ಕೂದಲು ಉದುರುವಿಕೆಯನ್ನು ಯಾರೂ ಕಡೆಗಣಿಸದಿರಿ | ಸಮಸ್ಯೆಗೆ ಇಲ್ಲಿದೆ ಪರಿಹಾರ

August 7, 2023
1:07 PM
ಹಾರ್ಮೋನ್ ಗಳ ಪ್ರಭಾವ,, ಅನುವಂಶಿಕ ಅಂಶಗಳು, ವೈದ್ಯಕೀಯ ಪರಿಸ್ಥಿತಿಗಳು, ಔಷಧಿಗಳು ಮತ್ತು ಇಂದಿನ ಆಧುನಿಕ ಜೀವನ ಶೈಲಿಯಲ್ಲಾದ ಬದಲಾವಣೆಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು.ಈ ಬಗ್ಗೆ ಆಯುರ್ವೇದ ವೈದ್ಯೆ ಡಾ.ಜ್ಯೋತಿ ಅವರು ಬರೆದಿರುವ ಮಾಹಿತಿ ಇಲ್ಲಿದೆ.

ಇಂದಿನ ಆಧುನಿಕ ಯುಗದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆ ಕೂದಲು ಉದುರುವಿಕೆ .ಈ ಸಮಸ್ಯೆಗೆ ಹಲವು ಕಾರಣಗಳಿವೆ. ಹಾರ್ಮೋನ್ ಗಳ ಪ್ರಭಾವ,, ಅನುವಂಶಿಕ ಅಂಶಗಳು, ವೈದ್ಯಕೀಯ ಪರಿಸ್ಥಿತಿಗಳು, ಔಷಧಿಗಳು ಮತ್ತು ಇಂದಿನ ಆಧುನಿಕ ಜೀವನ ಶೈಲಿಯಲ್ಲಾದ ಬದಲಾವಣೆಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಪುರುಷರಲ್ಲಿ ಕೂದಲು ಉದುರುವಿಕೆಯ ಮಾದರಿಯನ್ನು ಬೋಳು ಅಥವಾ ಆಂಡ್ರೋಜನಿಟಿಕ್ ಆಲೋಫೆಶಿಯಾ ಎಂದು ಕರೆಯಲಾಗುತ್ತದೆ ಇದಕ್ಕೆ ಟೆಸ್ಟೊ ಸ್ಟೀರೋನ್ನ ಉಪ ಉತ್ಪನ್ನವಾದ ಡೈಹೈಡ್ರೋಟೆಸ್ಟೋಸ್ಟಿರಾನ್ (DHT) ಹಾರ್ಮೋನ್ ಕಾರಣ. ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಆಂಡ್ರೋಜನ್ ಹಾರ್ಮೋನಿನ ಕಾರಣವಾಗಿರುತ್ತದೆ.

Advertisement
Advertisement

ಅಲೋಪೇಶಿಯ ಏರಿಯಾಟ #Alopeciaareata ಇದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅನುವಂಶಿಕ ಹಾಗೂ ಪರಿಸರ ಅಂಶಗಳ ಪ್ರಭಾವದಿಂದ ಉಂಟಾಗುತ್ತದೆ. ಟೆಲೋಜಿನ್ ಎಫ್ಲುವಿಯಮ್  ಇದು ಕೂದಲು ಉದುರುವಿಕೆಯ ತಾತ್ಕಾಲಿಕ ರೂಪವಾಗಿದ್ದು, ದೈಹಿಕ ಅಥವಾ ಮಾನಸಿಕ ಒತ್ತಡ, ಶಸ್ತ್ರ ಚಿಕಿತ್ಸೆ,ಪ್ರಮುಖ ಹಾರ್ಮೋನ್ ಗಳ ಬದಲಾವಣೆಗಳಿಂದ (ಹೆರಿಗೆ, ಋತುಚಕ್ರ ಸಮಸ್ಯೆ ) ಪೌಷ್ಟಿಕಾಂಶಗಳ ಕೊರತೆಗಳು ಹಾಗೂ ಕೆಲವು ಔಷಧಿಗಳು ಇವುಗಳಿಂದ ಕೂದಲು ಉದುರುವಿಕೆ ಹೆಚ್ಚಾಗುವುದು ಸಾಮಾನ್ಯವಾಗಿ ಕೂದಲು ಬೆಳವಣಿಗೆ ಚಕ್ರವನ್ನು ಅಡ್ಡಿಪಡಿಸುತ್ತದೆ. ಗಮನಾರ್ಹ ಸಂಖ್ಯೆಯ ಕೂದಲ ಕಿರುಚೀಲಗಳನ್ನುತಾತ್ಕಾಲಿಕವಾಗಿ ವಿಶ್ರಾಂತಿ ಹಂತಕ್ಕೆ ತಳ್ಳುತ್ತದೆ.

