ದಿನದಿಂದ ದಿನಕ್ಕೆ ಭೂಮಿ(Earth) ಕಾದ ಬಾಣಲೆಯಂತಾಗುತ್ತಿದೆ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯ(Climate Change). ಕಳೆದ ಮುಂಗಾರು ಕೈ ಕೊಟ್ಟ ಹಿನ್ನೆಲೆ ಕಳೆದ ವರ್ಷವನ್ನು ಭೂಮಿಯ ಅತ್ಯಂತ ಶಾಖದ ವರ್ಷ ಎಂದು ಕೂಡ ದಾಖಲಾಗಿದೆ. ಪರಿಸರವನ್ನು ಕಾಪಾಡಿ, ಮರಗಳನ್ನು ಹೆಚ್ಚು ಹೆಚ್ಚು ನೆಡುವ ಕಾರ್ಯ ಆಗಬೇಕಿದೆ. ಹಾಗೆ ಭೂಮಿಯನ್ನು ತಂಪಾಗಿಸುವ ನಿಟ್ಟಿನಲ್ಲಿ ಪರಿಹಾರದ ಕ್ರಮಗಳ ಕುರಿತು ಸಂಶೋಧಕರು ನಿರಂತರ ಸಂಶೋಧನಾ(Research) ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಡುವೆ ಭೂಮಿಯ ಹವಾಮಾನವನ್ನು ತಂಪು(cool Earths climate) ಮಾಡಲು ಸಹಾಯ ಮಾಡುವ ಹೊಸ ಪಾಚಿಯೊಂದನ್ನು(Algae) ಅಂತಾರಾಷ್ಟ್ರೀಯ ಸಂಶೋಧಕರ ತಂಡ ಪತ್ತೆ ಮಾಡಿದೆ.
ಸಾಗರದಾಳದಲ್ಲಿರುವ(ocean) ಈ ಆಲ್ಗೆಗಳು ಭೂಮಿಯ ಹವಾಮಾನವನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ಬೃಹತ್ ಪ್ರಮಾಣದಲ್ಲಿ ಸಂಯುಕ್ತವನ್ನು ಉತ್ಪಾದಿಸುತ್ತಿದ್ದು, ಭೂಮಿ ತಂಪಾಗಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ಹೊಂದಿದೆ ಎಂದಿದ್ದಾರೆ ವಿಜ್ಞಾನಿಗಳು. ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ (ಯುಇಎ) ಮತ್ತು ಓಷನ್ ಯೂನಿವರ್ಸಿಟಿ ಆಫ್ ಚೀನಾದ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಈ ಪಾಚಿಗಳು ರೂಪುಗೊಳ್ಳುವಾಗ ಪೆಲಾಗೋಫೈಸಿ ಪಾಚಿಗಳನ್ನು ಡೈಮಿಥೈಲ್ಸಲ್ಫೋನಿಯೋಪ್ರೊಪಿಯೋನೇಟ್ (ಡಿಎಂಎಸ್ಪಿ) ಎಂಬ ಸಂಯುಕ್ತವನ್ನು ಹೆಚ್ಚಾಗಿ ಉತ್ತಾದಿಸುತ್ತದೆ. ಇದು ಭೂಮಿ ತಂಪಾಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ
ಭೂಮಿ ಮೇಲೆ ಪೆಲಗೊಪೂಸಿಯಾ ಎಂಬ ಪಾಚಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದರೆ, ಇವು ಡಿಎಂಎಸ್ಪಿಯ ಪ್ರಮುಖ ಉತ್ಪಾದಕರು ಎಂದು ಹಿಂದೆ ತಿಳಿದಿರಲಿಲ್ಲ ಎಂದು ಯುಇಎ ಬಯೋಲಾಜಿಕಲ್ ಸೈನ್ಸಸ್‌ನ ಪ್ರೊಫೆಸರ್ ಜೊನಾಥನ್ ಟಾಡ್ ತಿಳಿಸಿದ್ದಾರೆ. ಈ ಆವಿಷ್ಕಾರವೂ ಉತ್ಸಾಹ ದಾಯಕವಾಗಿದ್ದು, ಡಿಎಂಎಸ್ಪಿ ಹೇರಳವಾದ ಆಂಟಿಸ್ಟ್ರೆಸ್ ಸಂಯುಕ್ತವಾಗಿದೆ. ಇದು ಸೂಕ್ಷ್ಮಾಣುಜೀವಿಗಳಿಗೆ ಆಹಾರ ಮೂಲವಾಗಿದ್ದು, ಹವಾಮಾನ ತಂಪಾಗಿಸುವ ಅನಿಲಗಳ ಪ್ರಮುಖ ಮೂಲವಾಗಿದೆ. ಡಿಎಂಎಸ್ಪಿ ಡಿಎಂಎಸ್ ಎನ್ನುವ ಹವಾಮಾನದ ಸಕ್ರಿಯ ಅನಿಲದ ಮೂಲವಾಗಿದೆ. ಇದುನ್ನು ಕಡಲ ತೀರದ ವಾಸನೆ ಎಂದು ಕರೆಯಲಾಗುವುದು.
ಈ ಅಧ್ಯಯನವನ್ನು ನೇಚರ್ ಮೈಕ್ರೋಬಯಾಲಜಿಯಲ್ಲಿ ಪ್ರಕಟಿಸಲಾಗಿದೆ. ಡಿಎಂಎಸ್ಪಿ ಉತ್ಪಾದಕತೆ ಮತ್ತು ಡಿಎಂಎಸ್ ಬಿಡುಗಡೆಯು ಊಹಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಜಾಗತಿಕ ಹವಾಮಾನ ನಿಯಂತ್ರಿಸುವಲ್ಲಿ ಸೂಕ್ಷ್ಮ ಜೀವಿಗಳ ಪಾತ್ರವನ್ನು ತಿಳಿಸಿದೆ. ಡಿಎಂಎಸ್ ಆಕ್ಸಿಡೀಕರಣ ಉತ್ಪನ್ನಗಳು ಭೂಮಿಯಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಮೋಡಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಪರಿಣಾಮಕಾರಿಯಾಗಿ ಗ್ರಹವನ್ನು ತಂಪಾಗಿಸುತ್ತದೆ. ಈ ಅಲ್ಗೆಯ ನೈಸರ್ಗಿಕ ಪ್ರಕ್ರಿಯೆಯು ಭೂಮಿಯ ಹವಾಮಾನವನ್ನು ನಿಯಂತ್ರಿಸಲು ಅತ್ಯಗತ್ಯವಾಗಿದೆ. ಜಾಗತಿಕ ಸಲ್ಫರ್ ಚಕ್ರಕ್ಕೆ ಅವಶ್ಯವಾಗಿದೆ. ಸಾಗರಗಳಿಂದ ಸಲ್ಫರ್ ಅನ್ನು ಭೂಮಿಗೆ ಹಿಂದಿರುಗಿಸುವ ಮುಖ್ಯ ಮಾರ್ಗವನ್ನು ಇದು ತಿಳಿಸುತ್ತದೆ.
Source : IANS
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…