Advertisement
MIRROR FOCUS

ರಾಜ್ಯಾದ್ಯಂತ ಭೀಕರ ಬರಕ್ಕೆ ರೈತರು ಕಂಗಾಲು | ಮಳೆಗಾಗಿ ಕತ್ತೆಗಳ‌ ಅದ್ಧೂರಿ ಮದುವೆ

Share

ಊರೆಲ್ಲಾ ದಸರಾ(dasara)ಹಬ್ಬದ ಸಂಭ್ರಮ. ಅದರ ಜೊತೆಗೆ ಮದುವೆ(Marriage) ಮೆರವಣಿಗೆ ಜೋರಾಗಿತ್ತು. ಊರ ಮಂದಿಯೆಲ್ಲಾ  ಮದುವೆಗೆ ಆಗಮಿಸಿ ಜೋಡಿಗಳನ್ನು ಹರಸಿದ್ರು. ಸಾಂಪ್ರದಾಯಿಕವಾಗಿ ನಡೆದ ಅದ್ಧೂರಿ‌ ಮದುವೆಯಲ್ಲಿ, ಇಡೀ ಗ್ರಾಮಸ್ಥರೇ ಸೇರಿದ್ದರು. ಆದರೆ ಈ ಅದ್ಧೂರಿ ಮದುವೆಯಲ್ಲಿ ಇದ್ದ  ಈ ಜೋಡಿಗಳು ಮಾತ್ರ ವಿಶೇಷ. ಈ ಜೋಡಿಗಳ ಮದುವೆ ಮಾಡಿ ಅನ್ನದಾತರು‌ ಮಳೆ(rain)ಗಾಗಿ ಪ್ರಾರ್ಥನೆ‌ ಮಾಡಿದರು.

ಮಳೆ ಇಲ್ಲದೇ ರಾಜ್ಯದಲ್ಲಿ ಭೀಕರ ಬರ(drought) ಆವರಿಸಿದೆ. ಗದಗ(Gadag) ತಾಲೂಕಿನ ತಿಮ್ಮಾಪೂರ ಗ್ರಾಮದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬಿತ್ತನೆ‌ ಮಾಡಿದ ಎಲ್ಲ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಕಷ್ಟಪಟ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಹೀಗಾಗಿ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಈಗಲಾದ್ರೂ ಮಳೆರಾಯನ ಕೃಪೆಗಾಗಿ ಕಾಯುತ್ತಿದ್ದಾರೆ. ಮಳೆಯಾದ್ರು ಹಿಂಗಾರು ಬೆಳೆಯಾದ್ರೂ ಬರುತ್ತೆ. ಬದುಕಿನ ಬಂಡಿ ಸಾಗುತ್ತೆ ಅಂತ ಪರಿತಪಿಸುತ್ತಿದ್ದಾರೆ.

ಕತ್ತೆಗಳ‌ ಅದ್ಧೂರಿ ಮದುವೆ, ಮಳೆಗಾಗಿ ರೈತರ ಪ್ರಾರ್ಥನೆ ದಸರಾ ಹಬ್ಬದ ಪ್ರಯುಕ್ತ ತಿಮ್ಮಾಪೂರ ಗ್ರಾಮದ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಇಂದು ಕತ್ತೆಗಳ ಮದುವೆ ಇಡೀ ರೈತ ಸಮೂಹದ ಕುಟುಂಬಸ್ಥರು ಸೇರಿ ಅದ್ದೂರಿಯಾಗಿ ಮದುವೆ ಮಾಡಿದರು. ಕತ್ತೆಗಳ ಮದುವೆ ಕಾಟಾಚಾರಕ್ಕೆ ಮಾಡಿಲ್ಲ. ಎಲ್ಲ ಮದುವೆಗಳಂತೆ ಶಿಸ್ತು, ಬದ್ಧ, ಸಾಂಪ್ರದಾಯಿಕವಾಗಿ ಮಾಡಲಾಯಿತು. ಮದುವೆಯ ಹಿನ್ನೆಲೆಯಲ್ಲಿ ಸಂಪ್ರದಾಯದ ಪ್ರಕಾರ ಮಹಿಳೆಯರು ಹೂಗಾರರ ಮನೆಯಿಂದ ಭಾಸಿಂಗ್ ತರಲಾಯಿತು.

ಕತ್ತೆಗಳಿಗೆ ಮೊದ್ಲು ಅರಿಶಿಣ ಶಾಸ್ತ್ರವನ್ನು ಮಾಡಿ ಸುರುಗಿ ನೀರನ್ನು ಹಾಕಲಾಯಿತು. ಬಳಿಕ ಎರಡು ಕತ್ತೆಗಳಿಗೆ ಶಂಗಾರ ಮಾಡಲಾಯಿತು. ಗಂಟಿಗೆ ಭಾಸಿಂಗ್ ಶಂಗಾರ ಮಾಡಿದ್ರೆ. ಹೆಣ್ಣು ಕತ್ತೆ ಹೂವಿನ ದಂಡಿ ಕಟ್ಟಿ ಶೃಂಗಾರ‌ ಮಾಡಿದ್ರು. ಬಳಿದ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ನೂರಾರು ಜನ್ರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ಮಾಡಿ ಅಕ್ಷತೆಯನ್ನು ಹಾಕುವುದರ ಮೂಲಕ ಕತ್ತೆಗಳಿಗೆ ಸಾಂಪ್ರದಾಯಕವಾಗಿ ಮದುವೆ ಮಾಡಲಾಯಿತು.

There is severe drought in the Karnataka state without rain. The situation in Thimmapura village of Gadag taluk is no different. All the crops sown have dried up without rain. The crop that was sown with hard debt has been destroyed. Thus the breadwinners are literally devastated. Even now they are waiting for the grace of Rainrayan. Even if it rains, it will grow. They are hoping that the cart of life will move on.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

9 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

10 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

11 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

20 hours ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

21 hours ago