Advertisement
Advertisement

ವೈದ್ಯಕೀಯ ಪರಿಸ್ಥಿತಿಗಳು – ಹೈಪೋಥೈರಾಯಿಡಿಸಮ್ ಮತ್ತು ಹೈಪರ್ ಥೈರೊಯ್ಡಿಸಮ್ ಸಮಸ್ಯೆಗಳು, ನೆತ್ತಿಯ ಸೋಂಕುಗಳು(Ringworms ), ಸ್ವಯಂ ನಿರೋಧಕ ಕಾಯಿಲೆಗಳು(autoimmune disorders ), ಕೆಲವು ಚರ್ಮದ ಅಸ್ವಸ್ಥತೆಗಳು(psoriasisis/seboric dermatitis ),ಕೆಲವು ರೀತಿಯ ಕ್ಯಾನ್ಸರ್, ಕೀಮೊಥೆರಪಿ, ವಿಕಿರಣ ಚಿಕಿತ್ಸೆ, ಮತ್ತು ಕೆಲವು ಔಷಧಿಗಳಿಂದ ಅಡ್ಡ ಪರಿಣಾಮವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು

ಪೌಷ್ಟಿಕಾಂಶದ ಕೊರತೆಗಳು – ಕಬ್ಬಿಣ,ಸತು, ಬಯೋಟಿನ್, ವಿಟಮಿನ್ಸ್,ಮತ್ತು ಪ್ರೋಟೀನ್ ಗಳoತ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯ ಮತ್ತು ಕೂದಲ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

Advertisement

ಕೇಶ ವಿನ್ಯಾಸದ ಅಭ್ಯಾಸಗಳು – ಬಿಗಿಯಾದ ಕೂದಲ ವಿನ್ಯಾಸದಿಂದ, ರಾಸಾಯನಿಕ ಚಿಕಿತ್ಸೆಗಳು(strightning ),ಕಠಿಣ ಕೂದಲ ರಕ್ಷಣೆಯ ಉತ್ಪನ್ನಗಳು, ಕೂದಲನ್ನು ಹಾನಿಗೊಳಿಸಿ ಕೂದಲ ಉದುರುವಿಕೆಗೆ ಕಾರಣವಾಗುವುದು.
* ಮಾನಸಿಕ ಹಾಗೂ ಭಾವನಾತ್ಮಕ ಒತ್ತಡಗಳಿಂದ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚುವುದು.
ಚಿಕಿತ್ಸೆ ಮತ್ತು ತಡೆಗಟ್ಟುವಿಕೆ * ಕೂದಲು ಉದುರುವಿಕೆಯಲ್ಲಿ ನಿರ್ದಿಷ್ಟ ಕಾರಣವನ್ನು ಅರ್ಥ ಮಾಡಿಕೊಂಡು ಸರಿಯಾದ ಚಿಕಿತ್ಸೆ ಮತ್ತು ನಿರ್ವಹಣೆ ಮಾಡುವುದು ಉತ್ತಮ.
ಆರೋಗ್ಯಕರ ಕೂದಲ ಬೆಳವಣಿಗೆಗೆ ಆಯುರ್ವೇದ ಪದ್ಧತಿಯಲ್ಲಿ ಕೆಲವೊಂದು ಚಿಕಿತ್ಸಾ ವಿಧಾನಗಳನ್ನು ವಿವರಿಸಲಾಗಿದೆ
* ನೆತ್ತಿಯ ಮಸಾಜ್* :- ನೆತ್ತಿಯನ್ನು ನಿಯಮಿತವಾಗಿ ಮಸಾಜ್ ಮಾಡುವುದರಿಂದ ಕೂದಲಿನ ಕಿರುಚೀಲ(hair folicles )ಗಳಿಗೆ ರಕ್ತದ ಹರಿವನ್ನು ಉತ್ತೇಜಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ಹಾಗೂ ಶುದ್ಧ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ ಕಡಿಮೆ ಆಗುವುದು
*ಅಲೋವೆರಾ (ಕುಮಾರಿ ನಿರ್ಯಾಸ ) ಇದನ್ನು ನೇರವಾಗಿ ನೆತ್ತಿಗೆ ಹಾಕಿ ಒಂದು ಗಂಟೆ ನಂತರ ವಾಶ್ ಮಾಡುವುದರಿಂದ ನೆತ್ತಿಯು ಆರೋಗ್ಯಕರವಾಗಿ ಕೂದಲು ಉದುರುವುದನ್ನು ಕಡಿಮೆ ಮಾಡುವುದು.
*ಈರುಳ್ಳಿರಸ ಸಲ್ಪರ್ ಸಂಯುಕ್ತಗಳನ್ನು ಹೊಂದಿದ್ದು ಕೂದಲ ಬೆಳವಣಿಗೆಗೆ ಸಹಾಯಕಾರಿಯಾಗಿದೆ

