ಬೆಳೆ ವಿಮೆ ಪರಿಹಾರದ ಬಗ್ಗೆ ರೈತರಿಂದ ದೂರು | ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಸಭೆ

November 5, 2025
6:51 AM

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್  ಬೆಳೆ ವಿಮೆಯಿಂದ ರೈತರಿಗೆ ಕನಿಷ್ಠ ಪರಿಹಾರ ದೊರಕುತ್ತಿರುವ ಕುರಿತು ರೈತರ ದೂರುಗಳ ಬಗ್ಗೆ ಉನ್ನತ ಮಟ್ಟದ ಸಭೆ ದೆಹಲಿಯಲ್ಲಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಪರಿಹಾರ ಸಂಬಂಧಿಸಿದಂತೆ ಸಾಕಷ್ಟು ದೂರುಗಳನ್ನು ನೀಡುತ್ತಿದ್ದಾರೆ. ಅವುಗಳನ್ನು ಆದ್ಯತೆ ಮೇಲೆ ಪರಿಹರಿಸಬೇಕಿದೆ. ಕೆಲವು ರೈತರು ಅತಿ ಕಡಿಮೆ ಪರಿಹಾರವನ್ನು ಪಡೆಯುತ್ತಿದ್ದಾರೆ. ಇವೆಲ್ಲ ಗಂಭೀರ ವಿಚಾರಗಳಾಗಿವೆ. ಇಂತಹ ಸಮಸ್ಯೆಗಳನ್ನು ಮುಂದುವರಿಯಲು ಬಿಡಬಾರದು ಎಂದರು. ಅಲ್ಲದೆ, ಇಂತಹ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ವಿಮಾ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು. ಬೆಳೆ ಪರಿಹಾರ ನಷ್ಟವನ್ನು ಸರಿಯಾದ ಪ್ರಮಾಣದಲ್ಲಿ ಮಾರ್ಗಸೂಚಿಗೆ ಅನುಗುಣವಾಗಿ ನಿಗದಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕೆಲವು ರಾಜ್ಯಗಳಲ್ಲಿ ರೈತರಿಗೆ ಸಬ್ಸಿಡಿ ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ ಸಚಿವರು, ಎಲ್ಲ ರಾಜ್ಯಗಳು ಸಮನ್ವಯದೊಂದಿಗೆ ಸಕಾಲದಲ್ಲಿ ತಮ್ಮ ಪಾಲಿನ ಅನುದಾನವನ್ನು ಠೇವಣಿ ಮಾಡಿದರೆ ರೈತರಿಗೆ ನಿಗದಿತ ಸಮಯದಲ್ಲಿ ಸಬ್ಸಿಡಿ ಬಿಡುಗಡೆಗೆ ಅನುಕೂಲವಾಗುತ್ತದೆ ಎಂದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?
October 3, 2026
10:46 AM
by: ದ ರೂರಲ್ ಮಿರರ್.ಕಾಂ
ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!
October 3, 2026
10:34 AM
by: ದ ರೂರಲ್ ಮಿರರ್.ಕಾಂ
ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌
October 3, 2026
10:00 AM
by: ದ ರೂರಲ್ ಮಿರರ್.ಕಾಂ
ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ
October 3, 2026
9:48 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror