮ ಕೇಸರಿ , ‘ಕಳೆಯಬಾರದ ತಾಯಿ ಭತ್ತ ‘ ಎಂದೆ ಗೌರವಿಸಿ ಪ್ರತಿ ವರ್ಷ ತಪ್ಪದೆ ಬೆಳೆಸುವ ಕಳವೆ, ಚಕ್ಕುಲಿಗೆ ಪ್ರಿಯವಾದ ಕರೆಕಾಲ್ದಡಿಗ , ಬುತ್ತಿ ಊಟಕ್ಕೆ ಅತ್ಯುತ್ತಮವಾದ ಸಣ್ಣವಾಳ್ಯ, ಪಸೆ ಹೆಚ್ಚು ಬೇಡದ ಹಕ್ಲು ಹೊನಸು, ತೀರಾ ತೆಳು ಸಿಪ್ಪೆಯ ಪುಟ್ಟ ಹೆಗ್ಗೆ , ಜನಪ್ರಿಯವಾದ ಆಲೂರು ಸಣ್ಣ , ನೆರೆಗೂ ಸೆಡ್ಡು ಹೊಡೆವ ನೆರಗುಳಿ, ಗಂಡು ಭತ್ತ ತೆಗೆಯಲು ಸಹಕರಿಸುವ ನ್ಯಾರೆಮಿಂಡ…ಅಬ್ಬಬ್ಬಾ ಎಷ್ಟೆಲ್ಲ ವಿಶೇಷತೆ !
ಕೇವಲ 20 ವರುಷಗಳ ಹಿಂದೆ ಸಾಗರದಲ್ಲಿ 62 ಭತ್ತದ ಪ್ರಬೇಧಗಳಿದ್ದವು. ಈಗ …? ಅದ್ನೇನ್ ಕೇಳ್ತಿ , ಅಕ್ಕಾಳು , ಅರ್ಲು ಹೊನಸು , ಕೆಂಪುದಡಿ ಗೊಳ್ತೀಗ, ಚಿಟಗ, ಚಿಳಗ, ಕರೆಕಣ್ ಹೊನಸು , ಚಿಕ್ಕಸಾಲೆ, ಜೇನುಗೂಡು , ತೊಗರಿನ ಭತ್ತ , ನ್ಯಾರೆಮಿಂಡ, ಬಿಳಿದಡಿ ಬಂಗಾರದ ಗುಂಡು , ಬರ ರತ್ನಚೂಡಿ , ಬಿಳಿ ಇಸಡಿ, ಬಂಗಾರ ಕಡ್ಡಿ , ಬಿಳಿದಡಿ ಗೋಳ್ತಿಗ , ಮಲ್ಲಿಗೆ ಸಣ್ಣ , ಮುಸಳ್ಳಿ , ಬುಲ್ಬುಲ್ , ಬಿಳಿ ಮಳ್ಹೆಗ್ಗೆ, ಮೈಸೂರು ಸಣ್ಣ , ದಬ್ಬಣ ಸಾಲೆ, ಸಂಪೆದಳ, ಸಣ್ಣ ಅಭಿಲಾಷ, ಮುಳ್ ಭತ್ತ , ರಾಜಮಣಿ…ಕಳೆದಿವೆ…ಎಲ್ಲೂ ಕಾಣದು. ಮತ್ತೆ ತರಲಾದೀತೆ ? ಒಂದು ತಾಲೂಕಿನ ಸ್ಥಿತಿಯಿದು. ರಾಜ್ಯದಲ್ಲಿ, ದೇಶದಲ್ಲಿ ಇನ್ನೆಷ್ಟು ಕಳೆದಿವೆಯೊ … ಬೀಜಗಳ ಉಳಿಸಲು ಇರುವ ಸುಲಭ ದಾರಿ ಒಂದೆ ; ಬೆಳೆಸುವುದು ಮತ್ತು ಬಳಸುವುದು. ಹುಡುಕಿ ಸಂರಕ್ಷಿಸೋಣ ; ನಮ್ಮ ಸುತ್ತಲಿರುವ ಪಾರಂಪರಿಕ ಬೀಜ ವೈವಿಧ್ಯ. ನಮ್ಮೂರ ಬೀಜ ಬೆಳೆಸೋಣ-ಬಳಸೋಣ-ಬಾಳಿಸೋಣ. ದೇಶೀ ಬೀಜಗಳು ಸಾವಯವ ಕೃಷಿಗೆ ಬಹಳ ಪೂರಕ.
ಬೀಜಗಳು ನಮ್ಮ ಮನೆಯ ಪುಟ್ಟ ಸದಸ್ಯರಲ್ಲವೆ ? ಜನವರಿ 12-13, ಶುಕ್ರವಾರ-ಶನಿವಾರ ಕೊಲ್ಹಾಪುರ ಸಮೀಪವಿರುವ ಕನ್ನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ಕೃಷಿ ಕಾಯಕ ಕ್ಷೇತ್ರದ ಈ ರೀತಿಯ ಹಲವು ಪ್ರಶ್ನೆಗಳಿಗೆ ಪರಿಹಾರ-ಉತ್ತರ ಹುಡುಕುವ ತವಕ. ಪರಮಪೂಜ್ಯ ಶ್ರೀ ಅದೃಶ್ಯ ಕಾಡ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರೇರಣೆಯಲ್ಲಿ ‘ಸಾವಯವ ಕೃಷಿ ಪರಿವಾರ’ ಮತ್ತು ‘ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ‘ ಸಂಸ್ಥೆಗಳು ಸಮಾನಾಸಕ್ತ ಸಂಸ್ಥೆಗಳೊಡಗೂಡಿ ಸಂಘಟಿಸುತ್ತಿರುವ ಎಲ್ಲಾ ಸಂಪ್ರದಾಯಗಳ ಪರಮಪೂಜ್ಯ ಮಠಾಧೀಶರು, ಸಂತರು, ಧರ್ಮದರ್ಶಿಗಳು ಹಾಗೂ ರೈತರು, ವಿಜ್ಞಾನಿಗಳು, ಶಿಕ್ಷಣ ತಜ್ಞರ ‘ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು’ ಮಹಾಸಮಾವೇಶದ ಆಶಯ.
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…