ಪಂಚಕರ್ಮ ಚಿಕಿತ್ಸೆ
* ಶಿರೋಧಾರ:- ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ಶಿರೋಧಾರ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಕೂದಲನ್ನು ಸಂರಕ್ಷಿಸಬಹುದು
*ನಸ್ಯ :- ಆಯುರ್ವೇದ ಔಷಧಿಗಳಿಂದ ಮೂಗಿನ ಮುಖಾಂತರ ಮಾಡುವಂತಹ ಈ ಚಿಕಿತ್ಸೆಯಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು
* ಹೇರ್ ಪ್ಯಾಕ್:- ಆಯುರ್ವೇದ ಗಿಡಮೂಲಿಕೆಗಳಿಂದ ನೆತ್ತಿಗೂ ಹಾಗೂ ಕೂದಲಿಗೆ ಲೇಪನ ಮಾಡುವಂತದ್ದು
:-ಪ್ರಚ್ಚನ್ನ ಕರ್ಮ.. ಇದು Hair root treatment ತ್ರಿಫಲ ಕಷಾಯದಲ್ಲಿ ಕೂದಲನ್ನು ತೊಳೆದು ವೈದ್ಯರ ಸಮ್ಮುಖದಲ್ಲಿ ಮಾಡುವ ಚಿಕಿತ್ಸಾ ವಿಧಾನ
* ಸಮತೋಲಿತ ಆಹಾರ :- ವಿಟಮಿನ್ ಪ್ರೋಟೀನ್ಸ್ ಮಿನರಲ್ಸ್ ಕ್ಯಾಲ್ಸಿಯಂ ಕಬ್ಬಿಣಅಂಶ ಅಧಿಕವಾಗಿರುವ ಆಹಾರಗಳ ಸೇವನೆ
* ಬಿಗಿಯಾದ ಕೇಶವಿನ್ಯಾಸಗಳು, ರಾಸಾಯನಿಕ ಚಿಕಿತ್ಸೆಗಳನ್ನು ಉಪಯೋಗಿಸದೆ ಇರುವುದು
* ಧ್ಯಾನ ಪ್ರಾಣಾಯಾಮ ಯೋಗಾಸನ ಹಾಗೂ ನಾವು ಆನಂದಿಸುವ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ನಿರ್ವಹಣೆ ಮೂಲಕ ಕೂದಲು ಉದುರುವುದು ತಡೆಗಟ್ಟಬಹುದು
ಆರೋಗ್ಯಕರ ಆಹಾರ ಪದ್ಧತಿ ನೈಸರ್ಗಿಕ ಕೂದಲ ರಕ್ಷಣೆ ಉತ್ತಮ ವ್ಯಾಯಾಮ ಧ್ಯಾನ ಪ್ರಾಣಾಯಮ ಯೋಗಾಸನ ಮಾಡುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ನಿಯಮಿತವಾಗಿ ನಿಮ್ಮ ಕೂದಲು ಮತ್ತು ನಿತ್ಯ ಆರೋಗ್ಯವನ್ನು ವೈದ್ಯರೊಂದಿಗೆ ತಪಾಸಣೆ ಮಾಡಿ ಕೂದಲು ಉದುರುವಿಕೆಯ ಕಾರಣವನ್ನು ಅರಿತು ಉತ್ತಮವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ.

Advertisement

ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಇದು ಡಿಸೆಂಬರ್ ತಿಂಗಳು ಅಷ್ಟೇ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ತಾಪ, ಉರಿ ಬಿಸಿಲು ಹೇಗಿರಬಹುದು?
December 8, 2023
3:39 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಶ್ರೀರಾಮನ ಪೌರೋಹಿತ್ಯ ಸೇವೆಗೆ ಆಯ್ಕೆಯಾದ ಸಕಲ ವೇದ ಪಾರಂಗತ “ಮೋಹಿತ್ ಪಾಂಡೆ” : ಯಾರು ಈತ..? ಎಲ್ಲಿಯ ಹುಡುಗ..?
December 8, 2023
3:18 PM
by: The Rural Mirror ಸುದ್ದಿಜಾಲ
ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ… : ಹಾಗಾದರೆ ಸಕ್ಕರೆ ಕಾಯಿಲೆ ಬರಲು ಕಾರಣವೇನು..?
December 8, 2023
3:01 PM
by: The Rural Mirror ಸುದ್ದಿಜಾಲ
ಮುಳಿಯ ಜ್ಯುವೆಲ್ಸ್‌ ಸಂಸ್ಥಾಪಕರ ದಿನಾಚರಣೆ | ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ |
December 8, 2023
2:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror