ಹೆಚ್ಚು ಹಾಲು(Milk) ನೀಡದ ಮಲೆನಾಡು ಗಿಡ್ಡ ತಳಿಯಂತಹ(Desi cow) ಹಸುಗಳು ಇವತ್ತಿನ ಲೆಕ್ಕಾಚಾರದ ವ್ಯವಹಾರಿಕ ಜಗತ್ತಿನಲ್ಲಿ ಅನುತ್ಪಾದಕ ಜೀವಿಗಳಾಗಿವೆ. ಈ ಹಸುಗಳು ಒಂದೊಮ್ಮೆ ಮೇಯ್ದು ಸ್ವಾವಲಂಬನೆಯಿಂದ(self-reliance) ಬದುಕುತ್ತಿದ್ದವು. ಇದೀಗ ಮನುಷ್ಯನ(Human) “ಒತ್ತುವರಿ ರೋಗಕ್ಕೆ'(Occupy) ಗೋವುಗಳ ಆಹಾರದ ಮೂಲವಾದ ಗೋಮಾಳ(Pasture)ನಾಶವಾಯಿತು. ಮೇಯ್ದು ಬರುವ ಹಸುಗಳಿಗೀಗ ಮೇವಿನ ತಾಣ ಗೋಮಾಳ ಇಲ್ಲ…!! ಗದ್ದೆ ಮಾಡೋಲ್ಲ ಅಥವಾ ಗದ್ದೆ ಗಳೆಲ್ಲಾ ತೋಟಗಳಾಗಿವೆ…!! ಮಲೆನಾಡಿನ ಗುಡ್ಡಗಳಲ್ಲಿ ಅಕೇಶಿಯ ರಾಕ್ಷಸ ನೆಲೆಸಿದ್ದಾನೆ. ಹಾಗಾದರೆ ಈ ದೇಸಿ ಹಸುಗಳಿಗೆ ಮೇವು ಎಲ್ಲಿದೆ…?
ಇವತ್ತಿನ ಮುನ್ನೂರು-ನಾಲ್ಕು ನೂರು ರೂಪಾಯಿಯ ಒಣ ಹುಲ್ಲು, ಕೆಜಿ ಹಿಂಡಿಗೆ ನಲವತ್ತು ರೂಪಾಯಿ, ಕಾರ್ಮಿಕರ ಸಂಬಳ ಎಂಟನೂರು ರೂಪಾಯಿ. ವೈದ್ಯಕೀಯ ವೆಚ್ಚ. ಕರೆಂಟು ನೀರು ಇತರೆ ಸವಲತ್ತುಗಳನ್ನು ಒದಗಿಸಿ ಈ ದೇಸಿ ಹಸುಗಳ ಸಾಕುವ ನಮ್ಮಂಥವರಿಗೆ ಈ ದೇಸಿ ಹಸುಗಳ “ಸಗಣಿ ಗೋಮೂತ್ರ” ವೇ ಅವುಗಳ ನಿರ್ವಹಣೆ ಗೆ ಕಿಂಚಿತ್ತು ಆದಾಯ. ದುರಂತ ಏನೆಂದರೆ ಈ ನಿಟ್ಟಿನಲ್ಲಿ ಸಗಣಿ ಗೋಮೂತ್ರಗಳ ಮೌಲ್ಯವರ್ಧನೆಯ ನಮ್ಮಂಥ ಗೋಪಾಲಕರ ಪ್ರಯತ್ನಕ್ಕೆ ರೈತ ಬಾಂಧವರ ಪ್ರೋತ್ಸಾಹ ತೀರಾ ನೀರಸ…!?
ಬೆಲೆಯೇ ಇಲ್ಲದೇ ಸಕ್ಕರೆ ಕಾರ್ಖಾನೆಯವರು ಇಟ್ಟಿಗೆ ಮಾಡುತ್ತಿದ್ದ ಫ್ಲೈ ಆಶ್ ಬೂದಿಯನ್ನು ಅದ್ಯಾರೋ ಕೃಷಿ ವಿಜ್ಞಾನಿಗಳು ಗೊಬ್ಬರವಾಗಿ ಬಳಸಬಹುದು ಎಂದು ಕಂಡು ಹಿಡಿದರು. ಆ ನಂತರ ಸಕ್ಕರೆ ಕಾರ್ಖಾನೆಯವರು ಕಿಲೋಗೆ ಒಂದೋ ಎರಡೋ ರೂಪಾಯಿಗೆ ಗೊಬ್ಬರ ತಯಾರಿಕಾ ಕಂಪನಿಯವರಿಗೆ ಬಣ್ಣ ಬಣ್ಣದ ಚೀಲದಲ್ಲಿ ಆ ಕಂಪನಿಯವರು ಮುದ್ರಿಸಿಕೊಟ್ಟ ಹೆಸರು ಮತ್ತು ಪೋಷಕಾಂಶಗಳ ಪಟ್ಟಿಯನ್ನು ಬೆನ್ನಿಗಂಟಿಸಿಕೊಂಡು ಮಾರುಕಟ್ಟೆಗೆ ಕೊಡುತ್ತಿದ್ದಾರೆ.
ನಮ್ಮ ರೈತರು ಬೆಲೆಯೇ ಇಲ್ಲದ ಬೂದಿಯನ್ನು ಎಂಟು ರೂಪಾಯಿ ಕೊಟ್ಟು ಖರೀದಿಸಿ ಬಳಸುತ್ತಾರೆ. ಅತ್ಯಂತ ನೋವಿನ ವಿಷಾದದ ಸಂಗತಿ ಎಂದರೆ ಕಿಲೋಗೆ “ಹದಿನೆಂಟು ರೂಪಾಯಿ” ಯ ಸಗಣಿ ಗೋಮೂತ್ರದ ಆಧಾರದ ಮೌಲ್ಯವರ್ಧಿತ ಗೊಬ್ಬರವನ್ನು ” ಕಿಲೋಗೆ ಹನ್ನೆರಡು ರೂಪಾಯಿಗೆ” ಮಾರಾಟ ಮಾಡುತ್ತೇವೆಂದರೆ ರೈತರು ಸಗಣಿ ಗೊಬ್ಬರ ಕೊಂಡು ಪ್ರೋತ್ಸಾಹಿಸಲು ಮನಸು ಮಾಡುತ್ತಿಲ್ಲ...!! ಹೀಗಾದರೆ ಕಡಿಮೆ ಹಾಲಿನ ಇಳುವರಿಯ ದೇಸಿ ಹಸುಗಳು ಹೇಗೆ ಉಳಿಯಲು ಸಾಧ್ಯ ?
ಗೋವಿನ ಗೊಬ್ಬರ ನ್ಯಾಯಯುತ ಬೆಲೆಗೆ ಖರೀದಿ ಯಾದರೆ ಮಾತ್ರ ಗೋಪಾಲಕರು ಗೋವು ಸಾಕಬಲ್ಲರು. ಗೋವು ಉಳಿಸಲು ಗೋ ಪ್ರೇಮಿಗಳು ಗೋಶಾಲೆಗೆ ದೇಣಿಗೆ ನೀಡುವುದಕ್ಕಿಂತ ಗವ್ಯೋತ್ಪನ್ನಗಳಿಗೆ ನ್ಯಾಯಯುತ ಬೆಲೆ ಕೊಟ್ಟು ಖರೀದಿಸಿದರೆ ಗೋವು ತಾನಾಗೇ ಗೋಪಾಲಕರ ಕೊಟ್ಟಿಗೆಯಲ್ಲಿ ಉಳಿತದೆ…
ಕಳೆದ ಬಾರಿ ಒಂದೇ ಒಂದು ಜಾನುವಾರು ಸಾಕದ ದೊಡ್ಡ ಜಮೀನ್ದಾರರೊಬ್ಬರ ಬಳಿ ನಾನು ” ನನ್ನ ಬಳಿ ಸಗಣಿ ಗೊಬ್ಬರ ಇದೆ ಖರೀದಿಸಿ “… ಎಂದರೆ ಅವರು ನಿಮ್ಮ ಮನೆಗೆ ಬಂದು ಗೊಬ್ಬರ ನೋಡ್ತೀನಿ ಎಂದರು. ಅವರು ಖಾಯಂ ಆಗಿ ಕೊಳ್ಳುವ ಗೊಬ್ಬರದಲ್ಲಿ ಸಗಣಿ ಅಂಶವೇ ಇರೋಲ್ಲ. ನಮ್ಮ ಮನೆಯ “ಅದ್ಭುತವಾದ ಗೊಬ್ಬರನ” ನ್ಯಾಯಯುತ ಬೆಲೆಗೆ ಕೊಂಡು ಗೋ ಉಳಿಸಲು ಅವರಿಗೆ ಮನಸಿಲ್ಲ…!! ಇದು ನಮ್ಮ ಕೆಲ ರೈತರ ಮನಸ್ಥಿತಿ. ಅವರಿಗೆ ಗೊಬ್ಬರ ಬೇಕು. ಅದು ಅತ್ಯಂತ “ಕನಿಷ್ಠ ಬೆಲೆಗೆ ಬೇಕು” ಎಂಬ ಅಪೇಕ್ಷೆ ಅವರದ್ದು. ಹೀಗಾದರೆ ಗೋವುಗಳ ಅಮೂಲ್ಯ ಅತ್ಯಂತ ಪೋಷಕಾಂಶಯುಕ್ತ ಸಗಣಿ ಗೊಬ್ಬರಕ್ಕೆ ಬೆಲೆ ಕೊಡುವ ಮನಸು ಮಾಡದಿದ್ದರೆ ಗೋಪಾಲಕರಿಗೆ ಗೋಪಾಲನೆಗೆ “ಚೈತನ್ಯ'” ಎಲ್ಲಿಂದ ಬರುತ್ತದೆ…?
ನಮ್ಮ ಸುತ್ತ ಮುತ್ತಲಿನ ರೈತರು ಮನಸು ಮಾಡಿದರೆ ಈಗ ಅಳಿದುಳಿದ ಗೋವುಗಳು ಮೇವುಂಡು ನೆಮ್ಮದಿಯಾಗಿರುತ್ತವೆ. ಜನ “ಪೊಕ್ಕು ಸತ್ವ ಪೋಷಕಾಂಶಗಳು ಇಲ್ಲದ ಪ್ರೆಸ್ ಮಡ್ ಗೊಬ್ಬರ ” ಕೊಳ್ಳುವುದನ್ನ ಕಡಿಮೆ ಮಾಡಿ ಸ್ಥಳೀಯ ದೇಸಿ ಹಸುಗಳ ಸಾಕುವ ಗೋಪಾಲಕರ ಬಳಿ ಕೊಟ್ಟಿಗೆ ಗೊಬ್ಬರವನ್ನು ಉತ್ತಮ ಬೆಲೆಗೆ ಕೊಂಡರೆ ದೇಸಿ ತಳಿ ತನ್ನಂತಾನೇ ಉಳಿದು ಕೊಳ್ಳುತ್ತದೆ. ನಿಜಕ್ಕೂ ಇವತ್ತು ಕಡಿಮೆ ಹಾಲಿನಿಳುವರಿಯ ದೇಸಿ ಹಸು ಮಲೆನಾಡು ಗಿಡ್ಡ ತಳಿ ಹಸುಗಳು ರಸ್ತೆಯ ಮೇಲೆ ಜೋಲು ಮುಖ ಹಾಕಿಕೊಂಡು ಹಸಿವಿನಿಂದ ಮೇವು ಹುಡುಕಿಕೊಂಡು ಹೋಗುವುದನ್ನು ನೋಡಿದರೆ ಅತೀವ ಸಂಕಟವಾಗುತ್ತದೆ. ಹೆಚ್ಚಿನ ಯಾವ ದೇಸಿ ಹಸುಗಳೂ ಸಟಾಸುಟಿ ಯಲ್ಲಿರುವುದಿಲ್ಲ.
ಸ್ವಾಭಾವಿಕ ಮೇವಿಲ್ಲದೆ ಗೋಪಾಲಕನೂ ದುಡ್ಡು ಕೊಟ್ಟು ಹುಲ್ಲು ತಂದು ಅವಕ್ಕೆ ಹಾಕದೇ ಅವು ಅರೆ ಹೊಟ್ಟೆಯಲ್ಲಿ ಸೋತಗಂಡು ಕಡೆಯ ದಿನಗಳನ್ನು ಎಣಿಸುತ್ತಾ ಮುಂದೆ ಎಲ್ಲಾದರೂ ಹಸಿರು ಮೇವು ಸಿಗುತ್ತದಾ ಎಂಬ ಆಶೆಯಲ್ಲಿ ಮುಂದೆ ಸಾಗುತ್ತವೆ. ದೇಸಿ ತಳಿ ಹಸುಗಳನ್ನು ಸರ್ಕಾರ ಉಳಿಸುವುದಿಲ್ಲ. ಸಹೃದಯಿಗಳು ಅಂತಃಕರಣ ದಿಂದ ನೋಡಿದರೆ ಖಂಡಿತವಾಗಿಯೂ ಗೋವು ಉಳಿಸಬಹುದು. ದಯಮಾಡಿ ದೇಸಿ ಹಸುಗಳ ಗೋಪಾಲಕರ ಗವ್ಯೋತ್ಪನ್ನ ವನ್ನು ನ್ಯಾಯಯುತ ಬೆಲೆಗೆ ಕೊಂಡು ಪ್ರೋತ್ಸಾಹಿಸಿ ಗೋವು ಉಳಿಸಿ ಎಂದು ಎಲ್ಲ ರೈತ ಬಾಂಧವರಲ್ಲಿ ಬೇಡಿಕೊಳ್ತೇನೆ.
Cows like the Desi cow, which do not give much milk, are unproductive creatures in today’s calculated business world. These cows once grazed and lived self-reliance. Now the human’s “Occupy disease” has destroyed the pasture as the source of food for the cows. Now there is no pasture for the grazing cows… Don’t make fields or all the fields are gardens… Acacia demon resides in the hills of the highlands. So where is the fodder for these desi cows…?
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…